ಕೊಪ್ಪ,ಮಲೆನಾಡಿನಲ್ಲಿ ಮುಗಿಲು ಮುಟ್ಟಿದ ಮುಸ್ಲಿಂ ಸಂಯುಕ್ತ ಜಮಾಅತ್ ಒಕ್ಕೂಟದ ಪ್ರತಿಭಟನೆ,
ಕೊಪ್ಪ,ಮಲೆನಾಡಿನಲ್ಲಿ ಮುಗಿಲು ಮುಟ್ಟಿದ ಮುಸ್ಲಿಂ ಸಂಯುಕ್ತ ಜಮಾಅತ್ ಒಕ್ಕೂಟದ ಪ್ರತಿಭಟನೆ,
11-05-2025, ಬುಧವಾರದಂದು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ,ಕೊಪ್ಪ ತಾಲ್ಲೂಕಿನ ಮುಸ್ಲಿಂ ಸಂಯುಕ್ತ ಜಮಾಅತ್ ಒಕ್ಕೂಟವು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಗೆ ಹಲವಾರು ಮಂದಿ ಆಗಮಿಸಿದ್ದರು,
ಸಯ್ಯದ್ ಎಜಾಝ್ ಅಹ್ಮದ್ ರವರು ಅಧ್ಯಕ್ಷತೆಯನ್ನು ವಹಿಸಿದ್ದ ಪ್ರತಿಭಟನಾ ಸಭೆಯನ್ನು, ರಾಘವೇಂದ್ರ ನಗರದ ಮುಖ್ಯ ಧರ್ಮ ಗುರು ಸದ್ದಾಂ ಫೈಝಿ ಅಲ್ ಬುರ್ಹಾನಿಯವರ ಕುರ್ಆನ್ ಪಠಣ,ಕೊಪ್ಪ ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಮುಖ್ಯ ಧರ್ಮ ಗುರು ಹನೀಫ್ ಖಾಸಿಮಿರವರ ಪ್ರಾರ್ಥನೆ ಹಾಗೂ ಕೆ.ಡಿ.ಪಿ ಸದಸ್ಯರಾದ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರು ಮುಹಮ್ಮದ್ ಸಾದಿಕ್ ನಾರ್ವೆ ಯವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭಿಸಲಾಯಿತು,
ಪ್ರತಿಭಟನೆಗೆ ಆಗಮಿಸಿದ್ದ ಮುಖ್ಯ ಪ್ರಭಾಷಣಕಾರರಾದ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು-ರವರು, ಮುಸಲ್ಮಾನರ ಇತಿಹಾಸ ಹಾಗೂ ವಕ್ಫ್ ನ ಮಹತ್ವವನ್ನು ತಿಳಿಸುವುದರ ಮೂಲಕ,ವಕ್ಫ್ ಕಾಯ್ದೆಯ ಕುರಿತು ಪ್ರತಿಯೊಬ್ಬ ಮುಸಲ್ಮಾನನಿಗಿರುವ ವಿರೋಧವನ್ನು ವ್ಯಕ್ತಪಡಿಸಿದರು,
ಪ್ರತಿಭಟನಾ ಸಭೆಯಲ್ಲಿ ಹಾಜರಿದ್ದ ಖ್ಯಾತ ವಕೀಲರಾದ ಸುಧೀರ್ ಕುಮಾರ್ ಮುರೋಳ್ಳಿ ಯವರು,ಅಂದು ನಡೆಯಬೇಕಿದ್ದ ಮೌನ ಮೆರವಣಿಗೆಗೆ ತಡೆಯೊಡ್ಡಿದ ಪೊಲೀಸ್ ಅಧಿಕಾರಿಗಳ ನಡೆಯನ್ನು ಖಂಡಿಸುವ ಮೂಲಕ ಪ್ರಾರಂಬಿಸಿ, ಧರ್ಮವೊಂದನ್ನು ಗುರಿಯಾಗಿಸಿ ದೇಶ ಒಡೆಯುವ ಕಾಯ್ದೆಯನ್ನು ವಿರೋಧಿಸುತ್ತಾ, ಬಸವಣ್ಣ,ನಾರಾಯಣ ಗುರುಗಳನ್ನು ನೆನೆಸಿ ದೇಶವನ್ನು ಕಟ್ಟುವ ಕನಸನ್ನು ಸಭೆಯ ಮುಂದಿಟ್ಟರು, ಅಲ್ಲದೇ ಸಂವಿಧಾನ ಪೀಠಿಕೆಯನ್ನು ಸಭೆಯಲ್ಲಿ ಪಠಿಸಲು ಸರ್ವರಿಗೂ ನಾಯಕತ್ವವನ್ನು ವಹಿಸುವುದರ ಮೂಲಕ ತಮ್ಮ ಪ್ರತಿಭಟನಾಸ್ವರವನ್ನು ಮುಗಿಲು ಮುಟ್ಟಿಸಿದ್ದರು,
