ಚಿಕ್ಕಮಗಳೂರು:- ಜಿಲ್ಲೆಯ ಮೂಡಗೆರೆ ತಾಲೂಕಿನ ನೀಡುವಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಲಕ್ಷ್ಮಿ ಸಂತೋಷ್ ರವರ ಮನೆಗೆ ಮರ ಬಿದ್ದು ಮನೆ ಸಂಪೂರ್ಣ ಜಖಂ ಗೊಂಡಿದ್ದು, ನಿಡುವಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈಟ್ ಭಗತ್ ಸಿಂಗ್ ನಗರ ದಲ್ಲಿ ಆದ ಘಟನೆ ಇದು ಸರಿಸುಮಾರು ನಿನ್ನೆ ರಾತ್ರಿ ಹತ್ತು ಗಂಟೆಗೆ ಸಂಭವಿಸಿದೆ ಎಂದು ತಿಳಿದುಬಂದಿದೆ ಪಕ್ಕದಲ್ಲಿರುವ ನಿಡುವಳೆ ಕಲ್ಮನೆ ಸ್ಟೇಟ್ ಪಕ್ಕದಲ್ಲಿರುವ ಮನೆ ಇದಾಗಿದ್ದು ಎಸ್ಟೇಟ್ ನ ಒಳಭಾಗದಲ್ಲಿರುವ ಬೃಹತ್ ಗಾತ್ರದ ಮರ ಮನೆ ಮೇಲೆ ಬಿದ್ದು ಈ ಸಮಸ್ಯೆಯಾಗಿದೆ ಹಲವು ಬಾರಿ ಕಲ್ಮನೆ ಎಸ್ಟೇಟ್ ನ ವರಿಗೆ ತಿಳಿಸಿದರು ಸಹ ನಿರ್ಲಕ್ಷತನ ವಹಿಸಿದ್ದಾರೆ ಎಂದು ಮನೆಯ ಮಾಲೀಕ ಸಂತೋಷ್ ತಿಳಿಸಿದರು,
ಕೊಪ್ಪ ಬಸ್ ನಿಲ್ದಾಣದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ – ಕೆಡಿಪಿ ಸದಸ್ಯ ಮಹಮ್ಮದ್ ಸಾದಿಕ್ ಅವರ ಸಮಯೋಚಿತ ಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ,
ಕೊಪ್ಪ ಬಸ್ ನಿಲ್ದಾಣದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ – ಕೆಡಿಪಿ ಸದಸ್ಯ ಮಹಮ್ಮದ್ ಸಾದಿಕ್ ಅವರ ಸಮಯೋಚಿತ ಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ, ಕೊಪ್ಪ, ಜುಲೈ 16: ಕೊಪ್ಪ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ವಾಹನ ನಿಲುಗಡೆ (ಪಾರ್ಕಿಂಗ್) ಪ್ರದೇಶದಲ್ಲಿ ಅಳವಡಿಸಲಾಗಿದ್ದ ಎರಡು ಬ್ಯಾರಿಕೇಡ್ಗಳಿಂದ ಬಸ್ ಹಾಗೂ ಇತರೆ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿತ್ತು. ಒಂದೇ ಬಸ್ ಸಂಚರಿಸಲು ಅವಕಾಶವಿದ್ದ ಕಾರಣ ಬೈಕ್, ಆಟೋ ಹಾಗೂ ಇತರೆ ವಾಹನಗಳು ಪರಸ್ಪರ ಡಿಕ್ಕಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿ, ಸಣ್ಣಪುಟ್ಟ ಅಪಘಾತಗಳು ಆಗಾಗ ಸಂಭವಿಸುತ್ತಿದ್ದವು. ಈ ಸಮಸ್ಯೆಯನ್ನು ಗಮನಿಸಿದ ಕೆಡಿಪಿ ಸದಸ್ಯ ಮಹಮ್ಮದ್ ಸಾದಿಕ್ ಅವರು ತಕ್ಷಣವೇ ಪಿ ಎಸ್ ಐ ಮದು B E ಕೊಪ್ಪ ಇವರನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದರು. ಅವರ ಮನವಿಗೆ ಸ್ಪಂದಿಸಿದ ಪೊಲೀಸ್ ಇಲಾಖೆ ಸ್ಥಳಕ್ಕೆ ಆಗಮಿಸಿ ಸಂಚಾರ ವ್ಯವಸ್ಥೆಯನ್ನು ಪರಿಶೀಲಿಸಿ, ಅಗತ್ಯ ಬದಲಾವಣೆಗಳನ್ನು ಮಾಡಿತು. ಎರಡು ಬ್ಯಾರಿಕೇಡ್ಗಳ ಬದಲಾಗಿ ನಾಲ್ಕು ಬ್ಯಾರಿಕೇಡ್ಗಳನ್ನು ಸೂಕ್ತ ರೀತಿಯಲ್ಲಿ ಅಳವಡಿಸಿದ ಪರಿಣಾಮ, ಬಸ್ಗಳು ಯಾವುದೇ ತೊಂದರೆಯಿಲ್ಲದೆ ಸುಗಮವಾಗಿ ಸಂಚರಿಸುತ್ತಿವೆ. ಜೊತೆಗೆ ವಾಹನ ನಿಲುಗಡೆ ವ್ಯವಸ್ಥೆಯೂ ಉತ್ತಮಗೊಂಡಿದ್ದು, ಎರಡೂ ದಿಕ್ಕಿನಿಂದ ಬರುವ ವಾಹನ ಚಾಲಕರಿಗೆ ಸ್ಪಷ್ಟವಾಗಿ ರಸ್ತೆ ಗೋಚರಿಸುವಂತಾಗಿದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಿದ್ದು, ಅ...


Comments
Post a Comment