ಮಂಡ್ಯದಲ್ಲಿ ವಿವಾಹಿತೆಯ ಅನುಮಾನಸ್ಪದ ಸಾವು.ಭಯ ದಿಂದ ಕೆರೆಗೆ ಹಾರಿ ಪತಿಯೂ ಆತ್ಮಹತ್ಯೆ....!
ಮಂಡ್ಯದಲ್ಲಿ ವಿವಾಹಿತೆಯ ಅನುಮಾನಸ್ಪದ ಸಾವು.ಭಯ ದಿಂದ ಕೆರೆಗೆ ಹಾರಿ ಪತಿಯೂ ಆತ್ಮಹತ್ಯೆ....!
ಮಂಡ್ಯ: ಮಂಡ್ಯದಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ರೊಚ್ಚಿಗೆದ್ದ ಗೃಹಿಣಿ ಪೋಷಕರು, ಕುಟುಂಬಸ್ಥರು ಪತಿ ಮನೆಗೆ ಬೆಂಕಿಯಿಟ್ಟ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ಗದ್ದೆ ಹೊಸೂರು ಗ್ರಾಮದ ಸ್ವಾತಿ ( 21) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಸ್ವಾತಿಯ ಪತಿ ಮೋಹನ್ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೋಹನ್ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನೂ ಪತಿ ಮೋಹನ್ ಕೂಡ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದ್ದು, ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ವರದಿ,ಶಬ್ಬೀರ್ ಅಹ್ಮದ್ hh ಪುರ

Comments
Post a Comment