ಸಿ ಎನ್ ಜಿ, ಬಸ್ ಬಂತು ಉಪ್ಪಿನಂಗಡಿಯಿಂದ ಮಂಗಳೂರಿಗೆ,,




 

ಉಪ್ಪಿನಂಗಡಿ : ಪೆಟ್ರೋಲ್ - ಡೀಸೆಲ್‌ಗೆ ಪರ್ಯಾಯ ಇಂಧನವಾಗಿ ವಾಹನಗಳಿಗೆ ಸಿಎನ್‌ಜಿ ಬಳಕೆ ಮಾಡಲಾಗುತ್ತಿದ್ದು , ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಸಿಎನ್‌ಜಿ ಇಂಧನ ಬಳಕೆಯ ಬಸ್ ಶನಿವಾರ ರಸ್ತೆಗಿಳಿದಿದೆ . ಶನಿವಾರ ಉಪ್ಪಿನಂಗಡಿಯಿಂದ ಮಂಗಳೂರಿಗೆ ಈ ಹೊಸ ಬಸ್ ಓಡಾಟ ಆರಂಭಿಸಿದೆ . ಟಾಟಾ ಮೋಟಾರ್ಸ್ ಕಂಪೆನಿಯು ತಯಾರಿಸಿದ ಬಸ್ ಇದಾಗಿದೆ . ಅವಿಭಜಿತ ದಕ್ಷಿಣ ಕನ್ನಡದಲ್ಲಿ ಸಿಎನ್‌ಜಿ ಆಧಾರಿತ ಮೊದಲ ಬಸ್ ಇದು ಎಂದು ಖಾಸಗಿ ಬಸ್ ಮಾಲಕರ ಸಂಘದವರು ತಿಳಿಸಿದ್ದಾರೆ .

ಅಧಿಕ ಮೈಲೇಜ್ : ಕಂಪೆನಿಯವರ ಮಾಹಿತಿ ಪ್ರಕಾರ ಬಸ್ ಡೀಸೆಲ್‌ಗಿಂತ ಕೊಂಚ ಹೆಚ್ಚು ಮೈಲೇಜ್ ಕೊಡುತ್ತದೆ . ಆದರೆ ಓಡಾಟ ಈಗಷ್ಟೇ ಆರಂಭಗೊಂಡಿರುವುದರಿಂದ ಮೈಲೇಜ್‌ನ ನಿಖರತೆ ಸಿಕ್ಕಿಲ್ಲ ಎಂದು ಮಾಲಕರು ಹೇಳಿದ್ದಾರೆ . ನೋಂದಣಿ ಸೇರಿ ಈ ಬಸ್‌ಗೆ ಸುಮಾರು 30 ಲಕ್ಷ ರೂ . ತಗಲುತ್ತಿದ್ದು , ಡೀಸೆಲ್ ಬಸ್‌ಗಳಿಗಿಂತ 3.5 ಲಕ್ಷ ರೂ.ಗಳಷ್ಟು ದುಬಾರಿಯಾಗಿದೆ ಎಂದಿದ್ದಾರೆ .

ಮರುಪೂರಣ ಸವಾಲು : ಕಾರುಗಳಿಗೆ ಸಿಎನ್‌ಜಿ ಇಂಧನ ಬಳಕೆ ಮಾಡುವುದಾದರೆ ಇಂಧನ ತೀರಿದ ಬಳಿಕ ಪೆಟ್ರೋಲ್ ಮೂಲಕವೂ ಪ್ರಯಾಣ ಮುಂದುವರಿಸಬಹುದಾಗಿದೆ . ಆದರೆ ಸಿಎನ್‌ಜಿ ಬಸ್ಸಿನಲ್ಲಿ ಡೀಸೆಲ್ ಬಳಕೆಗೆ ಅವಕಾಶವಿಲ್ಲ . ಬಸ್ಸಿನ ಸಿಎನ್‌ಜಿ ಟ್ಯಾಂಕ್ ಸಾಮರ್ಥ್ಯ 80 ಕೆಜಿ . ಸದ್ಯ ಕೊಳ್ಳಾಡು , ಕಾವೂರು , ಹೊಸಬೆಟ್ಟುಗಳಲ್ಲಿ ಮಾತ್ರ ಸಿಎನ್‌ಜಿ ಮರು ಪೂರಣ ವ್ಯವಸ್ಥೆ ಇದೆ . ಈ ಬಸ್ಸಿನ ರೂಟ್ ಉಪ್ಪಿನಂಗಡಿ ಮಂಗಳೂರು ಆಗಿರುವುದರಿಂದ ಇಂಧನ ಮುಗಿದ ಬಳಿಕ ಮರುಪೂರಣಕ್ಕಾಗಿ ದೂರದ ಈ ಮೂರು ಸ್ಥಳಗಳಲ್ಲಿ ಯಾವುದಾದರೊಂದಕ್ಕೆ ತೆರಬೇಕು . ಆದ್ದರಿಂದ ಪ್ರಸ್ತುತ ಬಸ್ಸಿನ ನಿರ್ವಹಣೆ ಸವಾಲಿನ ವಿಚಾರವಾಗಿದೆ,

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?