ಕೊಪ್ಪ,ನಾಳೆ ಆಟೋ ಓಡಾಟ ಇಲ್ಲ,
ಕೊಪ್ಪ ಆಟೋ ಚಾಲಕ ದೀಪುರವರ, ಅನುಮಾನಸ್ಪದ ಸಾವು ಖಂಡಿಸಿ ಆಟೋ ಚಾಲಕರು ಹಾಗೂ ಮಾಲೀಕರು ನಾಳೆ(27/09/2022)ರಂದು, ಒಂದು ದಿನ ಅಂದರೆ ಮಂಗಳವಾರ ಯಾವುದೇ ಆಟೋಗಳು ರಸ್ತೆಗೆ ಇಳಿಯದೆ ಪ್ರತಿಭಟನೆ ಕೈಗೊಳ್ಳಲಾಗುವುದು. ಎಂದು ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷರು ತಿಳಿಸಿರುತ್ತಾರೆ.
ಆಗಸ್ಟ್ 19 ರಂದು ಕೊಪ್ಪ ನಗರದಲ್ಲಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಪ್ರದೀಪ್ ಮಾರ್ಗಮಧ್ಯದಲ್ಲಿ ಆಟೋ ನಿಲ್ಲಿಸಿ ನಾಪತ್ತೆಯಾಗಿದ್ದರು.
ಅವರ ಪತ್ತೆಗಾಗಿ ಕುಟುಂಬಸ್ಥರು, ಸ್ಥಳೀಯರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಎರಡು ದಿನಗಳ ಬಳಿಕ ಚೌಕಿ ಸ್ಮಶಾನ ಸಮೀಪದ ಮುಸುರೇಹಳ್ಳದಲ್ಲಿ ಪ್ರದೀಪ್ ಆವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು.
🖋 ಮಜೀದ್ ಕೊಪ್ಪ

Comments
Post a Comment