ಕೊಪ್ಪ:- ತಾಲ್ಲೂಕಿನ ಹರಿಹರಪುರ ಶೃಂಗೇರಿ ರಸ್ತೆ ಯಲ್ಲಿ ಧರ್ಮಸ್ಥಳ ಸಂಘದ ಕಚೇರಿ ಇದ್ದು ಎಲ್ಲಾ ಸಂಘದ ಸದಸ್ಯರು ಗಳು ವಾರದ ಲೆಕ್ಕಾಚಾರವನ್ನು ನೀಡಲು ಸಂಘದ ಪುಸ್ತಕ ಸಮೇತವಾಗಿ ಪ್ರತಿ ಗುರುವಾರ ಬೆಳಗ್ಗೆ 6:30ಕ್ಕೆ ಬೀಗ ತೊರೆಯುವ ಧರ್ಮಸ್ಥಳ ಸಂಘದ ನಿಯಮವಾಗಿರುತ್ತದೆ.ಆದರೆ ಕಛೇರಿಯ ಬಾಗಿಲು ತೆರೆಯುವುದು ಗುರುವಾರ ಬೆಳಿಗ್ಗೆ 6:50 ರಿಂದ 7:00 ಗಂಟೆ ಆಗುತ್ತದೆ.ಆದರೆ ಸಂಘದ ಎಲ್ಲ ಸದಸ್ಯರುಗಳು ಚಳಿ ಮಳೆ ಅನ್ನದೆ,ಗೃಹಿಣಿಯರು ಕೆಲಸಕ್ಕೆ ಹೋಗುವವರು,ಶಾಲೆ ಕಾಲೇಜಿಗೆ ಹೋಗುವ ಮಕ್ಕಳ ತಾಯಂದಿರು ಬೆಳಿಗ್ಗೆ ಬೇಗ ಬರುತ್ತಾರೆ, ಮನೆಕೆಲಸ ಅಥವಾ ಕೆಲಸಕ್ಕೆ ಹೋಗುವವರು ಎರಡು ನಿಮಿಷದ ಕೆಲಸ ಎಂದು ಕಚೇರಿ ತೆರೆಯುವ ಅರ್ಧ ಘಂಟೆ ಮುಂಚಿತವಾಗಿ ಕ್ಯೂ ನಲ್ಲಿ ನಿಂತಿರುತ್ತಾರೆ.ಅಲ್ಲಿಗೆ ಹಣಕಟ್ಟಲು ಬಂದ ಸಂಘದ ಸದಸ್ಯಸರು ಬರೋಬ್ಬರಿ 1ಗಂಟೆ ಕಾಯಬೇಕಾಗುತ್ತದೆ,ಇದು ಒಂದು ದಿನದ ವಿಷಯವಲ್ಲ,ಒಬ್ಬರ ಸಮಸ್ಯೆ ಅಲ್ಲಾ,ಪ್ರತಿ ಗುರುವಾರ ಹಾಗೂ ಪ್ರತಿಯೊಬ್ಬರ ಸಮಸ್ಯೆ,ಇದನ್ನು ಪ್ರಶ್ನಿಸಿದ್ದಕ್ಕೆ ಅಲ್ಲಿ ಕೆಲಸ ಮಾಡುವ ವ್ಯಕ್ತಿ ಹಲವಾರು ಕಾರಣ ಗಳನ್ನು ಹೇಳಿ ಆಯ್ತು ಎಂದು ಸಂಘದ ಸದಸ್ಯರಿಂದಆರೋಪ ಕೇಳಿ ಬರುತ್ತಿದೆ,
ಆದ್ದರಿಂದ ಆದಷ್ಟು ಬೇಗ ಧರ್ಮಸ್ಥಳ ಸಂಘದ ಉಸ್ತುವಾರಿಗಳು ಸಂಬಂಧ ಪಟ್ಟ ಮೇಲ್ವಿಚಾರರು ಅಥವಾ ಅಧಿಕಾರಿ ಗಳು ವಿಚಾರಣೆ ಮಾಡಿ ಇದನ್ನು ಸರಿಪಡಿಸಬೇಕಾಗಿದೆ ಎಂದು ಸಂಘದ ಸದಸ್ಯರ ಅಭಿಪ್ರಾಯ,
ವರದಿ, ಶಬ್ಬೀರ್ ಅಹ್ಮದ್ hh ಪುರ

Comments
Post a Comment