Posts

Showing posts from August, 2024

ಎನ್ ಆರ್ ಪುರ,ಸಾಲ ಭಾದೆ :- ಮನನೊಂದ ರೈತ ಆತ್ಮಹತ್ಯೆ "

Image
  ಸಾಲ ಭಾದೆ :- ಮನನೊಂದ ರೈತ ಆತ್ಮಹತ್ಯೆ "        ಎನ್ ಆರ್ ಪುರ ತಾಲೂಕಿನ ಮೆಣಸೂರಿನ ಬಸ್ ನಿಲ್ದಾಣದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ  ಬೆಳಕಿಗೆ ಬಂದಿದೆ.  ತಿಮ್ಮಪ್ಪ ಗುರುವಾ (50)ಆತ್ಮಹತ್ಯೆ ಮಾಡಿಕೊಂಡಿರುವ ರೈತ, ಕೃಷಿ ಅಭಿವೃದ್ಧಿಗಾಗಿ ಸ್ವಸಹಾಯ ಸಂಘದಲ್ಲಿ 5 ಲಕ್ಷ ಸಾಲ ಮಾಡಿದ್ದು ಸರಿಯಾದ ಬೆಳೆ ಬಾರದೆ ಇದ್ದು ಮನನೊಂದು ಪಕ್ಕದ ಬಸ್ ನಿಲ್ದಾಣದಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಕುರಿತು ಎನ್ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ,ಶಬ್ಬೀರ್ ಅಹ್ಮದ್ hh ಪುರ 

ಮಂಡ್ಯದಲ್ಲಿ ವಿವಾಹಿತೆಯ ಅನುಮಾನಸ್ಪದ ಸಾವು.ಭಯ ದಿಂದ ಕೆರೆಗೆ ಹಾರಿ ಪತಿಯೂ ಆತ್ಮಹತ್ಯೆ....!

Image
  ಮಂಡ್ಯದಲ್ಲಿ ವಿವಾಹಿತೆಯ ಅನುಮಾನಸ್ಪದ ಸಾವು.ಭಯ ದಿಂದ ಕೆರೆಗೆ ಹಾರಿ ಪತಿಯೂ ಆತ್ಮಹತ್ಯೆ....! ಮಂಡ್ಯ: ಮಂಡ್ಯದಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ರೊಚ್ಚಿಗೆದ್ದ ಗೃಹಿಣಿ ಪೋಷಕರು, ಕುಟುಂಬಸ್ಥರು ಪತಿ ಮನೆಗೆ ಬೆಂಕಿಯಿಟ್ಟ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ಗದ್ದೆ ಹೊಸೂರು ಗ್ರಾಮದ ಸ್ವಾತಿ ( 21) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಸ್ವಾತಿಯ ಪತಿ ಮೋಹನ್ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೋಹನ್ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ. ಇನ್ನೂ ಪತಿ ಮೋಹನ್ ಕೂಡ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದ್ದು, ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ವರದಿ,ಶಬ್ಬೀರ್ ಅಹ್ಮದ್ hh ಪುರ 

