ಜಯಪುರ :- ಪೆರೇಂಟ್ಸ್ ಮೀಟಿಂಗ್ ಗೆ ಬಂದ ಮಹಿಳೆ ಆತ್ಮಹತ್ಯೆ,?
ಕೊಪ್ಪ :- ಪೆರೇಂಟ್ಸ್ ಮೀಟಿಂಗ್ ಗೆ ಬಂದ ಮಹಿಳೆ ಆತ್ಮಹತ್ಯೆ,?
ಕೊಪ್ಪ ತಾಲ್ಲೂಕಿನ ಜಯಪುರ ಸಮೀಪ ಕಟ್ಟೆಮನೆ ಯಲ್ಲಿ ಇರುವ "ಸತ್ಯಸಾಯಿ ಶ್ರೀನಿಕೇತನ ಮಳಿಗೆ "ವಾಸತಿಶಾಲೆ ಯಲ್ಲಿ ಇಂದು ಮುಂಜಾನೆ ಬೆಂಗಳೂರು ಚಿಕ್ಕಬಳ್ಳಾಪುರ ಮೂಲದ ಚೈತ್ರ ಗಜೇಂದ್ರ(33),ಆತ್ಮಹತ್ಯೆ ಮಾಡಿ ಕೊಂಡ ಮಹಿಳೆ,
ಪೆರೇಂಟ್ಸ್ ಮೀಟಿಂಗ್ ಗೆಂದು ಬಂದವರು ಇಂದು ಮುಂಜಾನೆ ಬೆಳ್ಳಮ್ ಬೆಳಗ್ಗೆ ಸುಮಾರು ನಾಲ್ಕು ಗಂಟೆಗೆ ಶಾಲೆಯ 3ನೇ ಮಹಡಿ ಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ,ಮಹಿಳೆ ಚಿಕ್ಕಬಳ್ಳಾಪುರ ಮೂಲದವರಾಗಿದ್ದು ಇವರು ಹೂವಿನ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ, ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಕೊಪ್ಪ ಮಂಜುನಾಥ್ ಸಿ ಪಿ ಐ, ಹಾಗೂ ಜಯಪುರ ಪೊಲೀಸ್ ಠಾಣಾಧಿಕಾರಿ ಅಂಬರೀಷ್ ಪಿ ಎಸ್ ಐ, ನೇತೃತ್ವದಲ್ಲಿ ತಿಳಿದು ಬಂದಿದ್ದು ಶವ ವನ್ನು ಕೊಪ್ಪ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ, ಇನ್ನೂ ಹೆಚ್ಚಿನ ವಿಷಯ ಪೊಲೀಸರು ತನಿಖೆ ಯಿಂದ ತಿಳಿಯ ಬೇಕಾಗಿದೆ.
ಒಬ್ಬಳೇ ಮಗಳು ಅರ್ಪಿತಾ 8ನೇ ತರಗತಿಯಲ್ಲಿ ಓದುತಿದ್ದು ಪೆರಂಟ್ಸ್ ಮೀಟಿಂಗ್ ಇವರನ್ನು ಕರೆಯಲಾಗಿತ್ತು ಎನ್ನಲಾಗಿದೆ,
🖋 ಶಬ್ಬೀರ್ ಅಹ್ಮದ್ hh ಪುರ

Comments
Post a Comment