Posts

Showing posts from March, 2025

ರಿಯಾದ್,K C F ರಬುವ ಸೆಕ್ಟರ್ ವತಿಯಿಂದ ಗ್ರ್ಯಾಂಡ್ ಇಫ್ತಾರ್,2025

Image
  ರಿಯಾದ್,K C F  ರಬುವ ಸೆಕ್ಟರ್ ವತಿಯಿಂದ ಗ್ರ್ಯಾಂಡ್ ಇಫ್ತಾರ್,2025 ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನ್,  ರಬುವ ಸೆಕ್ಟರ್ ವತಿಯಿಂದ ಗ್ರ್ಯಾಂಡ್ ಇಫ್ತಾರ್,ಕೂಟ ದಿನಾಂಕ 14/03/2025 ಶುಕ್ರವಾರ ಸಮಯ 5 ಗಂಟೆಗೆ ಇಸ್ತಿರಾಹ್ ದಾರುಲ್ ಲಿಯಾಫ ದಲ್ಲಿ ದುಃಆ ಮಜ್ಲಿಸಿನೊಂದಿಗೆ ಆರಂಭಿಸಲಾಯಿತು ಸೈಯದ್ ಉಮರ್ ಜಿಫ್ರೀ ತಂಙಲ್ ಮಲಪ್ಪುರಂ ದುವಾದೊಂದಿಗೆ ಆರಂಭಿಸಿದರು.  ಸೆಕ್ಟರ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿ ಉಸ್ತಾದರು ಅಧ್ಯಕ್ಷತೆಯನ್ನು ವಹಿಸಿದರು. ಇಫ್ತಾರ್ ಕೂಟದಲ್ಲಿ ರಾಷ್ಟ್ರೀಯ ನಾಯಕರು ಝೋನ್ ನಾಯಕರು ಮತ್ತು ಸೆಕ್ಟರ್ ನ ನಾಯಕರುಗಳು ಮತ್ತು ಹಿತೈಷಿಗಳು ಆಗಮಿಸಿ ಶುಭ ಕೋರಿದರು. ಗ್ರಾಂಡ್ ಇಫ್ತಾರ್ ಸ್ವಾಗತ ಸಮಿತಿ ಚೇರ್ಮನ್ ಅಬ್ದುಲ್ ಅಝೀಜ್ ಮೂಡಿಗೆರೆ ಮತ್ತು ಸ್ವಾಗತ ಸಮಿತಿ ಕಾರ್ಯದರ್ಶಿ ಅಬ್ದುಲ್ ಸಮದ್ ಗಂಡಿ ಬಾಗಿಲು ಮತ್ತು  ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಆಸಿಫ್ ಪಿ ಕೆ ಎಂ ಮತ್ತು ಸ್ವಾಗತಸಮಿತಿ ಕೋಶಾಧಿಕಾರಿ ಅಬ್ದುಲ್ ಅಝೀಜ್ ಕೊಪ್ಪ ಸಲಹೆಗಾರರದ ಸೆಕ್ಟರ್ ನಾಯಕರಾದ ಸಲೀಂ ಅಡ್ಯಾರ್ ಉಬೈಯ್ದುಲ್ಲ ವಗ್ಗ ನಾಸಿರ್ ಬೊಲ್ಲಾಯಿ ಅಬ್ದುಲ್ ರಹೀಮಾನ್ ಕೊಪ್ಪ ಬದುರುದ್ದೀನ್ ದೊಂಪ ಆಸಿಫ್ ಅಂಡೆಲ್ .ಮುಸ್ತಫ ಮದನಿ .ಅಬ್ದುಲ್ ರಹಿಮಾನ್ ಮಠ. ಶರೀಫ್ ಉರುವಲ್ ಪದವ್  ಯಾಕುಬ್ ಮದನಿ. ಇಸಾಕ್ ಮದನಿ. ನಜೀರ್ ಉಸ್ತಾದ್ ಯೂನಿಟ್ ನಾಯಕರು ಸೆಕ್ಟರ್  ನಾಯಕರು ಹಲವಾರು ಮಂದಿ ಭಾಗವಹಿಸಿ,ಅಬ್ದುಲ್ ಅಝ...

