ಕುವೈತ್,ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಕುವೈತ್ ಕಮಿಟಿ ವತಿಯಿಂದ ನಡೆಸ್ಪಟ್ಟ 30ನೇ ವಾರ್ಷಿಕ ಪ್ರಚಾರ ಸಮ್ಮೇಳನ ಕಾರ್ಯಕ್ರಮವೂ 8/12/2023 ರಂದು ಅತ್ಯಂತ ಅದ್ದೂರಿಯಾಗಿ ನಡೆಯಿತು.
ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಕುವೈತ್ ಕಮಿಟಿ ವತಿಯಿಂದ ನಡೆಸ್ಪಟ್ಟ 30ನೇ ವಾರ್ಷಿಕ ಪ್ರಚಾರ ಸಮ್ಮೇಳನ ಕಾರ್ಯಕ್ರಮವೂ 8/12/2023 ರಂದು ಅತ್ಯಂತ ಅದ್ದೂರಿಯಾಗಿ ನಡೆಯಿತು.
ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಕುವೈತ್ ಕಮಿಟಿ ವತಿಯಿಂದ ನಡೆಸ್ಪಟ್ಟ 30ನೇ ವಾರ್ಷಿಕ ಪ್ರಚಾರ ಸಮ್ಮೇಳನ ಕಾರ್ಯಕ್ರಮವೂ 8/12/2023 ರಂದು ಅತ್ಯಂತ ಅದ್ದೂರಿಯಾಗಿ ನಡೆಯಿತು.ಈ ಕಾರ್ಯಕ್ರಮಕ್ಕೆ ಪ್ರಮುಖ ಅಥಿತಿಗಳಾಗಿ ಮದನಿಯಂ ಲತೀಫ್ ಸಖಾಫಿ ಉಸ್ತಾದ್ ಮತ್ತು ಅಲ್ ಮದೀನಾ ಮಂಜನಾಡಿ ಇದರ ವ್ಯವಸ್ಥಾಪಕ ನಿರ್ವಾಹಕರಾದ ಅಬ್ದುಲ್ ಖಾದರ್ ಸಖಾಫಿ ಉಸ್ತಾದರು ಆಗಮಿಸಿದರು.
ಈ ಕಾರ್ಯಕ್ರಮದಲ್ಲಿ ಸಯ್ಯದ್ ಮಂಕಫ್ ತಂಙಳ್ ದುಆ ನೇತೃತ್ವ ವಹಿಸಿದರು.ಬಳಿಕ ಈ ಕಾರ್ಯಕ್ರಮದ ಸ್ವಾಗತವನ್ನು ಅಲ್ ಮದೀನಾ ಮಂಜನಾಡಿ ಕುವೈತ್ ಇದರ ಸೆಕ್ರೆಟರಿಯಾದ ಜನಾಬ್ ಮೂಸಾ ಇಬ್ರಾಹೀಂ ನೆರವೇರಿಸಿದರು.ನಂತರ ಮಹಾನರಾದ ಶರಫುಲ್ ಉಲಮಾ(ಖ.ಸಿ) ಉಸ್ತಾದರ ಕುರಿತು ಅತ್ಯಂತ ಮನೋಹರವಾದ ಮನಮುಟ್ಟುವ ಶೈಲಿಯಲ್ಲಿ ಶಾಫಿ ಜೋಕಟ್ಟೆ ಹಾಡನ್ನು ಆಲಾಪಿಸಿದರು.ತದನಂತರ ಈ ಕಾರ್ಯಕ್ರಮದ ಉದ್ಘಾಟನೆಯನ್ನು KCF ಕುವೈತ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು. ಹುಸೈನ್ ಎರ್ಮಾಡ್ ಉಸ್ತಾದ್ ಅವರು ನೆರವೇರಿಸಿದರು.
ಅದರ ಬಳಿಕ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಚೆಯರ್ಮೆನ್ ಅಬ್ದುರ್ರಹ್ಮಾನ್ ಸಖಾಫಿ ಉಸ್ತಾದರು ಸಂದೇಶ ಭಾಷಣದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.ಬಳಿಕ ಅಲ್ ಮದೀನಾ ಮಂಜನಾಡಿ ಇದರ ವ್ಯವಸ್ಥಾಪಕ ನಿರ್ವಾಹಕರಾದ ಅಬ್ದುಲ್ ಖಾದರ್ ಸಖಾಫಿ ಉಸ್ತಾದರು ಶರಫುಲ್ ಉಲಮಾ ಮತ್ತು ಸಂಸ್ಥೆಯ ಕುರಿತು ವಿವರವಾಗಿ ಮನಸು ತೆರೆದು ಮಾತನಾಡಿದರು.ನಂತರ ಅಲ್ ಮದೀನಾ ಕುವೈತ್ ಕಮಿಟಿ ಇದರ ಅಧ್ಯಕ್ಷರಾದ ಶಾಹುಲ್ ಹಮೀದ್ ಸಅದಿ ಉಸ್ತಾದರು ಅಧ್ಯಕ್ಷತೆ ಭಾಷಣವನ್ನು ನೆರವೇರಿಸಿದರು.
ನಂತರ ಅಬ್ದುಲ್ ಲತೀಫ್ ಸಖಾಫಿ ಮದನಿಯಂ ಉಸ್ತಾದರು ಮುಖ್ಯ ಪ್ರಭಾಷಣ ಮತ್ತು ಭಕ್ತಿಪೂರ್ಣ ದುಆ ನಡೆಸಿಕೊಟ್ಟು ಕಾರ್ಯಕ್ರಮದ ಸೌಂದರ್ಯವನ್ನು ಹೆಚ್ಚಿಸಿ ಕಾರ್ಯಕರ್ತರ ಮತ್ತು ವೀಕ್ಷಕರ ಮನದಲ್ಲಿ ಆವೇಶ ತುಂಬಿಸಿದರು.ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಮುಖ ವ್ಯಕ್ತಿತ್ವಗಳನ್ನು ಪ್ರತ್ಯೇಕವಾಗಿ ಗೌರವಿಸಲಾಯಿತು.ಕೊನೆಯದಾಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಕೆಸಿಎಫ್, ಕಿಸ್ವಾ Dksc ಬಾಯರ್ Kkma ಎಲ್ಲಾ ಕಮಿಟಿ ನಾಯಕರಿಗೆ ಎಲ್ಲರಿಗೂ ಕನ್ವೀನರ್ ಹಸೈನಾರ್ ಮೊಂಟೆಪದವು ಅವರು ಧನ್ಯವಾದಗಳು ಅರ್ಪಿಸಿದರು.ನಂತರ ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.








Comments
Post a Comment