ಕೊಪ್ಪ,ಅಲಗೇಶ್ವರ,ಸಮಸ್ಯೆಗೆ ಸ್ಪಂದಿಸದ ಗ್ರಾಮ ಪಂಚಾಯಿತಿಯ ಸದಸ್ಯರು,ಸಭೆಗೆ ಗೈರು,!
ಕೊಪ್ಪ, ಅಲಗೇಶ್ವರ,ಸಮಸ್ಯೆಗೆ ಸ್ಪಂದಿಸದ ಗ್ರಾಮ ಪಂಚಾಯಿತಿಯ ಸದಸ್ಯರು,ಸಭೆಗೆ ಗೈರು,!
ಕೊಪ್ಪ:- ತಾಲ್ಲೂಕಿನ ಅಲಗೇಶ್ವರ ರಸ್ತೆ ದುರಸ್ತಿಯ ಬಗ್ಗೆ ಚರ್ಚಿಸಲು ಚೌಡಿ ಕಟ್ಟೆ ಅಲಗೇಶ್ವರ ರಸ್ತೆ ಹೋರಾಟ ಸಮಿತಿ ಸಭೆಯನ್ನು ಕರೆಯಲಾಗಿತ್ತು, ವಿಶೇಷವಾಗಿ ಚೌಡಿ ಕಟ್ಟೆ ಅಲಗೇಶ್ವರ ಗ್ರಾಮ ಪಂಚಾಯತಿ ಸದಸ್ಯರನ್ನು ಕರೆಯಲಾಗಿತ್ತು ಸದಸ್ಯರು ಸಭೆಗೆ ಗೈರು ಆಗಿದ್ದರು, ಚರ್ಚೆಯನ್ನು ಮುಂದುವರಿಸುತ್ತಾ ಚೌಡಿ ಕಟ್ಟೆಯಿಂದ ಗಾಳಿ ಗಂಡಿಯ ವರೆಗೆ ಉತ್ತಮ ಗುಣಮಟ್ಟದ ರಸ್ತೆ ಮತ್ತು ಉತ್ತಮ ಗುಣಮಟ್ಟದ ಚರಂಡಿ ವ್ಯವಸ್ಥೆ ಕೂಡಲೇ ಮಂಜೂರು ಮಾಡಬೇಕೆಂದು ಎರಡು ದಿನದ ಗಡುವನ್ನು ನೀಡಿ ಬುಧವಾರದಂದು ಉಗ್ರ ಹೋರಾಟ ನಡೆಸಲು ಚೌಡಿ ಕಟ್ಟೆ ಅಲಗೇಶ್ವರ ಗ್ರಾಮಸ್ಥರು ತೀರ್ಮಾನಿಸಿದ್ದಾರೆ,
ಇದಕ್ಕೆ ಆದಷ್ಟು ಬೇಗ ಉತ್ತರವನ್ನು ಕ್ಷೇತ್ರದ ಶಾಸಕರಾದ ರಾಜೇಗೌಡರು ಮತ್ತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾದ ಜೀವರಾಜ್ ಅವರು ಮತ್ತು ಇದೇ ಕ್ಷೇತ್ರದಿಂದ ಗೆದ್ದು ಕೇಂದ್ರ ಸಚಿವರಾದಂತಹ ಶೋಭಾ ಕರಂದ್ಲಾಜೆ ಅವರು ಕೂಡ ಇದಕ್ಕೆ ಪ್ರತಿಕ್ರಿಯಿಸಬೇಕು ಇದ್ಯಾವುದು ಆಗದೇ ಇರುವ ಪಕ್ಷದಲ್ಲಿ ಬುಧವಾರ ಉಗ್ರ ಹೋರಾಟ ನಡೆಯುವುದು ಮಾತ್ರ ಖಚಿತ ಎಂದು ಚೌಡಿಕಟ್ಟೆ ಅಲಗೇಶ್ವರ ರಸ್ತೆ ಹೋರಾಟ ಸಮಿತಿ ಮತ್ತು ಗ್ರಾಮಸ್ಥರು ತೀರ್ಮಾನಿಸಿದ್ದಾರೆ,
🖋ವೀರಮಣಿ,ಬಾಳೆಹೊನ್ನುರು,



Comments
Post a Comment