ರಿಯಾದ್:-ಮಲೆನಾಡ ಸಂಗಮದೊಂದಿಗೆ ವಿಜ್ರಂಭಣೆಯಿಂದ ಕನ್ನಡ ರಾಜ್ಯೋತ್ಸವದ ಆಚರಿಸಿದ ಮಲೆನಾಡ ಕನ್ನಡಿಗರು,
ಸೌದಿಅರೇಬಿಯ ರಿಯಾದಿನಲ್ಲಿ ಮಲೆನಾಡ ಸಂಗಮದೊಂದಿಗೆ ವಿಜ್ರಂಭಣೆಯಿಂದ ಕನ್ನಡ ರಾಜ್ಯೋತ್ಸವದ ಆಚರಿಸಿದ ಮಲೆನಾಡ ಕನ್ನಡಿಗರು,
ಹಲವಾರು ವರ್ಷಗಳಿಂದ ಸಮಾಜ ಸೇವೆಗಳನ್ನು ತಮ್ಮ ಧ್ಯೇಯವಾಗಿಟ್ಟುಕೊಂಡು, ಸೌದಿ ಅರೇಬಿಯಾದಲ್ಲಿರುವ ಮಲೆನಾಡಿಗರು ಕಾರ್ಯರೂಪಕ್ಕೆ ತಂದಿರುವ ಎಂ.ಜಿ.ಟಿ ಸಂಘಟನೆಯ ಮಲೆನಾಡು ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆಯಿಂದ ನವೆಂಬರ್ 14 ರ ಗುರುವಾರ ಸೌದಿ ಅರೇಬಿಯಾದ,ರಾಜಧಾನಿ ರಿಯಾದ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಮಲೆನಾಡ ಸಂಗಮ 2024 ರ ಕಾರ್ಯಕ್ರಮದಲ್ಲಿ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ರಾಜ್ಯ ಭಾವುಟವನ್ನು ಪ್ರದರ್ಶಿಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಬಿಸಿ ವಿದೇಶದಲ್ಲಿ ಕನ್ನಡ ನಾಡಿನಲ್ಲಿಯೂ ಕನ್ನಡ ನಾಡಿನ ಹೆಮ್ಮೆಯ ಕಂಪನ್ನು ಹರಡಿಸಿದರು,ಮಲೆನಾಡಿನ ಭೋಜನದೊಂದಿಗೆ ಪ್ರಾರಂಭ ಗೊಂಡ ಕಾರ್ಯಕ್ರಮ ವಿವಿಧ ಅಟೋಟ ಸ್ಪರ್ಧೆಯಲ್ಲಿ ಕಾರ್ಯಕ್ರಮ ಕೊನೆಗೊಂಡಿತು,
ಕಾರ್ಯಕ್ರಮದಲ್ಲಿ
ಎಂ. ಜಿ. ಟಿ ಯ ಭಾರತ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಕ್ರಮ್ ಹಾಜಿ,ಮತ್ತು ಎಂ ಜಿ ಟಿ ಟ್ರಸ್ಟ್ ಅಧ್ಯಕ್ಷರಾದ ಯೂಸುಫ್ ಹಾಜಿ,
ಎಂ ಜಿ ಟಿ ಕೇಂದ್ರ ಸಮಿತಿ ಸೌದಿಅರೇಬಿಯ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಜಯಪುರ ಹಾಗೂ ಎಂ.ಜಿ.ಟಿ ರಿಯಾದ್ ಝೋನ್ ಅಧ್ಯಕ್ಷರಾದ ಇರ್ಷಾದ್ ಅಬ್ದುಲ್ ರಹಿಮಾನ್ ಚಕ್ಮಕ್ಕಿ,ಪ್ರಧಾನ ಕಾಯಿದರ್ಶಿ ಅನ್ಸರ್ ಚಕ್ಮಕ್ಕಿ,ಎಂ ಜಿ ಟಿ ಸ್ಥಾಪಕ ಅಧ್ಯಕ್ಷರಾದ ಬಶೀರ್ ಬಾಳುಪೇಟೆ,ಎಂ ಜಿ ಟಿ ಜಿದ್ದ ಕಮಿಟಿಯ ಅಧ್ಯಕ್ಷರಾದ ಇಕ್ಬಾಲ್ ಗಬ್ಗಲ್,ಎಂ ಜಿ ಟಿ ಜುಬೈಲ್ ಕಮಿಟಿಯ ಅಧ್ಯಕ್ಷರಾದ ಶಮೀಮ್ ಅಹ್ಮದ್,ಡಿ ಕೆ ಎಂ ಓ, ಅಧ್ಯಕ್ಷರಾದ ಫಝೂಲ್ ರಹ್ಮಾನ್,ಎಂ ಜಿ ಟಿ ಕೇಂದ್ರ ಸಮಿತಿಯ ಗೌರವಾಧ್ಯಕ್ಷ ಅಬುಬಕ್ಕರ್ ಅಂಡುಗೋಳಿ,ಎಂ ಜಿ ಟಿ ಕೇಂದ್ರ ಸಮಿತಿಯ ಟ್ರಸ್ಟೀ ಶರೀಫ್ ಕಳಸ,ಸೈಯದ್ ಅಹ್ಮದ್ ಶಾಹಿನ್ ಸಂಸ್ಥೆ,
ವಾರ್ತಾ ಸಾರಥಿ ಮಾದ್ಯಮದ ಪ್ರಧಾನ ಸಂಪಾದಕರಾದ ಅಬ್ದುಲ್ ರಹಿಮಾನ್ ಸಣ್ಣಕೆರೆ, ಕರ್ನಾಟಕ ರಕ್ಷಣಾ ವೇದಿಕೆಯ ಮುಹಮ್ಮದ್ ಸುಫೈದ್ ಕೊಪ್ಪ ಉಪಸ್ಥಿತರಿದ್ದರು.











Comments
Post a Comment