ಕಳ್ಳತನಕ್ಕೆ ಬಂದು ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಳ್ಳ,!
ಬೆಂಗಳೂರು:- ಇಂದಿರಾ ನಗರದಲ್ಲಿ ಮನೆಗೆ ಕಳ್ಳತನ ಮಾಡಲು ಬಂದ ಕಳ್ಳ ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ, ಮೃತ ವ್ಯಕ್ತಿಯು ಅಸ್ಸಾಂ ಮೂಲದ ದಿಲೀಪ್ ಕುಮಾರ್ ( 46 ) ಎಂದು ತಿಳಿದುಬಂದಿದೆ . ಮನೆಯ ಮಾಲೀಕರು ಕುಟುಂಬ ಸಮೇತರಾಗಿ ಪ್ರವಾಸ ಹೋಗಿದ್ದರು . ಮರಳಿ ಬಂದಾಗ ಮನೆಯಲ್ಲಿ ಯಾರೋ ಇದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು . ದೇವರ ಮನೆಯ ಕಿಟಕಿ ತೆಗೆದು ನೋಡಿದಾಗ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ,
ತಕ್ಷಣ ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ . ಮೃತ ದಿಲೀಪ್ ಕುಮಾರ್ ಈ ಹಿಂದೆಯೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ . ಇದೀಗ ಘಟನೆ ಸಂಬಂಧ ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ .

Comments
Post a Comment