ಕೊಪ್ಪ, skssf ಆಯೋಜಿಸಲಾಗಿದ್ದ 2024 ರ ಜಿಲ್ಲಾ ಕಲೋತ್ಸವದಲ್ಲಿ ಕೊಪ್ಪ ರೇಂಜ್ ಪ್ರಥಮ,


ಚಿಕ್ಕಮಗಳೂರು:- ಕರುನಾಡ ಪ್ರಕೃತಿಯ ಮಡಿಲಲ್ಲಿ ಮಲಗಿರುವ ಕೊಟ್ಟಿಗೆಹಾರದ ಸಮೀಪದ ಕಿರು ಗ್ರಾಮ ಚಕ್ಕಮಕ್ಕಿಯಲ್ಲಿ ಡಿಸೆಂಬರ್ 1 ರ ಭಾನುವಾರ SKSSF ಆಯೋಜಿಸಲಾಗಿದ್ದ 2024 ರ ಜಿಲ್ಲಾ ಕಲೋತ್ಸವದಲ್ಲಿ ಸುಮಾರು 36 ಕಲಾ ಹಾಗೂ ಧಾರ್ಮಿಕ ಸ್ಪರ್ದಾ ಚಟುವಟಿಕೆಗಳಲ್ಲಿ ಭಾಗವಹಿಸಿ 17 ಪ್ರಥಮ, 8 ದ್ವಿತೀಯ, 4 ತೃತೀಯ ಸ್ಥಾನಗಳೊಂದಿಗೆ ಸುಮಾರು 29 ಬಹುಮಾನಗಳನ್ನು ಕೊಪ್ಪ ರೇಂಜ್ ಗೆ ದಕ್ಕಿಸಿಕೊಂಡಿರುವ ಕೊಪ್ಪದ ನೇತಾಜಿ ನಗರದ ವಿಧ್ಯಾರ್ಥಿಗಳಿಗೂ ಮಸೀದಿಯ ಮುಖ್ಯ ಗುರುಗಳಾದ ಸಿದ್ದೀಕ್ ದಾರಿಮಿ ಯವರಿಗೂ ಅಭಿನಂದನೆಗಳು,

SKSSF ಕಲೋತ್ಸವ @ ಚಕ್ಕಮಕ್ಕಿ

2024ರ SKSSF ಚಿಕ್ಕಮಗಳೂರು ಜಿಲ್ಲಾ ಕಲೋತ್ಸವವು ಕರುನಾಡ ಪ್ರಕೃತಿಯ ಮಡಿಲಲ್ಲಿ ಮಲಗಿರುವ ಕಿರು ಗ್ರಾಮ ಚಕ್ಕಮಕ್ಕಿಯಲ್ಲಿ ನಡೆಯುತ್ತಿದೆಯೆಂದು ತಿಳಿದಾಗಿನಿಂದ ಆ ಕಲಾ ಉತ್ಸವದಲ್ಲಿ ಭಾಗಿಯಾಗಬೇಕೆನ್ನುವುದು ನನ್ನ ಮಹದಾಸೆಯಾಗಿತ್ತು,

ಈ ಮಹದಾಸೆಗೆ ಕಾರಣ ಚಕ್ಕಮಕ್ಕಿಯು ಮಲೆನಾಡ ಸೌಂದರ್ಯ ಪ್ರದೇಶ ಎಂಬುವುದು ಮಾತ್ರವಲ್ಲ, ದೀನೀ ಪ್ರಭೋದನೆಗೆಂದು ಸ್ವಾತಂತ್ರ್ಯಾ ನಂತರ ಮಲಬಾರಿನಿಂದ ಆಗಮಿಸಿದ್ದ ನನ್ನ ಅಜ್ಜ(ಪಿತೃ ತಂದೆ) ಅಲವಿ ಮುಸ್ಲಿಯಾರರು ಹಲವು ವರ್ಷಗಳ ನಂತರ ವೃತ್ತಿ ಜೀವನಕ್ಕೆ ವಿಶ್ರಾಂತಿ ನೀಡಿದ ಜಮಾಅತ್, ಹಾಗೂ ನನ್ನ ಬಾಲ್ಯದ ಬಹುತೇಕ ದಿನಗಳನ್ನು ಆಸ್ವದಿಸಿದ ಮಣ್ಣು,ಅದಲ್ಲದೇ ಮಲೆನಾಡಿನ ಅದೆಷ್ಟೋ ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ವಸತಿಯೊಂದಿಗೆ ದೀನೀ ಪ್ರಬೋದನೆಯನ್ನು ನೀಡುತ್ತಾ ಸೃಷ್ಟಿಕರ್ತನ ಪ್ರೀತಿಗೆ ಆಸ್ಪದವೀಯುತ್ತಿರುವ ನಾಡು ಚಕ್ಕಮಕ್ಕಿ ಎಂಬುವುದೂ ಸಹ ಆಗಿದೆ,

