ಕುವೈತ್, ಕೆ ಸಿ ಎಫ್ ಕುವೈತ್ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್-2024,
ಕೆಸಿಎಫ್ ಕುವೈತ್ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್-2024
ಮುತ್ತು ನಬಿ (ﷺ) ಮಾನವೀಯತೆಯ ಮಾರ್ಗದರ್ಶಿ ಎಂಬ ಘೋಷ ವಾಕ್ಯದೊಂದಿಗೆ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್ ದಿನಾಂಕ ಸೆಪ್ಟೆಂಬರ್ 06 ಶುಕ್ರವಾರ 5:30pm ಸರಿಯಾಗಿ ಅಬ್ಬಾಸಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಬಹು ಬಾದಾಷ ಸಖಾಫಿ ಹಾಗೂ ಕೆಸಿಎಫ್ ಕುವೈಟ್ ರಾಷ್ಟ್ರೀಯ ಪ್ರಚಾರ ವಿಭಾಗದ ಅಧ್ಯಕ್ಷರಾದ ಸಾಹುಲ್ ಹಮೀದ್ ಸಹದಿ ಝುಹ್ರಿ ಹಾಗೂ ಕೆಸಿಎಫ್ ಕುವೈಟ್ ಉಲಮಾ, ಉಮರಾ ನಾಯಕರ ಉಪಸ್ಥಿತಿಯಲ್ಲಿ ಮೌಲೂದ್ ಪರಾಯಣದೊಂದಿಗೆ ಆರಂಭವಾಯಿತು.
ವೈಟ್ ಲಿಫ್ಟಿಂಗ್‌ನಲ್ಲಿ ಫಾಝಿಲ್ ರೆಹಮಾನ್,ಚಿನ್ನದಪದಕ,ವಿಡಿಯೋ ನೋಡಲು ಕ್ಲಿಕ್ಕ್ ಮಾಡಿ,
ಕೆಸಿಎಫ್ ಕುವೈಟ್ ನೋರ್ತ್ ಝೋನ್ ಅಧ್ಯಕ್ಷ ರಾದ ಜನಾಬ್ ಕಲಂದರ್ ಶಾಫಿ ಕಿರಾಹತ್ ಪಠಿಸಿದರು.ಕೆಸಿಎಫ್ ಕುವೈಟ್ ಉರ್ದು ವಿಂಗ್ ಕಾರ್ಯಕರ್ತ ಮುಹಮ್ಮದ್ ಸಬಾಝ್ ನಾತ್ ಹಾಡಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ಕುವೈಟ್ ರಾಷ್ಟ್ರೀಯ ನಾಯಕರಾದ ಬಹು ಫಾರೂಕ್ ಸಖಾಫಿ ಉದ್ಘಾಟಿಸಿದರು,
ಕೆಸಿಎಫ್ ಕುವೈಟ್ ಪ್ರಧಾನ ಕಾರ್ಯದರ್ಶಿ ಜನಾಬ್ ಯಾಕೂಬ್ ಕಾರ್ಕಳ ಸ್ವಾಗತಿಸಿ ಕೆಸಿಎಫ್ ಸಂಘಟನೆಯು ಅಹ್ಲ್ ಸುನ್ನತ್ ವಲ್ ಜಮಾ ಇದರ ಸಿದ್ಧಾಂತವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಂದು ಅತಿಥಿಗಳನ್ನು ಹಾಗೂ ಸಭಿಕರನ್ನು ಸ್ವಾಗತಿಸಿದರು.
ಕೆಸಿಎಫ್ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಬಹು ಹುಸೈನ್ ಮುಸ್ಲಿಯಾರ್ ಏರುಮಾಡ್ ಅವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಯೋಜನೆಯನ್ನು ನಾವೆಲ್ಲರೂ ನೋಡಿದ್ದೇವೆ ಉತ್ತರ ಕನ್ನಡ ಜಿಲ್ಲೆಯ ಮುಸ್ಲಿಂ ಹಿಂದುಳಿದ ಮಕ್ಕಳ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣಕ್ಕೆ ಕೆಸಿಎಫ್ ಉದಾರ ಕೊಡುಗೆ ಯನ್ನು ನೀಡುತ್ತಲೇ ಇದೆ ಎಂದರು.
ಈದ್ ಮೀಲಾದ್ ಕಾರ್ಯಕ್ರಮದ ಛೇರ್ಮನ್ ಬಹು ಅಬ್ದುಲ್ ರಹ್ಮಾನ್ ಸಖಾಫಿ ಮಾತನಾಡಿ ಈದ್ ಮೀಲಾದ್ ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಮರೆವಂತಿಲ್ಲ ಅವರನ್ನು ಶುಭಹಾರೈಸಿದರು ಹಾಗೂ
ಮುಖ್ಯ ಅತಿಥಿ, ಹಂಝ ಮುಸ್ತಫಾ CEO MMC ಹಾಗೂ TVS ಕಾರ್ಗೋ ಮಾಲಕರಾದ ಹೈದರ್ ಹಾಜಿ ಹೈದರ್ ಗ್ರೂಪ್, ಶೈಖ್ ಹಸನ್ ಬಾದಾಷ ಇವರಿಗೆ KCF ನೆನಪಿನ ಕಾಣಿಕೆ ಕೊಟ್ಟು ಸನ್ಮಾನ ಮಾಡಲಾಯಿತು.ಕೆಸಿಎಫ್ IC ನಾಯಕರಾದ ಜನಾಬ್ ಝಕರ್ರಿಯ್ಯಾ ಆನೆಕಲ್ ಅವರ ನೇತ್ರತ್ವದಲ್ಲಿ ನಡೆಸಿದ ಡಿಜಿಟಲ್ ಇ ಸುವನಿಯರ್ ಈ ಸಂಧರ್ಭದಲ್ಲಿ ಅನಾವರಣ ಗೊಳಿಸಲಾಯಿತು.
