ಶೃಂಗೇರಿ:- ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಗನ್ನಾಥ್ ಅವರು ಅನಾರೋಗ್ಯದಿಂದಾಗಿ ಇಂದು ಕೊನೆಯುಸಿರೆಳೆದಿದ್ದಾರೆ
ಶೃಂಗೇರಿ:- ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಗನ್ನಾಥ್ ಅವರು ಅನಾರೋಗ್ಯದಿಂದಾಗಿ ಇಂದು ಕೊನೆಯುಸಿರೆಳೆದಿದ್ದಾರೆ . ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಕಳೆದ ಒಂದು ವರ್ಷದಿಂದ ಕಾನ್ಸ್ಟೇ ಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಜಗನ್ನಾಥ್ ಪೂಜಾರಿ ( 29 ) ಅವರು ಅನಾರೋಗ್ಯದಿಂದಾಗಿ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದರು, ಅವರು ಇಂದು ಮುಂಜಾನೆ 3 : 45 ರ ಸುಮಾರಿಗೆ ವಿಧಿವಶರಾಗಿದ್ದಾರೆ .
ಮೃತರ ಸಾವಿನ ಕುರಿತು ಸಹೋದ್ಯೋಗಿಗಳು ಹಾಗೂ ಶೃಂಗೇರಿ ಠಾಣೆಯ ಅಧಿಕಾರಿಗಳು ಬೇಸರವನ್ನು ವ್ಯಕ್ತಪಡಿಸಿದ್ದು , ಸಂತಾಪ ಸೂಚಿಸಿದ್ದಾರೆ . ಮೃತ ಜಗನ್ನಾಥ್ ಪೂಜಾರಿ ಅವರು ಮೂಲತಃ ಬಿಜಾಪುರದವರಾಗಿದ್ದರು.
🖋 ವೀರಮಣಿ ಬಾಳೆಹೊನ್ನುರು

Comments
Post a Comment