ಶೃಂಗೇರಿ:- ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವಿಲ್ಲ ಕಲ್ಮಕ್ಕಿ ಉಮೇಶ್ ಹೇಳಿಕೆ,


 



ಶೃಂಗೇರಿ:- ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವಿಲ್ಲ ಕಲ್ಮಕ್ಕಿ ಉಮೇಶ್ ಹೇಳಿಕೆ,




ಶೃಂಗೇರಿ:- ಕ್ಷೇತ್ರದ ಮುಂದಿನ ವಿಧಾನಸಭಾ ಚುನಾವಣೆಯ ಟಿಕೆಟ್ ಕುರಿತು ಯಾವುದೇ ಗೊಂದಲವಿಲ್ಲ , ಹಿರಿಯ ನಾಯಕರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಿದ್ದಾರೆ . ಆದ್ದರಿಂದ ಅಭ್ಯರ್ಥಿ ಆಯ್ಕೆ ಬಗ್ಗೆ ಯಾವ ಗೊಂದಲವೂ ಇಲ್ಲ ಎಂದು ಬಿಜೆಪಿ ಮುಖಂಡ ಟಿ.ಎಂ. ಉಮೇಶ್ ಕಲಕ್ಕಿ ಹೇಳಿದ್ದಾರೆ .


ಕಾರ್ಯಕರ್ತರು ಈಗಾಗಲೇ ಕ್ಷೇತ್ರದಲ್ಲಿ ಚುನಾವಣೆ ಬಗ್ಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ . ಡಿ.ಎನ್ ಜೀವರಾಜ್ ಅವರು ಕ್ಷೇತ್ರದಲ್ಲಿ ಈ ಹಿಂದೆ 15 ವರ್ಷಗಳ ಕಾಲ ಶಾಸಕರಾಗಿ ಹಾಗೂ ಕಳೆದ 5 ವರ್ಷಗಳ ಕಾಲ ಮಾಜಿ ಶಾಸಕರಾಗಿಯೂ ಸಹ ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಕೊಡುಗೆಯ ಆಧಾರದಲ್ಲಿ ಮುಂಬರುವ ಚುನಾವಣೆಯಲ್ಲಿ ಗೆಲ್ಲುವುದು ಸ್ಪಷ್ಟವಾಗಿದೆ . ಅಭ್ಯರ್ಥಿ ಬಗ್ಗೆ ಕಾರ್ಯಕರ್ತರು , ಪಕ್ಷದ ಅಭಿಮಾನಿಗಳು ಗೊಂದಲಕ್ಕೊಳಗಾಗದೆ ಚುನಾವಣೆ ಬಗ್ಗೆ ಸಕ್ರಿಯವಾಗಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದ್ದಾರೆ .



ಕೆಲವು ಸಂಘಟನೆ , ವ್ಯಕ್ತಿಗಳು ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾಗಬೇಕು ಹಾಗೂ ಕೆಲವು ವ್ಯಕ್ತಿಗಳು ಕ್ಷೇತ್ರದಲ್ಲಿ ನಾವು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ . ಆದರೆ ಇತ್ತೀಚೆಗೆ ಕೊಪ್ಪದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ , ಹಾಗೂ ಮಾಜಿ ಸಿಎಂ ಬಿ.ಎಸ್ .ಯಡಿಯೂರಪ್ಪ ಅವರೇ ಡಿ.ಎನ್.ಜೀವರಾಜ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ , ಜೀವರಾಜ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಹೇಳಿಕೆ ನೀಡಿದ್ದಾರೆ .




🖊️ ವೀರಮಣಿ ಬಾಳೆಹೊನ್ನುರು,

Comments

Popular posts from this blog

ಕೊಪ್ಪ, ಶಾಲೆಯ ಮಕ್ಕಳನ್ನ ಅಟೋ ಚಾಲಕರ ಸೀಟಿನಿಂದ ಇಳಿಸಿದ ಪಿ ಎಸ್ ಐ ಬಸವರಾಜ್, ಚಾಲಕರಿಗೆ ಎಚ್ಚರಿಕೆ

250ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತನ,!