ವಕ್ಫ್ ಬೋರ್ಡ್, ಚಿಕ್ಕಮಗಳೂರು ಇದರ ಜಿಲ್ಲಾಧ್ಯಕ್ಷರಾದಂತಹ ಮುಹಮ್ಮದ್ ಶಾಹಿದ್ ರಿಝ್ವಿ ರವರು ವಕ್ಫ್ ಕಾಯ್ದೆಯಿಂದ ಸಮುದಾಯಕ್ಕಾಗುವ ಅನ್ಯಾಯದ ಕುರಿತು ತಮ್ಮ ಪ್ರಾಯೋಗಿಕ ಅನುಭವಗಳ ಮೂಲಕ ಜನ ಮನಸ್ಸುಗಳಲ್ಲಿ ಅಚ್ಚೊತ್ತುವಲ್ಲಿ ಯಶಸ್ವಿಯಾದರು,
ಸಭೆಯಲ್ಲಿ ಮುಸ್ಲಿಂ ಸಂಯುಕ್ತ ಜಮಾಅತ್ ಒಕ್ಕೂಟದ ಸರ್ವ ಸದಸ್ಯರು,ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ರಚಿಸಿದ ಹಕ್ಕೊತ್ತಾಯ ಪತ್ರವನ್ನು ಗೌರವನ್ವಿತ ರಾಷ್ಟ್ರಪತಿಯವರಿಗೆ,ತಹಸೀಲ್ದಾರ್ ಮೂಲಕ ಹಸ್ತಾಂತರಿಸಲಾಯಿತು. ಈ ಹಕ್ಕೊತ್ತಾಯ ಪತ್ರದ ಪೂರ್ಣ ವಿಷಯವನ್ನು ಕಾರ್ಯಕ್ರಮದ ನಿರೂಪಕರು ಸರ್ವ ನಾಗರಿಕರ ಸಮ್ಮುಖದಲ್ಲಿ ವಾಚಿಸಿದರು,
ಕೊಪ್ಪದ ಕೇಂದ್ರ ಜಾಮಿಯ ಮಸೀದಿಯ ಅಧ್ಯಕ್ಷರಾದ ಜಹೂರ್ ಹುಸೈನ್,ಪ್ರಧಾನ ಮಂತ್ರಿಗಳ 15 ಅಂಶ ಕಾರ್ಯಕ್ರಮಗಳ ಅನುಷ್ಠಾನ ಸಮಿತಿಯ ಅಧಿಕಾರೇತರ ಸದಸ್ಯ ಸ್ಥಾನ ಅಲಂಕರಿಸಿರುವ ಪಟ್ಟಣ ಪಂಚಾಯಿತಿ ಸದಸ್ಯರಾದ ರಷೀದ್ ಕೊಪ್ಪ ರವರು, ಮುಸ್ಲಿಂ ಸಂಯುಕ್ತ ಜಮಾಅತ್ ಒಕ್ಕೂಟ ಇದರ ಮುಖ್ಯ ಪದಾಧಿಕಾರಿಗಳಾದ ಝಕ್ರಿಯ ಆರ್ಷದ್,ಶಬ್ಬೀರ್ ಅಹ್ಮದ್,ಶಫಿ ಅಹ್ಮದ್,ಇಸ್ಮಾಯಿಲ್ ಜಯಪುರ,ಅಬ್ದುಲ್ ಹಮೀದ್,ಕಮಾಲಿಯ ಹಾಗೂ ಮುಸ್ಲಿಂ ಸಂಯುಕ್ತ ಜಮಾಅತ್ ಒಕ್ಕೂಟದ ಸರ್ವ ಸದಸ್ಯರುಗಳೊಂದಿಗೆ ಎಲ್ಲಾ ಜಮಾ ಅತ್ ಗಳ ಮಸೀದಿಯ ಧರ್ಮ ಗುರುಗಳು ಮತ್ತು ಅಧ್ಯಕ್ಷರುಗಳು,ಉಪಸ್ಥಿತರಿದ್ದರು.
ವಿಮಾನ ದುರಂತ,*ಮೃತರ ಪಟ್ಟಿ ಬಿಡುಗಡೆ ಮಾಡಿದ ಏರ್ ಇಂಡಿಯಾ,
ಮುಸ್ಲಿಂ ಸಂಯುಕ್ತ ಜಮಾಅತ್ ಒಕ್ಕೂಟದ ಪ್ರಚಾರ ಸಮಿತಿಯ ಸದಸ್ಯರಾದ ಹರ್ಷದ್ ಕೊಪ್ಪ,ಮುಹಮ್ಮದ್ ಸುಫೈದ್ ಕೊಪ್ಪ ಹಾಗೂ ಅಜ್ಮಲ್ ಕೊಪ್ಪ ರವರು ನಿರೂಪಣೆಯನ್ನು ನೀಡಿದ ಈ ಶಾಂತಿಯುತ ಪ್ರತಿಭಟನಾ ಸಭೆಯನ್ನು, ಕೊಪ್ಪದ ಕೇಂದ್ರ ಜಾಮಿಯ ಮಸೀದಿಯ ಮುಖ್ಯ ಧರ್ಮ ಗುರು ಅಬ್ದುಲ್ ಖಲೀಲ್ ಸಾಹೇಬ್ ರವರ ಪ್ರಾರ್ಥನೆಯೊಂದಿಗೆ ಮುಕ್ತಾಯಗೊಳಿಸಲಾಯಿತು.
ವರದಿ:-ಮುಹಮ್ಮದ್ ಸುಫೈದ್ ಕೊಪ್ಪ,




Comments
Post a Comment