ಬಿದರಗೋಡು :- ಪಿಕಪ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಸಾವು,

Image
  ತೀರ್ಥಹಳ್ಳಿ,  ಬಿದರಗೋಡು :- ಪಿಕಪ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಸಾವು,                   ತೀರ್ಥಹಳ್ಳಿ (ವಾರ್ತಾ ಸಾರಥಿ) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬಿದರಗೋಡಿನ ಹೊಸಳ್ಳಿ ಬಳಿ ಈ ಘಟನೆ ನಡೆದಿದ್ದು ಬೈಕ್ ಸವಾರ ಅಗಸರ ಕೋಣೆಯ ಶರತ್ (35)ಹಾಗೂ ಪಿಕಪ್ ವಾಹನ ದಲ್ಲಿದ್ದ ಇನ್ನೊರ್ವ ವ್ಯಕ್ತಿ ಕೇರಳ ದವರೆಂದು ತಿಳಿದು ಬಂದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. https://youtu.be/_S4tLT3pgvk             ಬಿದರಗೋಡು ಮಾರ್ಗವಾಗಿ ಚಲಿಸುತ್ತಿದ್ದ ಬೈಕ್ ಗೆ ಪಿಕಪ್ ವಾಹನ ಏಕಾಏಕಿ ಡಿಕ್ಕಿ ಯಾಗಿದ್ದು ಬೈಕ್ ನಲ್ಲಿದ್ದ ಶರತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಇನ್ನೂ ಪಿಕಪ್ ವಾಹನ ವೇಗವಾಗಿ ಚಲಿಸುತ್ತಿದ್ದ ಕಾರಣ ಪಿಕಪ್ ನಲ್ಲಿಕುಳಿತಿದ್ದ ಕೇರಳದ ವ್ಯಕ್ತಿ ಬಾವಿಕೆಲಸ ಮಾಡುವವ ರೆಂದು ತಿಳಿದಿದ್ದು ಗುಂಡಿಗೆ ಬಿದ್ದಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದು ಪಿಕಪ್ ಚಾಲಕ ಸಂತೋಷ್ ಸ್ಥಳದಿಂದ  ಪರಾರಿ ಯಾಗಿರುವುದು ತಿಳಿದಿರುತ್ತದೆ.   ಘಟನಾ ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿನೀಡಿ ಪರಿಶೀಲನೆ ಮಾಡಿರುತ್ತಾರೆ. ವರದಿ,ಶಬ್ಬೀರ್ ಅಹ್ಮದ್ hh ಪುರ 

ಶಿಕ್ಷಕರ ನ್ಯಾಯಯುತ ಹೋರಾಟಕ್ಕೆ ಬೆಂಬಲ; ಜಿಲ್ಲಾ SDMC ಸಮನ್ವಯ ವೇದಿಕೆ,

Image
  ಶಿಕ್ಷಕರ ನ್ಯಾಯಯುತ ಹೋರಾಟಕ್ಕೆ ಬೆಂಬಲ; ಜಿಲ್ಲಾ SDMC ಸಮನ್ವಯ ವೇದಿಕೆ,  1 ರಿಂದ 7 ನೇ ತರಗತಿಗೆ ನೇಮಕಾತಿಯಾದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ  ಶಾಲೆಯಲ್ಲಿ ಹಲವು ವರುಷ ಗಳಿಂದ  ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ  ಹಿಂಬಡ್ತಿ ನೀಡಿರುವುದನ್ನು ವಿರೋಧಿಸಿ ಹಾಗೂ ಈ  ಹಿಂದಿನಂತೆ ಮುಖ್ಯ ಗುರುಗಳ ಹುದ್ದೆ , ಪ್ರೌಢ ಶಾಲೆಗೆ ಭಡ್ತಿ ನೀಡುತ್ತಿರುವುದನ್ನು ಮುಂದುವರಿಸುವ ಕುರಿತು ಶಿಕ್ಷಕರು ಹೋರಾಟಕ್ಕೆ ಕರೆ ಕೊಟ್ಟಿದ್ದು ಅವರ ನ್ಯಾಯಯುತ ಹೋರಾಟಕ್ಕೆ ಸರಕಾರ ಕೂಡಲೇ ಸ್ಪಂದಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷ   ಇಸ್ಮಾಯಿಲ್  SM. ನೆಲ್ಯಾಡಿ ಈ ಮೂಲಕ ಸರಕಾರವನ್ನ ಒತ್ತಾಯಿಸಿದ್ದಾರೆ

