ಕೊಪ್ಪ ಮೂಲದ ಸೌಮ್ಯ ಎಂಬ ಯುವತಿ ಪ್ರೀತಿಯ ಬಲೆಗೆ ಸಿಲುಕಿ ಗುರುತು ಸಿಗದ ರೀತಿಯಲ್ಲಿ ಶವವಾಗಿ ಪತ್ತೆ,
ಕೊಪ್ಪ ಮೂಲದ ಸೌಮ್ಯ ಎಂಬ ಯುವತಿ ಪ್ರೀತಿಯ ಬಲೆಗೆ ಸಿಲುಕಿ ಗುರುತು ಸಿಗದ ರೀತಿಯಲ್ಲಿ ಶವವಾಗಿ ಪತ್ತೆ,
ಕೊಪ್ಪ:- ತನ್ನ ಪ್ರಿಯತಮೆಯನ್ನೇ ಕತ್ತುಹಿಸುಕಿ ಕೊಲೆ ಮಾಡಿರುವ ಭೀಕರ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ತಾಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಸೌಮ್ಯ ಕೊಲೆಯಾದವಳು. ಸಾಗರ ಮೂಲದ ಆರೋಪಿ ಸೃಜನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಸೌಮ್ಯ ಮದುವೆಯಾಗುವಂತೆ ಸೃಜನ್ ನನ್ನು ಪೀಡಿಸುತ್ತಿದ್ದಳು ಎನ್ನಲಾಗಿದೆ. ಯುವತಿಯಿಂದ ಒತ್ತಡ ಹೆಚ್ಚಾದ ಹಿನ್ನೆಲೆ ಕೋಪಗೊಂಡ ಸೃಜನ್ ಪ್ರಿಯತಮೆಯ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಯುವತಿಯ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದ ವಿಚಾರ ಬೆಳಕಿಗೆ ಬಂದಿದೆ.
https://varthasarathi.blogspot.com/2024/07/u-e-57.html
ಫೈನಾನ್ಸ್ ವೊಂದರಲ್ಲಿ ಕೆಲಸ ಮಾಡ್ತಿದ್ದ ಸೃಜನ್ ಕೊಪ್ಪಗೆ ಹಣ ವಸೂಲಿಗೆ ಹೋಗುತ್ತಿದ್ದ. ಈ ವೇಳೆ ಸೌಮ್ಯಾಳ ಪರಿಚಯವಾಗಿತ್ತು ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿ ಕೊಲೆಯಲ್ಲಿ ಅಂತ್ಯಗೊಂಡಿತು,
ವರದಿ,ಮಜೀದ್ ಸಣ್ಣಕರೆ,

Comments
Post a Comment