ಚಿಕ್ಕಮಗಳೂರು:- ಜಿಲ್ಲೆ ಕೊಪ್ಪ ತಾಲೂಕಿನ ಗುಡ್ಡೆ ತೋಟ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಬೈರೇದೇವರು ಗ್ರಾಮ ಇದಾಗಿದ್ದು ಶೃಂಗೇರಿಯಿಂದ ಚಿಕ್ಕಮಗಳೂರು ಮಾರ್ಗವಾಗಿ ಸರಿಸುಮಾರು 13 ಕಿಲೋಮಿಟರ್ ಬರುತ್ತಿದ್ದಂತೆ ಗಡಿಕಲ್ ಎಂಬ ಗ್ರಾಮವು ಸಿಗುತ್ತದೆ ಅಲ್ಲಿಂದ ಬಲಕ್ಕೆ ತಿರುಗಿದರೆ ಮೇಗೂರು ಮಾರ್ಗವಾಗಿ ಚಲಿಸಿದರೆ ಕೊಗ್ರೆ ಗ್ರಾಮಕ್ಕೆ 18 ಕಿಲೋಮೀಟರ್ ಪ್ರಯಾಣ ಅಷ್ಟೇ,
ಅದೇ ರೀತಿಯಾಗಿ ಬೈರೇದೇವರು ಬೈಪಾಸ್ ಮೂಲಕ ಚಲಿಸಿದರೆ ಸರಿಸುಮಾರು 10 ಕಿಲೋಮೀಟರ್ ದೂರದಷ್ಟು ಸಂಚಾರ ಉಳಿತಾಯವಾಗುತ್ತದೆ ಈ ಮಾರ್ಗದಲ್ಲಿ ಅತಿ ಹೆಚ್ಚಾಗಿ ಸಂಚರಿಸುವ ವಾಹನ ಸವಾರರು ಹಾಗೂ ಪ್ರವಾಸಿಗರು ಕಳಸ ಹೊರನಾಡು ಕುದುರೆಮುಖ ಸೇರಿದಂತೆ ಶೃಂಗೇರಿ ಹೋಗುವ ಪ್ರಯಾಣಿಕರು ಅತಿ ಹೆಚ್ಚು, ಅದೇ ರೀತಿ ಈ ರಸ್ತೆಯು ಸರಿಯಿಲ್ಲದ ಕಾರಣ ವಾಹನ ಸವಾರರು ಹಾಗೂ ಗ್ರಾಮಸ್ಥರ ಗೋಳು ಕೇಳುವವರು ಯಾರು ಇಲ್ಲ ಎಂದು ಸ್ಥಳೀಯರು ಪತ್ರಿಕೆಗೆ ತಿಳಿಸಿದರು,
ವರದಿ, ಶಬ್ಬೀರ್ ಅಹ್ಮದ್ hh ಪುರ

Comments
Post a Comment