ಕೆ ಸಿ ಎಫ್,ಕೊಪ್ಪಳ ಜಿಲ್ಲೆಯಲ್ಲಿ ನಡೆಯಲಿರುವ ಇಹ್ಸಾನೋತ್ಸವ-2025,
ಇಹ್ಸಾನೋತ್ಸವ-2025 ಸ್ವಾಗತ ಸಮಿತಿ ರಚನೆ; ಕೊಪ್ಪಳ ಜಿಲ್ಲೆಯಲ್ಲಿ ಜನವರಿ 19ಮತ್ತು 20ರಂದು ನಡೆಯಲಿದೆ, ಮಂಗಳೂರು; ಡಿ25 . ಕನ್ನಡ ನಾಡಿನ ಅಲ್ಪಸಂಖ್ಯಾತ ಸಮುದಾಯದ ಶೈಕ್ಷಿಣಿಕ ಹಿಂದುಳಿದ ಪ್ರದೇಶಗಳ ಸಬಲೀಕರಣಕ್ಕೆ ಸುನ್ನೀ ಸಂಘ ಕುಟುಂಬದ ಪ್ರತಿಬಧ್ಧತೆಯಾಗಿದೆ ಇಹ್ಸಾನ್ ಚಳುವಳಿ. ಐದುಸಾವಿರದಷ್ಟು ವಿದ್ಯಾರ್ಥಿಗಳ ಗ್ರ್ಯಾಂಡ್ ಅಸೆಂಬ್ಲೇಜ್ ಹಾಗೂ ಇಂಟರ್ ಕ್ಯಾಂಪಸ್ ಪ್ರತಿಭಾ ಅನಾವರಣ, ಇಹ್ಸಾನೋತ್ಸವ 2025 ಕೊಪ್ಪಳ ಜಿಲ್ಲೆಯಲ್ಲಿ ಜನವರಿ 19 ಮತ್ತು 20 ರಂದು ಖುದುವತುಸ್ಸಾದಾತ್ ಕುಂಬೋಲ್ ತಂಙಳ್ ಮುಂದಾಳತ್ವದಲ್ಲಿ ಅದ್ದೂರಿಯಾಗಿ ನಡೆಯಲಿದೆ, ಈ ಎಲ್ಲಾ ಸಂಭ್ರಮದ ಮುಂಚೂಣಿಯಾಗಿ ಸಾಂಘಿಕ ನಾಯಕರ ಸಂಗಮ ಹಾಗೂ ಸ್ವಾಗತ ಸಮಿತಿ ರಚನಾ ಸಭೆ ಮಂಗಳೂರಿನಲ್ಲಿ ನಡೆಯಿತು, ಹಿರಿಯ ಉಲಮಾ ,ಉಮರಾ ನಾಯಕರು, ಕೆಸಿಎಫ್ ನಾಯಕರು ಸಭೆಯಲ್ಲಿ ಭಾಗಿಯಾದರು. 🖋 ರಿಯಾ ನೆಲ್ಯಾಡಿ