ಹಳದಿಬಣ್ಣದ ಪಟ್ಟಿಯಮೇಲೆ ವಾಹನ ಸಂಚರ,ಒಂದು ಸಾವಿರ ರಿಯಾಲ್ ದಂಡ,?
ಮುಖ್ಯ ಅತಿಥಿಯಾಗಿ ಆಗಮಿಸಿದ ಸಯ್ಯದ್ ತ್ವಾಹ ತಂಞಳ್ ಅವರು ಬುರ್ದಾ ಮಜ್ಲಿಸ್ ಹಾಗೂ ನಾತ್ ಮೂಲಕ ಕೇಳುಗರ ಕಿವಿಗಳನ್ನು ಝೇಂಕಾರದ ಮೂಲಕ ಮದೀನಾಕ್ಕೆ ಕೊಂಡೊಯಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿ ತೈಬಾ ಗಾರ್ಡನ್ ಎಜುಕೇಸನ್ ಸೆಂಟರ್ ಬಂಗ್ಲೆಗುಡ್ಡೆ ಕಾರ್ಕಳ ಇದರ ಚೆಯರ್ಮ್ಯಾನ್ ಸೈಯದ್ ಅಬ್ದುಲ್ ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ಅವರ ಉಪದೇಶ ಹಾಗೂ ಭಕ್ತಿನಿರ್ಭಯ ದುವಾ ಎಲ್ಲಾರ ಮನಸ್ಸನ್ನು ಪುಲಕಿತಗೊಳಿಸಿತು.
ಶೈಕ್ಷಣಿಕವಾಗಿ SSLC ಹಾಗೂ ದ್ವಿತೀಯ PU ಪರೀಕ್ಷೆಯಲ್ಲಿ ಅತೀ ಹೆಚ್ಚಿನ ಅಂಕ ಪಡೆದ ಕೆಸಿಎಫ್ ಕುವೈಟ್ ಕಾರ್ಯಕರ್ತರ ಮಕ್ಕಳಿಗೆ ಸ್ಟೂಡೆಂಟ್ ಅವಾರ್ಡ್ ಕೊಟ್ಟು ಸನ್ಮಾನಿಸಲಾಯಿತು, ICF ಅಧ್ಯಕ್ಷರು ಅಲವಿ ತಂಜೇರಿ ಶುಭ ಹಾರೈಸಿದರು, KCF ದಪ್ಪು ತಂಡದ ಪ್ರದರ್ಶನ ಎಲ್ಲರ ಮನ ಮುಟ್ಟಿತು. ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷರು ಉಮರ್ ಝಹ್ರಿ, ಕಾಸಿಂ ಉಸ್ತಾದ್ ಬೆಲ್ಮಾ ಯೂಸುಫ್ ಮಂಚಕಲ್ಲ್,ಇಕ್ಬಾಲ್ ಕಂದಾವರ, ಮೂಸಾ ಇಬ್ರಾಹಿಂ, ಇಬ್ರಾಹಿಂ ವೇಣೂರ್, ಅಬ್ದುಲ್ ಮಲಿಕ್,ಶೌಕತ್ ಶಿರ್ವ,ತೌಫೀಕ್ ಕಾರ್ಕಳ,ಮುಸ್ತಫಾ ಉಳ್ಳಾಲ,ಉಸ್ಮಾನ್ ಕೊಡಿ ಹಾಗೂ ರಾಷ್ಟ್ರೀಯ, ಝೋನ್, ಸೆಕ್ಟರ್ ಸಮಿತಿಯ ನಾಯಕರು ಉಪಸ್ಥಿತಿದ್ದರು.
ಕೆಸಿಎಫ್ ಕುವೈಟ್ EYE ಟೀಮ್ ಅಚ್ಚು ಕಟ್ಟಾದ ಸ್ವಯಂಸೆವಕರೆಂದು ಎಲ್ಲಾರ ಪ್ರೀತಿಗೆ ಪಾತ್ರರಾದರು, ಕಾರ್ಯಕ್ರಮದ ನಿರೂಪಣೆಯನ್ನು ಜಹರ ಸೆಕ್ಟರ್ ಅಧ್ಯಕ್ಷರು ಶಫೀಕ್ ಅಹ್ಸನಿ ನಿರೂಪಿಸಿ ದರು.ಕೆಸಿಎಫ್ ಕುವೈಟ್ ರಾಷ್ಟ್ರೀಯ ಆಡಳಿತ ಅಧ್ಯಕ್ಷರಾದ ಅಬ್ಬಾಸ್ ಬಳಂಜ ಧನ್ಯವಾದಹೇಳಿದರು, ಕೊನೆಯಲ್ಲಿ ಆಗಮಿಸಿದ ಎಲ್ಲರಿಗೂ ತಬರುಕ್ ನೀಡಲಾಯಿತು.
ವಾರ್ತಾ ಸಾರಥಿ ವಾಟ್ಸ್ಆಪ್ ಗ್ರೂಪಿಗೆ ಸೇರಲು ಇಲ್ಲಿ ಒತ್ತಿ,
ವರದಿ : ಪ್ರಕಾಶನ ಮತ್ತು ಪ್ರಸಾರ ವಿಭಾಗ ಕೆಸಿಎಫ್ ಕುವೈಟ್.














Comments
Post a Comment