MGT ರಿಯಾದ್ ವಲಯದ ಗ್ರ್ಯಾಂಡ್ ಇಫ್ತಾರ್ ಕೂಟ,
MGT ರಿಯಾದ್ ವಲಯದ ಗ್ರ್ಯಾಂಡ್ ಇಫ್ತಾರ್ ಕೂಟ,
ಮಲೆನಾಡು ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆ (MGT) ರಿಯಾದ್ ವಲಯದ ವತಿಯಿಂದ ದಿನಾಂಕ 29-03-2024 ರಂದು ಶುಕ್ರವಾರ ಘಸ್ಸನ್ ಅಲ್ ರಬೀಹ್ ಇಸ್ತಿರಾಹ್ ರಿಯಾದ್ ನಲ್ಲಿ ಗ್ರ್ಯಾಂಡ್ ಇಫ್ತಾರ್ ಕೂಟವನ್ನು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು MGT ರಿಯಾದ್ ವಲಯದ ಅಧ್ಯಕ್ಷರಾದ ಇರ್ಷಾದ್ ಚಕ್ಮಕ್ಕಿ ಯವರು ವಹಿಸಿದ್ದರು.
ಉಪವಾಸದ ಪವಿತ್ರ ತಿಂಗಳಲ್ಲಿ ಅನಿವಾಸಿ ಭಾರತೀಯ ಬಂಧು ಮಿತ್ರರು ಒಂದಾಗಲು ಮತ್ತು ಸಂಬಂಧವನ್ನು ಬೆಸೆಯಲು MGT ಯ ಇಫ್ತಾರ್ ಕೂಟವು ಒಂದು ಅದ್ಭುತ ಅವಕಾಶವನ್ನು ಒದಗಿಸಿತು. ಕಾರ್ಯಕ್ರಮದಲ್ಲಿ MGT ಕೇಂದ್ರ ಸಮಿತಿಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ಸತ್ತಾರ್ ಜಯಪುರ, MGT ದಮ್ಮಾಮ್/ಖೋಬರ್ ವಲಯದ ಅಧ್ಯಕ್ಷರಾದ ಜನಾಬ್ ಅಫ್ಝಲ್ ಸಮದ್ ಕೊಪ್ಪ ಮತ್ತು ಹಲವಾರು ಗಣ್ಯ ಸದಸ್ಯರು ಭಾಗವಹಿಸಿದ್ದರು.
ಇಫ್ತಾರ್ ಕೂಟದಲ್ಲಿ ರುಚಿಕರವಾದ ಖಾದ್ಯಗಳ ಭೋಜನ ವ್ಯವಸ್ಥೆ ಮಾಡಲಾಗಿತ್ತು.
MGT ರಿಯಾದ್ ವಲಯದ ಗ್ರಾಂಡ್ ಇಫ್ತಾರ್ ಕೂಟ ಒಂದು ಅದ್ಭುತ ಯಶಸ್ಸು ಕಂಡಿತು.
MGT ರಿಯಾದ್ ವಲಯದ ಕಾರ್ಯದರ್ಶಿ ಅನ್ಸಾರ್ ಚಕ್ಮಕ್ಕಿ.
ಉಪಾಧ್ಯಕ್ಷರಾದ ಝಬೀರ್ ಬಾಳೆಹೊನ್ನೂರು & ಆಫ್ರೋಝ್ಹಾಸನ
ಕೋಶಾಧಿಕಾರಿ ಅಬೂಬಕರ್ ಸಿದ್ದೀಖ್ ಬೇಲೂರು, ಸಲಹೆಗಾರ ಜುನೈದ್ ಇಸ್ಮಾಯಿಲ್ ಚಕ್ಮಕ್ಕಿ
ಕೇಂದ್ರ ಸಮಿತಿಯ ಕಾರ್ಯದರ್ಶಿ ನಝೀರ್ ಜಯಪುರ, ಮತ್ತು ಕೇಂದ್ರೀಯ ಸಮಿತಿಯ ನಾಯಕರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ MGT ರಿಯಾದ್ ವಲಯದ ವತಿಯಿಂದ ಧನ್ಯವಾದ ಹೇಳಿದರು,,










Comments
Post a Comment