ಚಿಕ್ಕಮಗಳೂರು:-ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸುಂಕಶಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬಿಳಗಲಿ ಗ್ರಾಮದಲ್ಲಿ ಸುಮಾರು 15 ರಿಂದ 20 ಮನೆಗಳಿವೆ. ಎಲ್ಲಾ ಮನೆಗಳು ಕೂಡ ಅಪಾಯದಲ್ಲಿದೆ, ದಿನದಿಂದ ದಿನಕ್ಕೆ ಜರಿತ ಇರುವ ಧರೆಗಳು ಇಲ್ಲಿನ ಗ್ರಾಮಸ್ಥರು ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಿಲ್ಲ,
ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಮನೆ ಮೇಲೆ ದೊಡ್ಡ ಗಾತ್ರದ ಕಲ್ಲುಗಳು ಬಂದು ಬಿದ್ದಿರುವ ಘಟನೆ ಬಿಳಗಲಿ ಗ್ರಾಮದಲ್ಲಿ ನಡೆದಿದೆ,
2019ರಲ್ಲಿ ಭೂಕುಸಿತ ಉಂಟಾಗಿ ಮೂರು ಮನೆಗಳು ಕೊಚ್ಚಿ ಹೋಗಿ ಆ ಮೂರು ಮನೆಯ ಕುಟುಂಬಸ್ಥರಿಗೆ ಸರ್ಕಾರದ ಅನುದಾನದಲ್ಲಿ ಮೂರು ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿತ್ತು. ಉಳಿದ ಮನೆಗಳಿಗೆ ಯಾವ ಅನುದಾನವೂ ಕೂಡ ಇಲ್ಲ,
ಗ್ರಾಮದ ಜನರಿಗೆ ಕುಡಿಯುವುದಕ್ಕೆ ನೀರು ಇಲ್ಲದೆ, ಹೆಸರಿಗೆ ಮಾತ್ರ ನೀರಿನ ಟ್ಯಾಂಕ್ ನಿರ್ಮಾಣ ಮಾಡಿ ಟ್ಯಾಂಕಿಯಿಂದ ಪೈಪ್ ಲೈನ್ ಮಾಡಿ ಅದಕ್ಕೆ ತಕ್ಕಂತೆ ಮೀಟರ್ ಗಳನ್ನು ಅಳವಡಿಸಿ ಹೋದ ಗ್ರಾಮಪಂಚಾಯಿತಿಯವರು ಇತ್ತ ಕಡೆ ಗಮನ ಹರಿಸಲೇ ಇಲ್ಲ,
ಒಂದು ಕಡೆನೀರು ಇಲ್ಲ ಇನ್ನೊಂದು ಕಡೆ ರಸ್ತೆ ಕೂಡ ಸರಿಇಲ್ಲ, ಈ ಗ್ರಾಮಕ್ಕೆ ಆಟೋ ಜೀಪ್ ಕೂಡ ಬರೋದಕ್ಕೆ ಆಗೋದೇ ಇಲ್ಲ ನಾವು ಸುಮಾರು ಎರಡು ಕಿಲೋಮೀಟರ್ ದೂರಕ್ಕೆ ನಡೆದುಕೊಂಡು ಹೋಗಬೇಕು ನಮ್ಮ ಗ್ರಾಮಕ್ಕೆ
ಜನಪ್ರತಿನಿಧಿಯಾಗಲಿ ಅಧಿಕಾರಿಗಳಾಗಲಿ, ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಇಲ್ಲಿಇರುವ ಇಪ್ಪತ್ತು ಕುಟುಂಬಗಳಿಗೆ ಬೇರೆ ಜಾಗವನ್ನು ನೀಡುತ್ತೇವೆ ಎಂದು ಉತ್ತರ ನೀಡಿದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಲೇ ಇಲ್ಲ, ಗಾಳಿ ಮಳೆಗೆ ಧರೆಗಳು ಕುಸಿದು ಬಿದ್ದು ಅಧಿಕಾರಿಗಳ ಗಮನಕ್ಕೆ ತಂದರೆ ಉಡಾಫೆ ಉತ್ತರಗಳನ್ನು ನೀಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ,

Comments
Post a Comment