Posts

Showing posts from December, 2022

ಹೊಸ ವರ್ಷ ಸಂಭ್ರಮಕ್ಕೆ : ಮಾಸ್ಕ್ ಕಡ್ಡಾಯ, ಮಾರ್ಗಸೂಚಿ ಪ್ರಕಟ.!

Image
  ಹೊಸ ವರ್ಷ ಸಂಭ್ರಮ : ಮಾಸ್ಕ್ ಕಡ್ಡಾಯ, ಮಾರ್ಗಸೂಚಿ ಪ್ರಕಟ.! ರಾಜ್ಯದಾದ್ಯಂತ ಈ ಸೂಚನೆ ಅನ್ವಯ - ರಾಜ್ಯ ಸರ್ಕಾರದ ಆರೋಗ್ಯ ಸಚಿವರು ಹಾಗೂ ಕಂದಾಯ ಸಚಿವರ ನೇತೃತ್ವದಲ್ಲಿ ಹಲವು ಅಧಿಕಾರಿಗಳ ಸಭೆ ನಡೆಸಿ, ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿದೆ. ಅದರಂತೆ ಇಂದಿನಿಂದ ರಾಜ್ಯಾಧ್ಯಂತ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತ ಮಾರ್ಗಸೂಚಿಯಂತೆ, ಇಂದಿನಿಂದ ನಗರದಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಎಲ್ಲಾ ಥಿಯೇಟರ್‌ ಗಳಲ್ಲೂ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಶಾಲಾ- ಕಾಲೇಜುಗಳಲ್ಲಿ ಮಾಸ್ಕ್‌ ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೋವಿಡ್‌ ಸಭೆ ಬಳಿಕ ಸಚಿವ ಆರ್‌ ಅಶೋಕ್‌ ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ನಿಯಮ ಪಾಲನೆ ಮಾಡಬೇಕು. ಕೊರೊನಾ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.  🖋 ವೀರಮಣಿ ಬಾಳೆಹೊನ್ನುರು

ಶೃಂಗೇರಿ:- ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವಿಲ್ಲ ಕಲ್ಮಕ್ಕಿ ಉಮೇಶ್ ಹೇಳಿಕೆ,

Image
  ಶೃಂಗೇರಿ:- ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವಿಲ್ಲ ಕಲ್ಮಕ್ಕಿ ಉಮೇಶ್ ಹೇಳಿಕೆ, ಶೃಂಗೇರಿ:- ಕ್ಷೇತ್ರದ ಮುಂದಿನ ವಿಧಾನಸಭಾ ಚುನಾವಣೆಯ ಟಿಕೆಟ್ ಕುರಿತು ಯಾವುದೇ ಗೊಂದಲವಿಲ್ಲ , ಹಿರಿಯ ನಾಯಕರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಿದ್ದಾರೆ . ಆದ್ದರಿಂದ ಅಭ್ಯರ್ಥಿ ಆಯ್ಕೆ ಬಗ್ಗೆ ಯಾವ ಗೊಂದಲವೂ ಇಲ್ಲ ಎಂದು ಬಿಜೆಪಿ ಮುಖಂಡ ಟಿ.ಎಂ. ಉಮೇಶ್ ಕಲಕ್ಕಿ ಹೇಳಿದ್ದಾರೆ . ಕಾರ್ಯಕರ್ತರು ಈಗಾಗಲೇ ಕ್ಷೇತ್ರದಲ್ಲಿ ಚುನಾವಣೆ ಬಗ್ಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ . ಡಿ.ಎನ್ ಜೀವರಾಜ್ ಅವರು ಕ್ಷೇತ್ರದಲ್ಲಿ ಈ ಹಿಂದೆ 15 ವರ್ಷಗಳ ಕಾಲ ಶಾಸಕರಾಗಿ ಹಾಗೂ ಕಳೆದ 5 ವರ್ಷಗಳ ಕಾಲ ಮಾಜಿ ಶಾಸಕರಾಗಿಯೂ ಸಹ ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಕೊಡುಗೆಯ ಆಧಾರದಲ್ಲಿ ಮುಂಬರುವ ಚುನಾವಣೆಯಲ್ಲಿ ಗೆಲ್ಲುವುದು ಸ್ಪಷ್ಟವಾಗಿದೆ . ಅಭ್ಯರ್ಥಿ ಬಗ್ಗೆ ಕಾರ್ಯಕರ್ತರು , ಪಕ್ಷದ ಅಭಿಮಾನಿಗಳು ಗೊಂದಲಕ್ಕೊಳಗಾಗದೆ ಚುನಾವಣೆ ಬಗ್ಗೆ ಸಕ್ರಿಯವಾಗಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದ್ದಾರೆ . ಕೆಲವು ಸಂಘಟನೆ , ವ್ಯಕ್ತಿಗಳು ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾಗಬೇಕು ಹಾಗೂ ಕೆಲವು ವ್ಯಕ್ತಿಗಳು ಕ್ಷೇತ್ರದಲ್ಲಿ ನಾವು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ . ಆದರೆ ಇತ್ತೀಚೆಗೆ ಕೊಪ್ಪದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ , ಹಾಗೂ ಮಾಜಿ ಸಿಎಂ ಬಿ.ಎಸ್ .ಯಡಿ...

