ಹರಿಹರಪುರ ಶ್ರೀಗಳ ಕಾರು ಅಪಘಾತ
ಕೊಪ್ಪ ತಾಲ್ಲೂಕಿನ ಹರಿಹರಪುರದ ಶ್ರೀಗಳ ಕಾರುಗಳ ಅಪಘಾತ.ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ಕೋಟೆಗದ್ದೆ ಗ್ರಾಮದ ಬಳಿ ದನವೊಂದು ದಿಢೀರ್ ರಸ್ತೆಗೆ ಬಂದಿದ್ದರಿಂದ ಎಸ್ಕಾರ್ಟ್ ವಾಹನ ಬ್ರೇಕ್ ಹಾಕಿದೆ. ಹಿಂಬದಿಯಲ್ಲಿದ್ದ ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಎಸ್ಕಾರ್ಟ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಹಿಂಬದಿಯಲ್ಲಿ ಬರುತ್ತಿದ್ದ ಮಠದ ಮತ್ತೊಂದು ಕಾರು ಸ್ವಾಮೀಜಿ ಇದ್ದ ಕಾರಿಗೆ ಅಪ್ಪಳಿಸಿದೆ. ಮೂರು ವಾಹನಗಳು ಜಖಂ ಆಗಿವೆ.
ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರು ಚಿಕ್ಕಮಗಳೂರಿನಿಂದ ಶಿರಸಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳುವಾಗ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಶ್ರೀಗಳು ಮತ್ತು ಕಾರಿನಲ್ಲಿದ್ದ ಉಳಿದವರು ಪಾರಾಗಿದ್ದಾರೆ. ಶ್ರೀಗಳು ಬದಲಿ ಕಾರಿನಲ್ಲಿ ಪ್ರಯಾಣ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.
ವರದಿ,ಮಜೀದ್ ಸಣ್ಣಕೆರೆ,

Comments
Post a Comment