ಕೊಪ್ಪ,ಚುನಾವಣೆ ಬಹಿಸ್ಕಾರ ಮೂವತ್ತು ವರ್ಷಗಳಿಂದ ಡಾಂಬರು ಕಾಣದ ರಸ್ತೆ,,
ಮೂವತ್ತು ವರ್ಷಗಳಿಂದ ಡಾಂಬರು ಕಾಣದ ರಸ್ತೆ,,
ಕೊಪ್ಪ:- ತಾಲ್ಲೂಕಿನ ಅಳಗೇಶ್ವರಎಸ್ಟೇಟಿನ ಗಾಳಿಗಂಡಿ ಗ್ರಾಮಸ್ಥರು ಸೇರಿ ರಸ್ತೆ ಹೋರಾಟದ ಬಗ್ಗೆ ಮುಂದಿನ ದಿನಗಳ ನಡೆಯನ್ನು ತೀರ್ಮಾನಿಸಲಾಯಿತು, ಅಂದರೆ ಸತತ 30 ವರ್ಷ ಗಳಿಂದ ರಸ್ತೆ ಡಾಂಬರೀಕರಣ ಕಂಡೆ ಇಲ್ಲದ ರಸ್ತೆ,ಇದು ನಮ್ಮ ಗ್ರಾಮಸ್ಥರ ದುರಾದೃಷ್ಟವೋ ಅಥವಾ ನಾವು ಗೆಲ್ಲಿಸಿದಂತ,ಶಾಸಕರ, ತಾಲ್ಲೂಕ್ ಪಂಚಾಯಿತಿಯ ಸದಸ್ಯರ,ಜಿಲ್ಲಾ ಪಂಚಾಯಿತಿಯ ಸದಸ್ಯರಗಳ ಅಥವಾ ಗ್ರಾಮ ಪಂಚಾಯ್ತಿ ಯವರ ದುರದೃಷ್ಟವೋ ಗೊತ್ತಿಲ್ಲ ನಾವು ಯಾರ ಹತ್ರ ಕೇಳಿದ್ರು ಅವರು ಇವರ ಬಗ್ಗೆ ಹೇಳೋದು ಇವರು ಅವರ ಬಗ್ಗೆ ಹೇಳೋದು ಇದೆ ಆಗಿದೆ ಮಧ್ಯದಲ್ಲಿ ಇರುವಂತಹ ನಾವು ಗ್ರಾಮಸ್ಥರು ಈ ರಸ್ತೆಯಿಂದ ಆಗುವ ತೊಂದರೆಗಳನ್ನು ಎದುರಿಸುವ ಪರಿಸ್ಥಿತಿ ಆಗಿದೆ, ದಿನಾ ಬೆಳಿಗ್ಗೆ ಆದ್ರೆ ಈ ರಸ್ತೆ ಹೇಗೆ ದಾಟೋದು ಅನ್ನೋ ಚಿಂತೆ, ಸಂಜೆ ಬರುವಾಗ ಹೇಗಪ್ಪಾ ಮನೆಗೆ ಹೋಗೋದ್ ಅನ್ನೋ ಈ ಹೆದರಿಕೆಯ ಪರಿಸ್ಥಿತಿ ನಮ್ಮದಾಗಿದೆ, ಆದ್ದರಿಂದ ನಾವು ಈ ಬಾರಿ ಯಾವುದೇ ಕಾರಣಕ್ಕೂ ಯಾವುದೇ ಪಕ್ಷ ಪಾತ ವಿಲ್ಲದೇ ಎಲ್ಲಾ ಒಟ್ಟಾಗಿ ಒಂದೇ ಮನೋಭಾವ ಇಟ್ಟುಕೊಂಡು ರಸ್ತೆಯ ಅಭಿವೃದ್ಧಿಯ ಬಗ್ಗೆ ತೀವ್ರವಾದ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ,ನಮಗೆ ಸೂಕ್ತ ಉತ್ತರ ಸಿಗದಿದ್ದರೆ ಮುಂದಿನ ಚುನಾವಣೆ ಬಹಿಸ್ಕಾರಮಾಡುವುದಾಗಿ ತಿಳಿಸಿದ್ದಾರೆ,
🖊️ವೀರಮಣಿ ಬಾಳೆಹೊನ್ನುರು,

Comments
Post a Comment