ಹೋಟೆಲ್ ಗ್ರೀನ್ ಎಂಬಸ್ಸಿ, ಹಾಗೂ ಸಾಗರದ ಪ್ರತಿಷ್ಟಿತ ಸಂಸ್ಥೆ ಯಾದ SGT ಜಿಂಜರ್, ಮುಖ್ಯಸ್ಥರಿಂದ ರಾಜ್ಯಪಾಲರ ಭೇಟಿ.
ವರದಿ:-ಮಲೆನಾಡ ರಹಸ್ಯ,
*ಶಿವಮೊಗ್ಗ.(ಸಾಗರ):* ಕನಾ೯ಟಕ ಸಕಾ೯ರದ *ಘನವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆ ಹ್ಲೋಟ್* ರವರ ಅಧಿಕೃತ ಶಿವಮೊಗ್ಗ ಜಿಲ್ಲೆಯ ಪ್ರವಾಸ ಭೇಟಿಯ ಸಂಧಭ೯ದ ವೇಳೆ *ನವೆಂಬರ 25ರಂದು ವಿಶ್ವವಿಖ್ಯಾತ , ಜೋಗ ಜಲಪಾತಕ್ಕೆ ಕುಟುಂಬ ಸಮೇತ ಆಗಮಿಸಿ ಜಲಪಾತ ವೀಕ್ಷಣೆ ಬಳಿಕ ಶಿವಮೊಗ್ಗದ ಕಾರ್ಯಕ್ರಮಕ್ಕೆ ತೆರಳಿದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರನ್ನು ಸಾಗರದ ಪ್ರತಿಷ್ಟಿತ ಸಂಸ್ಥೆ ಯಾದ SGT ಜಿಂಜರ್ ಹಾಗೂ ಹೋಟೆಲ್ ಗ್ರೀನ್ ಎಂಬಸ್ಸಿಯ ಮುಖ್ಯಸ್ಥರಾಗಿರುವ ಸಯ್ಯದ್ ಜಹೂರ್ ಮತ್ತು ಸಯ್ಯದ್ ಶಾಕೀರ್ ರವರು ಶಿವಮೊಗ್ಗದ ಸರ್ಕಿಟ್ ಹೌಸ್ ನಲ್ಲಿ ರಾಜ್ಯಪಾಲರರೊಂದಿಗೆ ಸೌಹಾದ೯ತೆಯ ಭೇಟಿ ಮಾಡಿ* ಮಲೆನಾಡ ಮುಖ್ಯ ಬೆಳೆಗಳ ಬಗ್ಗೆ ವಿವರಿಸಿ, ಮಲೆನಾಡ ಅದರಲ್ಲೂ *ಸಾಗರ ತಾಲ್ಲೂಕಿನ ಪ್ರಮುಖ ಬೆಳೆಗಳಾದ ಅಡಿಕೆ ಮತ್ತು ಶುಂಟಿ ಬೆಳೆಗಳ ಪರಿಸ್ಥಿತಿ ಹಾಗೂ ರೈತರು ಅನುಭವಿಸುತ್ತಿರವ ವೇದನೆ ಹಾಗೂ ಸಮಸ್ಯೆಗಳನ್ನು ಎಸ್.ಜಿ.ಟಿ. ಸಂಸ್ಥೆಯವರು ಸಮಗ್ರವಾಗಿ ವಿವರಿಸಿದರು, ಸುಮಾರು ಮೂವತ್ತು ನಿಮಿಷಗಳ ಕಾಲ ಇದರ ಬಗ್ಗೆ ಚರ್ಚಿಸಿ. ನಂತರದಲ್ಲಿ ರಾಜ್ಯಪಾಲರು ಸಮಸ್ಯೆಗಳ ಪಟ್ಟಿಯನ್ನು ಅತೀ ಶೀಘ್ರವಾಗಿ ಕಳುಹಿಸಲು ಸಂಸ್ಥೆಯ ಮುಖ್ಯಸ್ಥರಿಗೆ ತಿಳಿಸಿದರು, ಮಲೆನಾಡ ರೈತರ ಸಂಕಷ್ಟಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಗ್ರೀನ್ ಎಂಬಸ್ಸಿಯ SGT ಮುಖ್ಯಸ್ಥರುಗಳ ನಿಜವಾದ ಕಾಳಜಿ ಶ್ಲಾಫನೀಯ, ರಾಜ್ಯಪಾಲರೊಂದಿಗೆ ಮಲೆನಾಡ ರೈತರ ಸಮಸ್ಯೆಯನ್ನು ಹಂಚಿಕೊಂಡು ಸಾಗರ ಭಾಗದ ರೆೃತರ ಪರವಾಗಿ ಸಹೃದಯ ಕಾಳಜಿ ವಹಿಸಿರುವ ಎಸ್.ಜೆ.ಟಿ. ಸಂಸ್ಥೆಗೆ,ಸಾರ್ವಜನಿಕರ ಪರವಾಗಿ "ಮಲೆನಾಡ ರಹಸ್ಯ" ಪತ್ರಿಕೆ ಬಳಗ ಆತ್ಮೀಯ ಅಭಿನಂದಿಸುತ್ತದೆ,
ಮಲೆನಾಡ ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಘನವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರಲ್ಲಿ ಮನವಿ.
Comments
Post a Comment