ಹೊಸ ವರ್ಷ ಸಂಭ್ರಮಕ್ಕೆ : ಮಾಸ್ಕ್ ಕಡ್ಡಾಯ, ಮಾರ್ಗಸೂಚಿ ಪ್ರಕಟ.!
ಹೊಸ ವರ್ಷ ಸಂಭ್ರಮ : ಮಾಸ್ಕ್ ಕಡ್ಡಾಯ, ಮಾರ್ಗಸೂಚಿ ಪ್ರಕಟ.!
ರಾಜ್ಯದಾದ್ಯಂತ ಈ ಸೂಚನೆ ಅನ್ವಯ - ರಾಜ್ಯ ಸರ್ಕಾರದ
ಆರೋಗ್ಯ ಸಚಿವರು ಹಾಗೂ ಕಂದಾಯ ಸಚಿವರ ನೇತೃತ್ವದಲ್ಲಿ ಹಲವು ಅಧಿಕಾರಿಗಳ ಸಭೆ ನಡೆಸಿ, ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿದೆ. ಅದರಂತೆ ಇಂದಿನಿಂದ ರಾಜ್ಯಾಧ್ಯಂತ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತ ಮಾರ್ಗಸೂಚಿಯಂತೆ, ಇಂದಿನಿಂದ ನಗರದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಎಲ್ಲಾ ಥಿಯೇಟರ್ ಗಳಲ್ಲೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಶಾಲಾ- ಕಾಲೇಜುಗಳಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೋವಿಡ್ ಸಭೆ ಬಳಿಕ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ನಿಯಮ ಪಾಲನೆ ಮಾಡಬೇಕು. ಕೊರೊನಾ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
🖋 ವೀರಮಣಿ ಬಾಳೆಹೊನ್ನುರು

Comments
Post a Comment