ಮನೆಗೆ ತೆರಳುತಿದ್ದ ಬಾಲಕನ ಮೇಲೆರಗಿದ ನಾಯಿ!

 

ಮನೆಗೆ ತೆರಳುತಿದ್ದ ಬಾಲಕನ ಮೇಲೆರಗಿದ ನಾಯಿ!


ಕಡಬ:- ಮದರಸ ಬಿಟ್ಟು ಮನೆಗೆ ತೆರಳುತಿದ್ದ ಬಾಲಕನಿಗೆ ನಾಯಿಯೊಂದು ಕಡಿದು ಗಾಯಗೊಳಿಸಿದ ಘಟನೆ ಕಡಬ ಪೇಟೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಗಾಯಾಳು ಬಾಲಕನನ್ನು ಕಡಬ ನಿವಾಸಿ ಹಮೀದ್ ಎಂಬವರ ಪುತ್ರ ಅಫ್ನಾನ್ ಎಂದು ಗುರುತಿಸಲಾಗಿದ್ದು, ಬಾಲಕನನ್ನು ಕಚ್ಚಿದ ಆ ನಾಯಿಯನ್ನು ಸಾರ್ವಜನಿಕರು ಹೊಡೆದು ಕೊಂದಿದ್ದಾರೆ.

ನಾಯಿ ಕಡಿತದ ಗಾಯಾಳು, ಮನೆಗೆ ತೆರಳುತ್ತಿದ್ದ ಹೊತ್ತಿನಲ್ಲಿ ನಾಯಿಯೊಂದು ಎರಗಿ ಕೈಗೆ ಕಚ್ಚಿದೆ‌ ಎಂದು ಹೇಳಲಾಗುತ್ತಿದೆ. ತಕ್ಷಣ ಬಾಲಕನಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಬಾಲಕನಿಗೆ ನಾಯಿ ಕಡಿದುದರಿಂದ ಉದ್ರೀಕ್ತಗೊಂಡ ಕೆಲವರು ಆ ನಾಯಿಯನ್ನು ಹೊಡೆದು ಕೊಂದಿದ್ದಾರೆ. ಬಳಿಕ ಈ ಮಾಹಿತಿಯನ್ನು ಸ್ಥಳೀಯ ಪಟ್ಟಣ ಪಂಚಾಯತ್ ಗೆ ಮಾಹಿತಿ ಒದಗಿಸಿದ್ದಾರೆ.

ಕಚ್ಚಿದ ನಾಯಿ ಹುಚ್ಚು ನಾಯಿಯೆಂದು ಕೆಲವರು ಆರೋಪಿಸಿದ್ದಾರೆ. ವಾರದ ಹಿಂದೆ ಕಡಬದ ಹಳೇಸ್ಟೇಷನ್ ಸಮೀಪ ಬಾಪೂಜಿ ನಗರದಲ್ಲಿ ಹುಚ್ಚುನಾಯಿ ಹಾವಳಿ ಕಂಡುಬಂದಿತ್ತು. ಹಾಗಾಗಿ ಆ ಪೈಕಿ ಒಂದು ನಾಯಿ ಇದು ಆಗಿರಬಹುದು ಎಂದು ಶಂಕಿಸಲಾಗಿದೆ.

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?