ಕಾರ್ ಶೆಡ್ಡಿನಲ್ಲಿ ನವ ವಿವಾಹಿತೆ ಆತ್ಮಹತ್ಯೆ,?ಗಂಡನ ಕುಡಿತಕ್ಕೆ ಪತ್ನಿ ಬಲಿ ನವ್ಯಶ್ರೀ ಪೋಷಕರ ದೂರು,
ಕಾರ್ ಶೆಡ್ಡಿನಲ್ಲಿ ನವ ವಿವಾಹಿತೆ ಆತ್ಮಹತ್ಯೆ,?ಗಂಡನ ಕುಡಿತಕ್ಕೆ ಪತ್ನಿ ಬಲಿ ನವ್ಯಶ್ರೀ ಪೋಷಕರ ದೂರು
ಚಿಕ್ಕಮಗಳೂರು:- ಐದು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆಯೊಬ್ಬರು ಕಾರ್ ಶೆಡ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಶಿವಮೊಗ್ಗದ ಹೊಮ್ಮರಡಿ ನರ್ಸಿಂಗ್ ಹೋಂ ಸಂಸ್ಥಾಪಕರಾದ ಡಾ.ಜಯಶ್ರೀ ಮಗನ ಹೆಂಡತಿ ನವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ.ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಬಳೊಯ ದೇವರಹಳ್ಳಿ ಗ್ರಾಮದವರಾದ ನವ್ಯಶ್ರೀ, ಆಕಾಶ್ ಜೊತೆ ಐದು ತಿಂಗಳ ಹಿಂದೆ ಮದುವೆಯಾಗಿದ್ದಳು. ಆದ್ರೆ ಆಕಾಶ್ ತಡ ರಾತ್ರಿ ಮನೆಗೆ ಬರೋದು. ಮದ್ಯ ಸೇವಿಸಿ ಬರೋದು ಮಾಡುತ್ತಿದ್ದರಂತೆ. ಇದರಿಂದ ಬೇಸತ್ತು ನವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ಆರೋಪ ಮಾಡಿದ್ದಾರೆ. ಈ ಬಗ್ಗೆ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
🖋ವೀರಮಣಿ ಬಾಳೆಹೊನ್ನುರು,

Comments
Post a Comment