ಕರ್ನಾಟಕ ಕಲ್ಚರಲ್ ಫೌಂಡೇಶನ್ kcf ಕುವೈಟ್

Image
  ಕರ್ನಾಟಕ ಕಲ್ಚರಲ್ ಫೌಂಡೇಶನ್ kcf ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ದಿನಾಂಕ 9/12/2022 ರ ಶುಕ್ರವಾರ  ಜುಮಾ ನಮಾಝಿನ ಬಳಿಕ ಅಲ್ ವಝನ್ ಹಾಲ್ ನಲ್ಲಿ 2023 ರ ಫೆಬ್ರವರಿ ತಿಂಗಳಲ್ಲಿ ನಡೆಸುವಂತಹ  ಕೆಸಿಎಫ್ ಫೌಂಡೇಶನ್ ಡೇ ಕಾರ್ಯಕ್ರಮದ  ಸ್ವಾಗತ ಸಮಿತಿಯನ್ನು ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ  ಬಹುಮಾನ್ಯ ಹುಸೈನ್ ಎರ್ಮಡ್ ಉಸ್ತಾದರ ಅಧ್ಯಕ್ಷತೆ ಯಲ್ಲಿ  ಹಾಗೂ ರಾಷ್ಟ್ರೀಯ ಸಮಿತಿಯ ನಾಯಕರು  *ಸೌತ್ ಝೋನ್ ಮತ್ತು ನಾರ್ತ್ ಝೋನ್, ಮತ್ತು ಝೋನ್ ಗೆ  ಒಳಪಟ್ಟ, ಫಾಹೀಲ್, ಮಹಬುಲ, ಫರ್ವನಿಯ, ಸಾಲ್ಮಿಯ, ಸಿಟಿ ಮತ್ತು ಜಹರ ಈ 6 ಸೆಕ್ಟರ್*  ಗಳನ್ನೊಳಗೊಂಡ  ಸದಸ್ಯರ ಸಮ್ಮುಖದಲ್ಲಿ, ಮತ್ತು ತಮ್ಮ *ಸೂಚನೆ ಅನುಮೋದನೆ ಯೊಂದಿಗೆ 2023ಫೆಬ್ರವರಿ ತಿಂಗಳಲ್ಲಿ ನಡೆಯುವ kcf ಫೌಂಡೇಶನ್ ಡೇ  ಕಾರ್ಯಕ್ರಮದ ಸ್ವಾಗತ ಸಮಿತಿಯ ಈ ಕೆಳಗಿನ ನಾಯಕರನ್ನು ಆಯ್ಕೆ ಮಾಡಲಾಯಿತು* ಛೇರ್ಮನ್ ಆಗಿ ಬಹು  ಉಮರ್ ಝುಹುರಿ ಕನ್ವಿನರ್ ಆಗಿ ಜನಾಬ್ ಯಾಕೂಬ್ ಕಾರ್ಕಳ ಫೈನಾನ್ಸ್ ಕಂಟ್ರೋಲರ್ ಆಗಿ ಜನಾಬ್ ಇಬ್ರಾಹಿಂ ವೇಣೂರು  ಇವರನ್ನು ಆಯ್ಕೆ ಮಾಡಲಾಗಿದೆ ಮತ್ತು KCF dayಯ ಕಾರ್ಯಕ್ರಮದ  ಯಶಸ್ವಿ ಗಾಗಿ  I👁️ TEAM ಸದಸ್ಯರಿಗೆ ಸಂಪೂರ್ಣ ಜವಾಬ್ದಾರಿಯನ್ನು  ಕೊಡಲಾಗಿದೆ, ಪೋಸ್ಟರ್ ನ ಜವಾಬ್ದಾರಿಯನ್ನು ಪ್ರಕಾಶನ ಮತ್ತು ಪ್ರಚಾರ ವಿಭಾಗ  ನಡೆಸಿ, 2023 ರ  ಕ್...