ರಿಯಾದ್:- ನಿವಾಸದಲ್ಲಿ ಬೆಂಕಿ - ಕೇರಳಿಗರು ಸೇರಿ ಆರು ಮಂದಿ ದುರ್ಮರಣ,!
ರಿಯಾದ್:- ನಿವಾಸದಲ್ಲಿ ಬೆಂಕಿ - ಕೇರಳಿಗರು ಸೇರಿ ಆರು ಮಂದಿ ದುರ್ಮರಣ,!
ರಿಯಾದ್:- ಖಾಲಿದಿಯಾದಲ್ಲಿನ ಪೆಟ್ರೋಲ್ ಪಂಪ್ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡು ಸಾವನ್ನಪ್ಪಿದ ಇಬ್ಬರು ಮಲಯಾಳಿಗಳನ್ನು ಗುರುತಿಸಲಾಗಿದೆ. ಮಲಪ್ಪುರಂ ಕುಟಿಪ್ಪುರಂ ಪಂಚಾಯತ್‌ನ ವಳಂಚೇರಿ ಪೈಂಕನ್ನೂ ತರಕ್ಕಲ್ ಯೂಸುಫ್ ಅವರ ಪುತ್ರ ಅಬ್ದುಲ್ ಹಕೀಂ (31) ಮತ್ತು ಮೇಲ್ಮುರಿ ಮೂಲದ ನೂರೆಂಗಲ್ ಕವುಂಗಲ್ಲೋಡಿಯ ಇರ್ಫಾನ್ ಹಬೀಬ್ (33) ಮೃತ ಮಲಯಾಳಿಗಳು. ಅಪಘಾತದಲ್ಲಿ ಅವರೂ ಸೇರಿದಂತೆ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ.
ನಮಗೆ ದೊರೆತ ಮಾಹಿತಿಯ ಪ್ರಕಾರ, ಇಬ್ಬರು ಮಲಯಾಳಿಗಳನ್ನು ಹೊರತುಪಡಿಸಿ, ತಮಿಳುನಾಡಿನ ಇಬ್ಬರು ಮತ್ತು ಗುಜರಾತಿನ ಒಬ್ಬರು, ಮಹಾರಾಷ್ಟ್ರದ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ, ಶುಕ್ರವಾರ ಬೆಳಗಿನ ಜಾವ 1.30ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಖಲಿದಿಯಾದ ಪೆಟ್ರೋಲ್ ಪಂಪ್‌ನಲ್ಲಿ ಹೊಸದಾಗಿ ನೇಮಕಗೊಂಡವರಗಿರುತ್ತಾರೆ ಈ ದುರ್ದೈವಿಗಳು, ಇವರಲ್ಲಿ ಮೂವರು ಗುರುವಾರವಷ್ಟೇ ಇಖಾಮಾ ಪಡೆದಿದ್ದರು.
ಮೃತ ದೇಹಗಳು ಶುಮೈಸಿ ಆಸ್ಪತ್ರೆಯ ಶವಾಗಾರದಲ್ಲಿದೆ ಎಂದು ತಿಳಿದುಬಂದಿದೆ,

Comments
Post a Comment