ತಾಯಿ ಯಿಂದ ಮಗಳನ್ನು ಹತ್ಯೆ ಮಾಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.


 




ಹೈದರಾಬಾದ್:- ಮಗಳು ಮನೆಯಲ್ಲಿ ತನ್ನ ಬಾಯ್‌ಫ್ರೆಂಡ್‌ ಜೊತೆ ಇರುವುದನ್ನು ಕಂಡು ಕೋಪಗೊಂಡ ತಾಯಿ, ಮಗಳನ್ನು ಹತ್ಯೆ ಮಾಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ತಾಯಿಯಿಂದ ಹತ್ಯೆಯಾದ ಮಗಳನ್ನು 19 ವರ್ಷದ ಭಾರ್ಗವಿ ಎಂದು ಹೇಳಲಾಗುತ್ತಿದೆ.

ಇಬ್ರಾಹಿಂಪಟ್ಟಣದ ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಗಳು ಭಾರ್ಗವಿ ತನ್ನ ಪ್ರಿಯಕರನೊಂದಿಗೆ ಇರುವುದನ್ನು ಜಂಗಮ್ಮ ನೋಡಿದ್ದಾರೆ. ಇದರಿಂದ ಕೋಪಗೊಂಡು ತಾಯಿ ಕತ್ತು ಹಿಸುಕಿ ಮಗಳ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.



ಬುಧವಾರ ಜಂಗಮ್ಮ ಕೆಲಸ ಮುಗಿಸಿ ಮನೆಗೆ ಊಟಕ್ಕೆ ಬಂದಿದ್ದರು. ಈ ವೇಳೆ ಅವರ ಪುತ್ರಿ ಭಾರ್ಗವಿ ತನ್ನ ಪ್ರಿಯಕರನ ಜೊತೆಯಲ್ಲಿದ್ದಳು. ಮಗಳ ಪ್ರಿಯಕರ ನನ್ನು ಬೈದು ಮನೆಯಿಂದ ಹೊರಗೆ ಕಳುಹಿಸಿದ್ದಾಳೆ. ನಂತರ ಮಗಳ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.


ಕೊಲೆಯಾದ ಯುವತಿಯ ಅಪ್ರಾಪ್ತ ಸಹೋದರ, ತಾನು ಕೊಲೆಯನ್ನು ನೋಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ತನ್ನ ತಾಯಿಯ ವಿರುದ್ಧ ದೂರು ದಾಖಲಿಸಿದ್ದಾನೆ. ತಾಯಿ ತನ್ನ ಸಹೋದರಿಯ ಮೇಲೆ ಹಲ್ಲೆ ಮಾಡುವುದನ್ನು ಕಿಟಕಿಯಿಂದ ನೋಡಿದ್ದಾನೆ ಎಂದು ಇಬ್ರಾಹಿಂಪಟ್ಟಣಂ ಪೊಲೀಸ್ ಅಧಿಕಾರಿ ಸತ್ಯನಾರಾಯಣ ತಿಳಿಸಿದ್ದಾರೆ.









Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?