ಹರಿಹರಪುರ ಶ್ರೀಗಳ ಕಾರು ಅಪಘಾತ

Image
  ಕೊಪ್ಪ ತಾಲ್ಲೂಕಿನ ಹರಿಹರಪುರದ ಶ್ರೀಗಳ ಕಾರುಗಳ ಅಪಘಾತ.ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ಕೋಟೆಗದ್ದೆ ಗ್ರಾಮದ ಬಳಿ ದನವೊಂದು ದಿಢೀರ್‌ ರಸ್ತೆಗೆ ಬಂದಿದ್ದರಿಂದ ಎಸ್ಕಾರ್ಟ್‌ ವಾಹನ ಬ್ರೇಕ್‌ ಹಾಕಿದೆ. ಹಿಂಬದಿಯಲ್ಲಿದ್ದ ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಎಸ್ಕಾರ್ಟ್‌ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಹಿಂಬದಿಯಲ್ಲಿ ಬರುತ್ತಿದ್ದ ಮಠದ ಮತ್ತೊಂದು ಕಾರು ಸ್ವಾಮೀಜಿ ಇದ್ದ ಕಾರಿಗೆ ಅಪ್ಪಳಿಸಿದೆ. ಮೂರು ವಾಹನಗಳು ಜಖಂ ಆಗಿವೆ. ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರು ಚಿಕ್ಕಮಗಳೂರಿನಿಂದ ಶಿರಸಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳುವಾಗ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್‌ ಶ್ರೀಗಳು ಮತ್ತು ಕಾರಿನಲ್ಲಿದ್ದ ಉಳಿದವರು ಪಾರಾಗಿದ್ದಾರೆ. ಶ್ರೀಗಳು ಬದಲಿ ಕಾರಿನಲ್ಲಿ ಪ್ರಯಾಣ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ. ವರದಿ,ಮಜೀದ್ ಸಣ್ಣಕೆರೆ,

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

Image
  ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ, ಜೀತೊ ಆಟೋ ಹಾಗೂ ಬೈಕ್ ನಡುವೆ ಭೀಕರ ಅಪಘಾತ (ಕಾಟಿ) ಉಮೇಶ(38 ) ವರ್ಷ,ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಜೀತೋ ಆಟೋ ಜೋಗಿಸರ ಖಾಸಿಂ ಅವರಿಗೆ ಸೇರಿದ್ದು ಎನ್ನಲಾಗಿದೆ,ಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ವರದಿ:- ಮಜೀದ್ ಸಣ್ಣಕೆರೆ

