ಸೌದಿಅರೇಬಿಯದಲ್ಲಿ ಅಪಘಾತ ಮಗು ಸೇರಿ ನಾಲ್ವರು ಮೃತಪಟ್ಟಿದ್ದರೆ,
ತಾಯಿಫ್: ಕತಾರ್ ನಿಂದ ಸೌದಿ ಅರೇಬಿಯಾಕ್ಕೆ ಉಮ್ರಾ ನಿರ್ವಹಿಸಲು ಕಾರಿನಲ್ಲಿ ತೆರಳುತ್ತಿದ್ದ ಹಳೆಯಂಗಡಿ ಮೂಲದ ದಂಪತಿ,ಒಂದೂವರೆ ತಿಂಗಳಿನ ಮಗು ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಸೌದಿ ಅರೇಬಿಯಾದ ತಾಯಿಫ್ ನಲ್ಲಿ ನಡೆದಿದೆ.
ವಾರ್ತಾ ಸಾರಥಿ,,21/03/2024
ಕತಾರ್ ನಲ್ಲಿ ವಾಸವಾಗಿದ್ದು, ತಮ್ಮ ಕನಸಾದ ಉಮ್ರಾ ನಿರ್ವಹಣೆಗಾಗಿ ಕತಾರ್ ನಿಂದ ರಸ್ತೆ ಮಾರ್ಗವಾಗಿ ಹೊರಟು ಸೌದಿಗೆ ಸಾಗುತ್ತಿದ್ದರು, ಬೊಳ್ಳೂರು ಜಮಾತ್ ಗೊಳಪಟ್ಟ, ಹಳೆಯಂಗಡಿ ಲೈಟ್ ಹೌಸ್ ಹೈದ್ರೋಸ್ ಕುಟುಂಬದ ಹಿರಿಯರಾದ ಶಮೀಮ್ ರವರ ಕಿರಿಯ ಮಗಳು, ಅವರ ಗಂಡ ಸಂಚರಿಸುತ್ತಿದ್ದ ಕಾರು ಸೌದಿ. ಹಾಗೂ ಕಾರಿನಲ್ಲಿದ್ದ ಅವರ ಮತ್ತೊಂದು ಮಗು ಅಲ್ಲದೆ ಅದೇ ಕುಟುಂಬದ ಲತೀಫ್ ರವರ ಮಗಳು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ನಿಘಾ ಘಟಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ,
ಹಳೆಯಂಗಡಿ ಪಕ್ಷಿಕೆರೆಯ ಮುಹಮ್ಮದ್ ರಮೀಝ್ ಹಾಗೂ ಹಿಬಾ ಮತ್ತು ಅವರ ಇಬ್ಬರು ಮಕ್ಕಳು ನಿಧನರಾಗಿದ್ದಾರೆ.
ಕತಾರ್ ನಿಂದ ಸೌದಿ ಅರೇಬಿಯಕ್ಕೆ ಉಮ್ರಾ ನಿರ್ವಹಿಸಲು ಕಾರಿನಲ್ಲಿ ಮಗುವಿನೊಂದಿಗೆ ದಂಪತಿ ತೆರಳುತ್ತಿದ್ದಾಗ ಗುರುವಾರ ಮುಂಜಾನೆ ಸುಮಾರು ನಾಲ್ಕು ಗಂಟೆ ಹೊತ್ತಿಗೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಫಘಾತ ತಾಯಿಫ್ ನಿಂದ ಸುಮಾರು 160 ಕಿಲೋ ಮೀಟರ್ ದೂರಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Comments
Post a Comment