ಮುಂಡಗೋಡು,ಮದೀನದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಬಲಿ,,
ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಿಂದ ಉಮ್ರಾ ಯಾತ್ರೆಗೆ ತೆರಳಿದ್ದ ಒಂದೇ ಕುಟುಂಬದ ಮೂವರು ಸೌದಿಅರೇಬಿಯಾದ ಮದೀನಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತಪಟ್ಟವರನ್ನು ಮುಂಡಗೋಡ ಪಟ್ಟಣದ ರೋಣ ಮೆಡಿಕಲ್‌ನ ಮಾಲಕ ಫಯಾಝ್ ರೋಣ, ಪತ್ನಿ ಆಫ್ರೀನ್ ಹಾಗೂ ಸಹೋದರನ ಮಗ ಎಂದು ಗುರುತಿಸಲಾಗಿದೆ,
ಏ.6 ರಂದು ಮದೀನಾ ಹತ್ತಿರದ ರಸ್ತೆಯಲ್ಲಿ ಅವರು ಹೋಗುತ್ತಿದ್ದ ವೇಳೆ ವಾಹನದ ಟಯರ್ ಸ್ಫೋಟಗೊಂಡು ಅಪಘಾತವಾಗಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Comments
Post a Comment