ಈ ಒಂದು ಕಲಾ ಉತ್ಸವದಲ್ಲಿ ಬಾಗಿಯಾಗಲು ಸಾಧ್ಯವಾಗದಿದ್ದರೂ ಸಹ ಭಾಗವಹಿಸಿದಕ್ಕಿಂತಲೂ ಅತ್ಯಂತ ತೃಪ್ತಿಯು,ಕೊಪ್ಪದ ನೇತಾಜಿ ನಗರ ಶಾಫಿ ಮಸ್ಜಿದ್ ಖತೀಬರಾದ ಬಹುಮಾನ್ಯ ಸಿದ್ದೀಕ್ ದಾರಿಮಿ ಉಸ್ತಾದರು, ಹಾಗೂ ಅವರ ಮಾರ್ಗದರ್ಶನದೊಂದಿಗೆ ಉತ್ಸವದಲ್ಲಿ ಬಾಗವಹಿಸಿದ್ದ ನೇತಾಜಿ ನಗರ ಪೂರ್ವ ವಿದ್ಯಾರ್ಥಿಗಳನ್ನೊಳಗೊಂಡ ವಿದ್ಯಾರ್ಥಿ ತಂಡವು ನೀಡಿದೆ ಎಂಬುವುದರಲ್ಲಿ ಎರಡು ಮಾತಿಲ್ಲ ,

ಜಿಲ್ಲೆಯ ಹಲವು ಜಮಾಅತ್ ಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳೊಂದಿಗೆ ಜೂನಿಯರ್, ಸೀನಿಯರ್,ಸೂಪರ್ ಸೀನಿಯರ್ ವಿಭಾಗಗಳಲ್ಲಿ, ನಾ ಮುಂದು ತಾ ಮುಂದು ಎಂಬಂತೆ ಸ್ಪರ್ದಿಸಿ, ಕಿರಾಅತ್,ಬುರ್ದಾ, ಮಾಶ್ಹಪ್,ಭಾಷಣ(ಕನ್ನಡ, ಉರ್ದು,ಇಂಗ್ಲಿಷ್) ಹಾಡು(ಅನುಸ್ಮರಣಾ, ಮದ್ಹುನ್ನಬಿ,ಅರೇಬಿಕ್, ಭಕ್ತಿ,ಗುಂಪು) ಬಾಂಗ್, ಕಥಾಪ್ರಸಂಗ,ಪ್ರಶ್ನಾವಳಿ, ಪೋಸ್ಟರ್ ಡಿಸೈನಿಂಗ್, ವಾರ್ತಾ ವಾಚನ,ಪ್ರಬಂಧ, ಅನೌನ್ಸ್ಮೆಂಟ್, ಹಿಸ್ಟರಿ ಟಾಕ್,ಪತ್ರಿಕಾ ವರದಿ, ಕ್ಯಾಲಿಗ್ರಫಿ,ವೀಡಿಯೋ ಮೇಕಿಂಗ್, ಪೆನ್ಸಿಲ್ ಡ್ರಾಯಿಂಗ್, ಎಂಬಂತೆ ಸುಮಾರು 36 ಸ್ಪರ್ಧೆಗಳಲ್ಲಿ- 17 ಪ್ರಥಮ, 8 ದ್ವಿತೀಯ, 4 ತೃತೀಯ ಸ್ಥಾನಗಳೊಂದಿಗೆ ಸುಮಾರು 29 ಬಹುಮಾನಗಳನ್ನು ಮಲೆನಾಡ ತವರೂರಾದ ಕೊಪ್ಪದ ಕಿರು ಪ್ರದೇಶವಾದ ನೇತಾಜಿ ನಗರ ಮಸೀದಿಗೆ ದಕ್ಕಿರುವುದು ಶ್ಲಾಘನೀಯವಾಗಿದೆ,

ಇಂತಹ ಸ್ಪರ್ಧಾತ್ಮಕ ಕಲಾ ಚಟುವಟಿಕೆಗಳು ಇನ್ನಷ್ಟು ಬೆಳೆಯಲಿ ಮತ್ತು ಜಿಲ್ಲೆಯ, ಹಾಗೂ ರಾಜ್ಯದ ಸಕಲ ವಿದ್ಯಾರ್ಥಿಗಳೂ ಸಹ ಇಂತಹ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಅತ್ಯುನ್ನತ ದರ್ಜೆಯಲ್ಲಿ ವಿಜಯಿಗಳಾಗಲು, ಹಲವಾರು ಬಹುಮಾನಗಳನ್ನು ನಮ್ಮ ರೇಂಜೆಡೆಗೆ ಸೆಳೆಯಲು ಕಾರಣಕರ್ತರಾದ ನೇತಾಜಿ ನಗರದ ಬಹುಮಾನ್ಯ ಸಿದ್ದೀಕ್ ದಾರಿಮಿ ಉಸ್ತಾದರು, ನಾರ್ವೆಯ ನಿಝಾಮ್ ಫೈಝಿ ಉಸ್ತಾದರು ಮತ್ತು ಇನ್ನಿತರ ವಿಜಯೀ ಜಮಾ ಅತ್ ಗಳ ಉಸ್ತಾದರುಗಳು ಹಾಗೂ ಅವರೆಲ್ಲರ ವಿಜಯೀ ವಿದ್ಯಾರ್ಥಿಗಳು ಸ್ಫೂರ್ತಿಯಾಗಲಿ ಎಂದು ಅಭಿನಂದನಾ ಪೂರ್ವಕವಾಗಿ ಆಶಿಸುತ್ತೇನೆ.


🖋️... ಮುಹಮ್ಮದ್ ಸುಫೈದ್ ಕೊಪ್ಪ,


ವಿಡಿಯೋ ನೋಡಲು ಇಲ್ಲಿ ಒತ್ತಿ,,










Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?