ಕೊಪ್ಪ:-ಬೆಚ್ಚಿ ಬೀಳಿಸುವ ಕಳ್ಳರ ಕಾಟ,
ಕೊಪ್ಪ:-ಬೆಚ್ಚಿ ಬೀಳಿಸುವ ಕಳ್ಳರ ಕಾಟ,
ಕೊಪ್ಪ:- ಹರಿಹರಪುರ ಠಾಣಾ ವ್ಯಾಪ್ತಿಯ ನಿಲುವಾಗಿಲು ಗ್ರಾಮಪಂಚಾಯಿತಿಗೆ ಒಳಪಟ್ಟ ಕಾಳನಾಯಕನಕಟ್ಟೆ ಎಂಬಲ್ಲಿ ಒಂದೇ ವಾರದಲ್ಲಿ ಎರಡು ಬಾರಿ ಕಳ್ಳತನ ನಡೆದಿದ್ದು, ಒಂದು ವಾರದ ಹಿಂದೆಯೇ ನಾಲಕ್ಕು ಮನೆಗಳಿಗೆ ನುಗ್ಗಿ ಸರಣಿ ಕಳ್ಳತನ ನಡೆಸಿ , ಓಮಿನಿ ಕಾರು, ಸೈಕಲ್, ರಿಕ್ಷಾ ಬ್ಯಾಟರಿ ಗಳನ್ನು ಕದ್ದಿದ್ದು, ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ,ಆರು ದಿನ ಕಳೆಯುವಷ್ಟರಲ್ಲಿ ಮತ್ತೊಮ್ಮೆ ಕಳ್ಳತನ, ತೀರಾ ಬಡತನ ಹಾಗೂ ಸಾಲದ ಸಂಕಷ್ಟ ದಲ್ಲಿದ್ದ ಗುಲಾಮಹುಸೇನ್ w/o ನಸೀಮಬಾನು ಇವರ ಮನೆಗೆ ಎರಡನೇ ಬಾರಿ ನುಗ್ಗಿದ ಕಳ್ಳರು ಅವರ ಮನೆಯಲ್ಲಿದ್ದ ದಿನನಿತ್ಯ ಉಪಯೋಗಿಸುವ ಬಟ್ಟೆ, ಪಾತ್ರೆ, ಫ್ಯಾನ್, ಮಂಚ ಇತ್ಯಾದಿ ಗಳನ್ನು ಸಂಪೂರ್ಣ ವಾಗಿ ದೋಚಿಪರಾರಿ ಯಾಗಿದ್ದಾರೆ, ಹರಿಹರಪುರ ಠಾಣಾ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದೆ, ಎರಡನೇ ಬಾರಿ ಕಳ್ಳತನ ಕ್ಕೆ ಪೋಲೀಸರ ನಿರ್ಲಕ್ಷವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ, ಈ ಪ್ರಕರಣವನ್ನು ಹರಿಹರಪುರ ಪೊಲೀಸ್ ಅಧಿಕಾರಿಗಳು ಎಷ್ಟರ ಮಟ್ಟಿಗೆ ಭೇದಿಸುತ್ತಾರೆಂದು ಕಾದು ನೋಡಬೇಕಾಗಿದೆ,
ವರದಿ:- ಶಬ್ಬೀರ್ ಅಹ್ಮದ್ hh ಪುರ

Comments
Post a Comment