ಕುವೈತ್,K C F,ರಾಷ್ಟ್ರೀಯ ಸದಸ್ಯತ್ವ ಅಭಿಯಾನ,

Image
  ರಾಷ್ಟ್ರೀಯ ಸದಸ್ಯತ್ವ ಅಭಿಯಾನ, ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ಸಂಘಟನಾ ವಿಭಾಗದ ವತಿಯಿಂದ 2024 ರ ಸದಸ್ಯತ್ವ ಅಭಿಯಾನದ ಅಂಗವಾಗಿ ಬದಲಾವಣೆಯ ಭಾಗವಾಗಿರಿ ಎಂಬ ಘೋಷವಾಕ್ಯದೊಂದಿಗೆ ರಾಷ್ಟ್ರೀಯ  ಕಾರ್ಯಗಾರ ಕಾರ್ಯಕ್ರಮ ದಿನಾಂಕ  02/08/2024 ಶುಕ್ರವಾರ ಜುಮಾ ನಮಾಝಿನ ನಂತರ ಸಾಲ್ಮಿಯ ಸುನ್ನಿ ಸೆಂಟರ್ ಹಾಲ್ ನಲ್ಲಿ ಕೆಸಿಎಫ್  ಸಂಘಟನಾ ಅಧ್ಯಕ್ಷರಾದ ಉಮರ್ ಝುಹ್ರಿ ಉಸ್ತಾದರ ಅಧ್ಯಕ್ಷತೆಯಲ್ಲಿ ಕೆಸಿಎಫ್ ರಾಷ್ಟ್ರೀಯ ನಾಯಕರಾದ ಉಮರ್ ಫಾರೂಕ್ ಸಖಾಫಿ ಉಸ್ತಾದರ ದುವಾದೊಂದಿಗೆ ಆರಂಭವಾಯಿತು. ಶೃಂಗೇರಿ ಅಪಾಯದ ಅಂಚಿನಲ್ಲಿ ದರ್ಗ,ಓದಲು ಕ್ಲಿಕ್ ಮಾಡಿ👈 ಸ್ಮಗ್ಲಿಂಗ್ ಗಗನಸಖಿಯ ಬಂಧನ, ಓದಲು ಇಲ್ಲಿ ಕ್ಲಿಕ್ ಮಾಡಿ,👈 ಸದಸ್ಯತ್ವ ಅಭಿಯಾನದ ಬಗ್ಗೆ ಕೆಸಿಎಫ್ I C  ಸಂಘಟನಾ ಕಾರ್ಯದರ್ಶಿ ಹಾಫಿಲ್ ಉಮರ್ ಫಾರೂಕ್ ಸಖಾಫಿ ಹಾಗೂ ಕೆಸಿಎಫ್ I C  ಕಾರ್ಯಕಾರಿ ಸದಸ್ಯ ಜನಾಬ್ ಝಕರಿಯಾ ಆನೆಕಲ್ ಉತ್ತಮವಾಗಿ ತರಗತಿ ನಡೆಸಿಕೊಟ್ಟರು.ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ಕುವೈಟ್ ಫೈನಾನ್ಸ್ ಕಂಟ್ರೋಲ್ ಜನಾಬ್ ಮೂಸ ಇಬ್ರಾಹಿಮ್ ನಡೆಸಿದರು.ಆಶಂಷ ಭಾಷಣವನ್ನು ಕೆಸಿಎಫ್ ಕುವೈಟ್ ಅಧ್ಯಕ್ಷರಾದ ಹುಸೈನ್ ಎರ್ಮಾಡ್ ಉಸ್ತಾದರು ನಡೆಸಿದರು.ಕೊನೆಯಲ್ಲಿ ದುವಾ ಕೆಸಿಎಫ್ ಅಂತರರಾಷ್ಟ್ರೀಯ ಆಡಳಿತ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಸಖಾಫಿ  ನಡೆಸಿದರು.ಕಾರ್ಯಕ್ರಮದಲ್ಲಿ ಕೆಸಿಎಫ್ ರಾಷ್ಟ್ರೀಯ ನಾಯಕರು,ಝೋನ್ ,ಸೆಕ್ಟರ್ ನಾಯಕ...

