ಕೆ ಸಿ ಎಫ್ ನಾರ್ತ್ ಝೋನ್ ಕುವೈತ್,ಮುಹಿಯುದ್ದೀನ್ ರಾತೀಬ್ ಹಾಗೂ ಅನುಸ್ಮರಣೆ,


 ಕೆಸಿಎಫ್ ನಾರ್ತ್ ಝೋನ್ ಕುವೈತ್,ಮುಹಿಯುದ್ದೀನ್ ರಾತೀಬ್ ಹಾಗೂ ಅನುಸ್ಮರಣೆ
,


ಕೆಸಿಎಫ್ ನಾರ್ತ್ ಝೋನ್ ಕುವೈತ್ ಆಯೋಜಿಸಿದ ಮುಹಿಯುದ್ದೀನ್ ರಾತೀಬ್ ಹಾಗೂ ಶೈಖ್ ಜೀಲಾನಿ, ತಾಜುಲ್ ಉಲಮಾ, ನೂರುಲ್ ಉಲಮಾ, ಶೈಖುಲ್ ಹದೀಸ್ ನೆಲ್ಲಿಕುತ್ತ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮ ಅಕ್ಟೋಬರ್ ತಿಂಗಳ 27 ನೇ ತಾರೀಖು ಶುಕ್ರವಾರ ಮದ್ಯಾಹ್ನ ಕೆಸಿಎಫ್ ಫರ್ವಾನಿಯಾ ಸೆಂಟರ್ ನಲ್ಲಿ ನಡೆಯಿತು.



ಪ್ರಸ್ತುತ ಕಾರ್ಯಕ್ರಮದಲ್ಲಿ ಮುಹಿಯುದ್ದೀನ್ ರತೀಬ್ ನೇತೃತ್ವವನ್ನು IC ಅಡ್ಮಿನ್ ಕಾರ್ಯದರ್ಶಿ ಬಹು ಅಬ್ದುಲ್ ರಹ್ಮಾನ್ ಸಖಾಫಿ ವಹಿಸಿದರು

ನಾರ್ತ್ ಝೋನ್ ಅಧ್ಯಕ್ಷರಾದ ಶಾಫಿ ಕೃಷ್ಣಾಪುರ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ಹೈದರ್ ಅಲಿ ಉಚ್ಚಿಲ ಸ್ವಾಗತಿಸಿದರು.



ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹು ಹುಸೈನ್ ಎರ್ಮಾಡ್ ಉಸ್ತಾದ್ ನಿರ್ವಹಿಸಿ ಮುಖ್ಯ ಭಾಷಣದವನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿ ಶಿಕ್ಷಣ ಅಧ್ಯಕ್ಷರು ಬಹು ಭಾದುಷ ಸಖಾಫಿ ಕರೆಕ್ಕಾಡ್ ನಿರ್ವಹಿಸಿದರು.



ಕಾರ್ಯಕ್ರಮಕ್ಕೆ ಗೌರವ ಉಪಸ್ಥಿತಿಯಾಗಿ ಜನಾಬ್ ಯಾಕೂಬ್ ಕಾರ್ಕಳ ಕಾರ್ಯದರ್ಶಿ ಕೆಸಿಎಫ್ ಕುವೈತ್, ಜನಾಬ್ ಮೂಸಾ ಇಬ್ರಾಹಿಂ ಫೈನಾನ್ಸ್ ಕಂಟ್ರೋಲರ್ ಕೆಸಿಎಫ್ ಕುವೈತ್, ಬಹು ಉಮರ್ ಝುಹ್ರಿ ಅಧ್ಯಕ್ಷರು ಸಂಘಟನೆ ವಿಭಾಗ, ಜನಾಬ್ ಅಬ್ಬಾಸ್ ಬಳಂಜ ಅಧ್ಯಕ್ಷರು ಆಡಳಿತ ವಿಭಾಗ, ಜನಾಬ್ ಇಕ್ಬಾಲ್ ಕಂದಾವರ ಅಧ್ಯಕ್ಷರು ಸಾಂತ್ವನ ವಿಭಾಗ, ಜನಾಬ್ ಶೌಕತ್ ಶಿರ್ವ ಅಧ್ಯಕ್ಷರು ಇಹ್ಸಾನ್ ವಿಭಾಗ, ಬಹು ಕಾಸಿಂ ಉಸ್ತಾದ್ ಬೆಲ್ಮ ಅಧ್ಯಕ್ಷರು ಸಾಲ್ಮಿಯಾ ಸೆಕ್ಟರ್, ಜನಾಬ್ ರಹೀಮ್ ಕೃಷ್ಣಾಪುರ ಅಧ್ಯಕ್ಷರು ಸಿಟಿ ಸೆಕ್ಟರ್ ಉಪಸ್ಥಿತಿಯಲ್ಲಿ 

ಸಭೆಯಲ್ಲಿ ರಾಷ್ಟ್ರೀಯ ಸದಸ್ಯರು , ಝೋನ್ ಸದಸ್ಯರು, ಸೆಕ್ಟರ್ ಸದಸ್ಯರು ಭಾಗವಹಿಸಿದರು.

ದುಆ ನಿರ್ವಹಿಸಿ ಕೊನೆಯಲ್ಲಿ ತಬರ್ರುಕ್ ವಿತರಿಸಲಾಯಿತು.



ವರದಿ:- ಪ್ರಕಾಶನ ಮತ್ತು ಪ್ರಸಾರ ವಿಭಾಗ ಕುವೈಟ್

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?