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

Image
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ ,  ಎನ್ ಆರ್ ಪುರ:- ತಾಲೂಕಿನ ಹೊನ್ನೆಕೊಪ್ಪದಲ್ಲಿ ಒಂದೆರಡು ದಿನಗಳ ಹಿಂದೆ ಅಪ್ರಾಪ್ತೆ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ,  ಶಶಾಂಕ್(28) ಎಂಬಾತ ತನ್ನ ಸೋದರಿ ಸಂಬಂಧಿಕರ ಮಗಳನ್ನೇ ಈ ಕೃತ್ಯಕ್ಕೆ ಬಳಸಿಕೊಂಡಿದ್ದು ಬೆಳಕಿಗೆ ಬಂದಿದೆ. ಈ ಘಟನೆಯು ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಗೆ ಹೋದಾಗ ಮೊದಲು ಬೆಳಕಿಗೆ ಬಂದಿದ್ದು ಅಪ್ರಾಪ್ತೆ ಈಗ ಏಳು ತಿಂಗಳ ಗರ್ಭಿಣಿಯಾಗಿದ್ದು ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ವಿಷಯ ಹೊರಬಾರಬಾರದಂತೆ ಆರೋಪಿ ಪ್ರಯತ್ನಪಟ್ಟಿದ್ದು ಎಲ್ಲಾ ರೀತಿಯ ಪ್ರಯತ್ನಗಳು ನಡೆದಿದೆ ಎಂದು ಆರೋಪಗಳು ಕೇಳಿಬಂದಿದ್ದು ಆದರೆ ಈತನ ನೀಚ ಕೃತ್ಯ ಕೊನೆಗೂ ಬಹಿರಂಗವಾಗಿದೆ. ಪೋಷಕರು ನೀಡಿದ ದೂರು ಆಧರಿಸಿ ಮೂರು ದಿನದ ಹಿಂದೆಯೇ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ಹೆಸರು ಉಲ್ಲೇಖಿಸದ ಕಾರಣ ಬಂಧಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ..  ಆರೋಪಿಯು ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬ ತೀವ್ರ ಆರೋಪವು ಸ್ಥಳೀಯರಿಂದ ಕೇಳಿಬಂದಿದ್ದು. ಅಲ್ಲದೇ ಆರೋಪಿಯ ಒತ್ತಡದಿಂದ ಮಾಹಿತಿಯನ್ನು ನೀಡಲು ವಿಳಂಬವಾಗಿದ್ದು ಈ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.         ಆರೋಪಿ ಹೆಸರನ್ನು ಸಂತ್ರಸ್ತೆ ತಿಳಿಸಿದ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರ...

ಕಡಬ,ಖ್ಯಾತ ಉರಗ ತಜ್ಞ ವಾವಾ ಸುರೇಶ್ ಗೆ ಕಡಬ ಪಿಲ್ಯ ಪ್ಯಾಷನ್ ನಲ್ಲಿ ಸನ್ಮಾನ,

Image
  ಖ್ಯಾತ ಉರಗ ತಜ್ಞ ವಾವಾ ಸುರೇಶ್ ಗೆ ಕಡಬ ಪಿಲ್ಯ ಪ್ಯಾಷನ್ ನಲ್ಲಿ ಸನ್ಮಾನ, ಕಡಬ: ಭಾರತದ ಪ್ರಖ್ಯಾತ ಉರಗ ತಜ್ಞ ವಾವಾ ಸುರೇಶ್ ಗೆ  ಕಡಬದ ಪಿಲ್ಯ ಪ್ಯಾಶನ್ ಹಾಗೂ ಪಿಲ್ಯ ಮ್ಯಾಚಿಂಗ್ ಸೆಂಟರ್ ವತಿಯಿಂದ ಸನ್ಮಾನ ಕಾರ್ಯಕ್ರಮ ಮಾರ್ಚ್ 5 ರಂದು ಸಂಸ್ಥೆಯಲ್ಲಿ ನಡೆಯಿತು.         ಕಾರ್ಯಕ್ರಮದಲ್ಲಿ  ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಥೊಮಸ್ ಇಡಯಾಲ್, ಹಿರಿಯರಾದ ರಾಮ್ ಭಟ್, ಸಾದಿಕ್ ಝೂಬಿ ಗೋಲ್ಡ್, ಸುಮಾ ದಡ್ಡು, ಸಮದ್ ನೆಕ್ಕಿತ್ತಡ್ಕ, ಶರತ್ತ್ ಪೂಜಾರಿ, ತ್ವಲ್ಲತ್ ಮರ್ಧಾಳ, ಮೀನಾ ಕೋರಿಯಾರ್, ಅಸ್ಮಾ,   ರಶೀನಾ ಡಿ, ಹಾಗೂ ಇತರರು ಉಪಸ್ಥಿತಿಯಿದ್ದರು. ರಶೀದ್ ಪಿಲ್ಯ ಸ್ವಾಗತಿಸಿ ಫಾರೂಕ್ ಪಿಲ್ಯ ವಂದಿಸಿದರು. ವರದಿ:-ರಿಯಾ ನೆಲ್ಯಾಡಿ