ಕೊಪ್ಪ:-ಬಿರಿಯಾನಿ ಹಂಚಿದ 'ಪುನೀತ್' ಫ್ಯಾನ್ಸ್
ಅಪ್ಪು' ಪುಣ್ಯಸ್ಮರಣೆ ದಿನ ಕೊಪ್ಪ ತಾಲ್ಲೂಕಿನ ಹಿರೇಗದ್ದೆ ಗ್ರಾಮ ದಲ್ಲಿ ಅನ್ನದಾನ ಬಿರಿಯಾನಿ ಹಂಚಿದ 'ಪುನೀತ್' ಫ್ಯಾನ್ಸ್ ಚಿಕ್ಕಮಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ ಒಂದು ವರ್ಷವೇ ಕಳೆದಿದೆ. ಆದರೂ ಕೂಡ ಅಭಿಮಾನಿಗಳಿಗಂತೂ ಇನ್ನೂ ನೆನಪು ಹಾಗೆ ಉಳಿದಿದೆ. ಈಗಾಗಲೇ ಅಭಿಮಾನಿಗಳು ಅಪ್ಪು ನೆನಪಿಗಾಗಿ ಸಾಕಷ್ಟು ಸಾಮಾಜಿಕ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಇಂದು (ಅ.30) ಅಪ್ಪು ಪುಣ್ಯ ಸ್ಮರಣೆ ಹಿನ್ನೆಲೆ ರಾಜ್ಯದ ಹಲವೆಡೆ ಅನ್ನದಾನ ಮಾಡುವ ಮೂಲಕ ಈ ದಿನವನ್ನು ಅಭಿಮಾನಿಗಳು ಅಗಲಿದ ನಾಯಕನಿಗೆ ನಮನ ಸಲ್ಲಿಸಿದ್ದಾರೆ. ಹೂವಿನಹಕ್ಳು ಹಿರೇಗದ್ದೆ ಗ್ರಾಮ ದಲ್ಲಿ ಅನ್ನದಾನ ನಡೆದಿದ್ದು, ಪುನೀತ್ ಅಭಿಮಾನಿಗಳು ಜನರಿಗೆ ಬಿರಿಯಾನಿ ಹಂಚಿದ್ದಾರೆ . ಅಪ್ಪು ಪುಣ್ಯ ಸ್ಮರಣೆ ಮಾಡಿದ್ದಾರೆ. ಇನ್ನೂ, ಇಂದು ಅವರ ಮೊದಲ ವರ್ಷದ ಪುಣ್ಯಸ್ಮರಣೆ ನಡೆಯುತ್ತಿದೆ. ಶೃಂಗೇರಿ ಶಾಸಕರಾದ TD ರಾಜೇಗೌಡ್ರು ಹಾಗೂ ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ D M ಸುದೇವ್, ಸದಸ್ಯರು ಸುಮಾ, ಜ್ಯೋತಿ, ಸುಪ್ರಿತಾ.. ಹಾಗೂ ಊರಿನ ಗ್ರಾಮಸ್ಥರು ಪಾಲ್ಗೊಂದಿದ್ದರೂ... ರೋಟರಿ ರಕ್ತ ಕೇಂದ್ರ ಪ್ರಾದೇಶಿಕ ರಕ್ತ ಸಂಗ್ರಹಣ ಕೇಂದ್ರ ಶಿವಮೊಗ್ಗ ಇವರ ವತಿಯಿಂದ ರಕ್ತ ದಾನ ಶಿಬಿರ ಕೂಡ ಆಯೋಜಿಸಲಾಗಿದೆ. 🖋ವೀರಮಣಿ ಬಾಳೆಹೊನ್ನುರು,