ಕೊಪ್ಪ,ಕುವೆಂಪು ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಆಟಕ್ಕೆ ಅದ್ದೂರಿಯ ತೆರೆ,





ಕೊಪ್ಪ:- ತಾಲ್ಲೂಕಿನ ಹರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಚ್ಚರಡಿಯ ಕುವೆಂಪು ಕ್ರೀಡಾಂಗಣದಲ್ಲಿ ದಿನಾಂಕ 14/12/2024 ರಿಂದ 16/12/2024 ರವರೆಗೆ  ಅದ್ಭುತ ಕ್ರೀಡಾಸ್ಪರ್ಧೆ. S.B.ಕ್ರಿಕೆಟರ್ಸ್ ಕೊಪ್ಪ ಇವರು ನಡೆಸಿಕೊಟ್ಟ S B F ಪ್ರೀಮಿಯರ್ ಲೀಗ್  ಕುವೆಂಪು ಕಪ್ ಶೃಂಗೇರಿ‌ ಕ್ಷೇತ್ರ ಮಟ್ಟದ ಆಹ್ವಾನಿತ ಕ್ರಿಕೆಟ್ ಟೂರ್ನಮೆಂಟ್. ಒಂದು ಲಕ್ಷ ರೂ ನಗದು ಪ್ರಥಮ ಬಹುಮಾನ, ಐವತ್ತು ಸಾವಿರ ನಗದು ದ್ವೀತೀಯ ಬಹುಮಾನ, ಇಪ್ಪತ್ತು ಸಾವಿರ ನಗದು ತೃತೀಯ ಬಹುಮಾನ ಹೊಂದಿದ್ದ ಕ್ರೀಡಾಸ್ಪರ್ಧೆ. ಪ್ರಥಮ ಸ್ಥಾನವನ್ನು ರಿಯಲ್ ಫೈಟರ್ಸ್ ಕೊಪ್ಪ ಪಡೆದರೆ, ದ್ವಿತೀಯ ಸ್ಥಾನವನ್ನು ಜೈ ಭೀಮ್ ಕೊಗ್ರೆ ಪಡೆಯಿತು.


ಸಮಾರೋಪ ಸಮಾರಂಭದಲ್ಲಿ ವಿಶೇಷವಾಗಿ ಆರು ಜನರನ್ನು ಸನ್ಮಾನಿಸಿ ಅಭಿನಂದಿಸಿದ್ದು ಇದರ ಇನ್ನೊಂದು ವಿಶೇಷವೆಂದರೆ.ಹತ್ತು ವರ್ಷದ ಬಾಲ‌ಪ್ರತಿಭೆ ಕು.ಸುಫೈನಾ, 
SSLC ಪರೀಕ್ಷೆಯಲ್ಲಿ 613 ಅಂಕ ಪಡೆದ ಸ್ಥಳೀಯ ಪ್ರತಿಭೆ ರಾಕೇಶ್.R, ರಾಷ್ಟ್ರ ಮಟ್ಟದ Wight lifter ಶ್ರೀ ಫಾಜಿಲ್ ರೆಹಮಾನ್ ಸಣ್ಣಕೆರೆ,ಸ್ಥಳೀಯ ಅಂಗನವಾಡಿಯ ಆಯಾ ಶ್ರೀಮತಿ ಸರೋಜಕ್ಕ, ಊರಿನ ವಯೋವೃದ್ಧ ನಾಟಿ ವೈಧ್ಯರಾದ ಶ್ರೀ ಗಂಗಯ್ಯ ಪೂಜಾರಿಯವರನ್ನು ಅಭಿನಂದಿಸಿದ್ದು ವಿಶೇಷವಾಗಿತ್ತು. ಗ್ರಾಮೀಣ ಯುವಕರು‌ ಮನಸ್ಸು ಮಾಡಿದರೆ ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ, ಎಂಬಂತೆ  ಇಂತಹ ಅದ್ಭುತ ಕ್ರೀಡಾ ಸ್ಪರ್ದೆಯನ್ನು ಏರ್ಪಡಿಸಿದ ಶ್ರೀಯುತ ಅನಿಲ್ ಹಾಗೂ ಅವರ ಇಡೀ ತಂಡಕ್ಕೆ ಸಾರ್ವಜನಿಕರಿಂದ ಪ್ರಶಂಸೆಗಳ ಸುರಿಮಳೆಗೈದರು ,



ಹರಂದೂರು ಗ್ರಾಮ ಪಂಚಾಯಿತಿಗೆ ಸೇರಿದ ಅಚ್ಚರಡಿಯಲ್ಲಿ(ಕುವೆಂಪುರವರ ಹೆಸರಲ್ಲಿ) ಇಷ್ಟೊಂದು  ದೊಡ್ಡದಾದ ಕ್ರೀಡಾಂಗಣವಿದ್ದು ಸರ್ಕಾರದ ಯಾವುದೇ ಅನುದಾನ ಬಾರದಿರುವುದು ತುಂಬ ಬೇಸರದ ಸಂಗಾತಿಯೆಂದು,,ಸ್ಥಳೀಯರು ವಾರ್ತಾಸಾರಥಿ ಸುದ್ದಿಗೆ ತಿಳಿಸಿದರು,






Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?