ಶೃಂಗೇರಿ, ಅಪಾಯದ ಅಂಚಿನಲ್ಲಿ ಹಜರತ್ ಜಹೂರ್ ಮೆಹಮೂದ್ ಷಾಹ್ ದರ್ಗಾ,
ಶೃಂಗೇರಿ, ಅಪಾಯದ ಅಂಚಿನಲ್ಲಿ ಹಜರತ್ ಜಹೂರ್ ಮೆಹಮೂದ್ ಷಾಹ್ ದರ್ಗಾ,
ಶೃಂಗೇರಿ:- ಪಟ್ಟಣದ ಮದ್ಯ ಭಾಗದಲ್ಲಿರುವ ಮುಸ್ಲಿಮರ ಪವಿತ್ರ ಸ್ಥಳವಾದ ಪುರಾತನ ಪವಾಡತೆ ದೈವಶಕ್ತಿ ಹಾಗೂ ಭಾವೈಕ್ಯತೆ ಯ ನಂಬಿಕೆಗೆ ಒಳಗೊಂಡ ದರ್ಗಾ ಶರೀಫ್, ಪ್ರತೀವರ್ಷವು ಕೂಡ ಇಲ್ಲಿ ಜಾತಿ ಭೇದ ಭಾವವಿಲ್ಲದೆ ಊರೂಸ್ ಇನ್ನಿತರ ಕಾರ್ಯಕ್ರಮ ಗಳು ಎಲ್ಲರೂ ಒಟ್ಟಾಗಿ ಸೇರಿ ನಡೆಸುಕೊಂಡು ಬರುತ್ತಾರೆ ಆದರೆ ಎಲ್ಲರಿಗೂ ತಿಳಿದ ಹಾಗೆ ಇದು ಶೃಂಗೇರಿ ತಾಲ್ಲೂಕು ಆಫೀಸ್ ಮುಂಭಾಗದ ಬೆಟ್ಟದ ಮೇಲಿದ್ದು ಇದರ ಅಡಿ ಭಾಗ ಸುತ್ತಲೂ ಮಣ್ಣಿನ ಧರೆಯಿಂದ ಆಗಿದ್ದು ಇದರ ಕೇಳಭಾಗದ ಮಣ್ಣು ಪ್ರತಿವರ್ಷ ಸ್ವಲ್ಪ ಸ್ವಲ್ಪನೇ ಜರಿದು ಜರಿದು ಈಗ ದರ್ಗಾದ ಬುಡಕ್ಕೆ ಬಂದು ನಿಂತಿದ್ದು ಕೇಳಭಾಗದಲ್ಲಿ ಯಾವುದೇ ರೀತಿಯಲ್ಲಿ ಆಧಾರ ಇಲ್ಲ, ದರ್ಗಾದ ಕೆಳಬಾಗದಲ್ಲಿ ಮುಖ್ಯ ರಸ್ತೆ ಭಾರತಿಬೀದಿ,ಮನೆ,ಹಾಗೂ ಅಂಗಡಿಗಳ ಕೂಡ ಅನಾಹುತಕ್ಕೆ ಒಳಪಡುವ ಸಂಭವ ಇರುವ ಕಾರಣ ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು, ಇದರ ಬಗ್ಗೆ ಆದಷ್ಟು ಬೇಗ ಗಮನ ವಹಿಸಿ ಸೂಕ್ತ ಕ್ರಮ ಕ್ಕೆ ಆಗ್ರಹಿಸ ಬೇಕೆಂದು ಶೃಂಗೇರಿ ಮುಸ್ಲಿಂ ಬಾಂಧವರು ಆಗ್ರಹಿಸಿದ್ದಾರೆ..


Comments
Post a Comment