ಗಗನಸಖಿಯ ಬಂಧನ,ಅಕ್ರಮ ಕರೆನ್ಸಿ ಕಳ್ಳಸಾಗಣಿಕೆ,

Image
  ಗಗನಸಖಿಯ ಬಂಧನ,ಅಕ್ರಮ ಕರೆನ್ಸಿ ಕಳ್ಳಸಾಗಣಿಕೆ, 140,000 ಸೌದಿ ರಿಯಲ್ ಕಳ್ಳಸಾಗಣೆಗಾಗಿ ಪಾಕಿಸ್ತಾನ್ಇಂಟರ್ನ್ಯಾಷನಲ್ ಏರ್ಲೈನ್ಸ್ ಗಗನಸಖಿಯನ್ನು ಬಂಧಿಸಲಾಗಿದೆ, ಮಹಿಳಾ ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ (PIA) ಫ್ಲೈಟ್ ಅಟೆಂಡೆಂಟ್ 140,000 ರಿಯಲ್ ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದಾಗ ಸಿಕ್ಕಿಬಿದ್ದಿದ್ದಾರೆ. ಲಾಹೋರ್‌ನ ಅಲ್ಲಾಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಾಹೋರ್‌ನಿಂದ ದುಬೈಗೆ PIA ಯ PK 203 ವಿಮಾನವನ್ನು ಹತ್ತುತ್ತಿರುವಾಗ ಕಸ್ಟಮ್ಸ್ ಅಧಿಕಾರಿಗಳು ತಡೆದು ತಪಾಸಣೆ ನಡೆಸಿದರು, ತಪಾಸಣೆಯ ನಂತರ, ಆಕೆ ತನ್ನ ಸಾಕ್ಸ್‌ಗಳಲ್ಲಿ SR 140,000 ಅನ್ನು ಬಚ್ಚಿಟ್ಟಿದ್ದಾರೆ ಎಂದು ಕಂಡುಹಿಡಿದರು. ಗಗನಸಖಿಯ ಬಂಧನ,ವಿಡಿಯೋ ನೋಡಲು ಕ್ಲಿಕ್ ಮಾಡಿ👈 ಡಿಸಿ ಕಸ್ಟಮ್ಸ್ ರಾಜಾ ಬಿಲಾಲ್ ಪ್ರಕಾರ, ಅಧಿಕಾರಿಗಳು ಗುಪ್ತ ಕರೆನ್ಸಿಯನ್ನು ಪತ್ತೆ ಮಾಡಿದ ನಂತರ ಗಗನಸಖಿಯನ್ನು ಜಿದ್ದ ವಿಮಾನದಿಂದ ತೆಗೆದುಹಾಕಲಾಯಿತು. 37,000 ಡಾಲರ್‌ಗೆ ಸಮಾನವಾದ ಮೊತ್ತವು ತಪಾಸಣೆಯ ಸಮಯದಲ್ಲಿ ಪತ್ತೆಯಾಗಿದೆ.  ಕಸ್ಟಮ್ಸ್ ಅಧಿಕಾರಿಗಳು ಈ ವಿಮಾನಕ್ಕಾಗಿ ಕರೆನ್ಸಿ ಕಳ್ಳಸಾಗಣೆ ಕಾರ್ಯಾಚರಣೆಯನ್ನು ಸೂಚಿಸುವ ಗುಪ್ತಚರ ವರದಿಗಳನ್ನು ಹೊಂದಿದ್ದರು. ಕೂಡಲೇ ಪ್ರತಿಕ್ರಿಯಿಸಿದ ಕಸ್ಟಮ್ಸ್ ಅಧಿಕಾರಿಗಳು ಗಗನಸಖಿಯನ್ನು ತನಿಖಾಧಿಕಾರಿಗೆ ಸೂಚಿಸಿ, ಆಕೆಯ ವಿರುದ್ಧ ಪ್ರಕರಣ ದಾಖಲಿಸಲಿದ್ದಾರೆ. ವಾರ್ತಾಸಾರಥಿ,ವಾಟ್ಸ್ಆಪ್ ಗ್ರೂಪ್ ಸೇರಲು ...