ಕೆಸಿಎಫ್ ಕುವೈಟ್ ವತಿಯಿಂದ ಈದ್ ಮೀಲಾದುನ್ನಬಿ ಕಾರ್ಯಕ್ರಮ: ಸ್ವಾಗತ ಸಮಿತಿ ರಚನೆ
ಕೆಸಿಎಫ್ ಕುವೈಟ್ ವತಿಯಿಂದ ಈದ್ ಮೀಲಾದುನ್ನಬಿ ಕಾರ್ಯಕ್ರಮ: ಸ್ವಾಗತ ಸಮಿತಿ ರಚನೆ
ಕುವೈಟ್, ಜೂನ್ 12: ಕರ್ನಾಟಕ ಕಲ್ಚರಲ್ ಫೌಂಡೇಷನ್ (KCF) ಕುವೈಟ್ ವತಿಯಿಂದ "ಪ್ರವಾದಿ ﷺ ರವರ ಜೀವನ ಮಾನವತೆಗೆ ಮಾದರಿ" ಎಂಬ ಘೋಷವಾಕ್ಯದಡಿ ಆಯೋಜಿಸಲಾಗುತ್ತಿರುವ ಈದ್ ಮೀಲಾದುನ್ನಬಿ ಕಾರ್ಯಕ್ರಮವು 2026ರ ಆಗಸ್ಟ್ 21ರಂದು ನಡೆಯಲಿದ್ದು, ಇದರ ಅಂಗವಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.
ಕೆಸಿಎಫ್ ಕುವೈಟ್ ಅಧ್ಯಕ್ಷರಾದ ಬಹು ಅಬ್ದುಲ್ ರಹ್ಮಾನ್ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ಜೂನ್ 12ರಂದು ನಡೆದ ಸಭೆಯಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕನ್ವಿನರ್ ಯಾಕುಬ್ ಕಾರ್ಕಳ,
ಸ್ವಾಗತ ಸಮಿತಿಯ ಛೇರ್ಮನ್ ಆಗಿ ಬಹು ಅಬ್ದುಲ್ ರಹ್ಮಾನ್ ಸಖಾಫಿ, ಉಪ ಛೇರ್ಮನ್ ಆಗಿ ಬಹು ಹುಸೈನ್ ಎರ್ಮಾಡ್, ಕನ್ವಿನರ್ ಆಗಿ ಜನಾಬ್ ಯಾಕೂಬ್ ಕಾರ್ಕಳ ಹಾಗೂ ಫೈನಾನ್ಸರ್ ಆಗಿ ಜನಾಬ್ ಇಕ್ಬಾಲ್ ಕಂದಾವರ್ ಅವರನ್ನು ನೇಮಕ ಮಾಡಲಾಯಿತು.
ಪ್ರಚಾರ ವಿಭಾಗದಲ್ಲಿ ಮುಸ್ತಫ ಉಳ್ಳಾಲ, ಇಬ್ರಾಹಿಂ ವೇಣೂರು, ಅಬ್ಬಾಸ್ ಬಳಂಜೆ, ಅನ್ವರ್ ಬಜ್ಪೆ ಹಾಗೂ ಇಸ್ಮಾಯಿಲ್ ಬೊಳ್ಳಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಸಭಾಂಗಣ ಮತ್ತು ವೇದಿಕೆ ವ್ಯವಸ್ಥೆಯ ಜವಾಬ್ದಾರಿಯನ್ನು ತೌಫೀಕ್ ಕಾರ್ಕಳ ಹಾಗೂ ಕಲಂದರ್ ಶಾಫಿ ಕೃಷ್ಣಾಪುರ ಅವರಿಗೆ ವಹಿಸಲಾಗಿದೆ.
ಕೋಶಾಧಿಕಾರಿ ಇಕ್ಬಾಲ್ ಕಂದಾವರ,
ವಾಹನ ವ್ಯವಸ್ಥೆಗೆ ಉಸ್ಮಾನ್ ಕೋಡಿ ಮತ್ತು ಶೌಕತ್ ಶಿರ್ವ, ಉಪಹಾರ ವ್ಯವಸ್ಥೆಗೆ ರಹೀಂ ಕೃಷ್ಣಾಪುರ, ಕಲಂದರ್ ಚೊಕ್ಕಬೆಟ್ಟು, ಜಮಾಲ್ ಮಣಿಪುರ ಹಾಗೂ ಸುಲೈಮಾನ್ ಬಜ್ಪೆ ಅವರನ್ನು ನೇಮಕ ಮಾಡಲಾಗಿದೆ. ಅತಿಥಿ ಸತ್ಕಾರ ಸಮಿತಿಯಲ್ಲಿ ಝಕರಿಯ್ಯಾ ಆನೆಕಲ್, ವಹೀಬ್ ಕೆಸಿ ರೋಡ್, ಸೆಮೀರ್ ಕೆಸಿ ರೋಡ್ ಹಾಗೂ ಅಬ್ದುಲ್ ಮಾಲಿಕ್ ಕಾರ್ಯನಿರ್ವಹಿಸಲಿದ್ದಾರೆ.
ಸ್ಟಾರ್ ಟೀಂನಲ್ಲಿ ಕಾಸಿಂ ಉಸ್ತಾದ್ ಬೆಲ್ಮಾ, ಹಸೈನಾರ್ ಮೊಂಟುಗೊಳಿ, ಇಸ್ಮಾಯಿಲ್ ಅಯ್ಯಂಗೇರಿ ಹಾಗೂ ಸತ್ತಾರ್ ಸಅದಿ ಅವರನ್ನು ಒಳಗೊಂಡಿದ್ದು, Eye Team ವಿಭಾಗದಲ್ಲಿ ಆಸಿಫ್ ಸಾಗರ್, ಇಕ್ಬಾಲ್ ಎಡಪದವು ಹಾಗೂ ಇರ್ಷಾದ್ ಬಾಳುಪೇಟೆ ಅವರನ್ನು ಆಯ್ಕೆ ಮಾಡಲಾಗಿದೆ.
ಹಿರಿಯರ (ಸೀನಿಯರ್) ವಿಭಾಗದಲ್ಲಿ ಶಾಹುಲ್ ಹಮೀದ್ ಸಅದಿ, ಬಾದುಷ ಸಖಾಫಿ, ಫಾರುಕ್ ಸಖಾಫಿ, ಉಮರ್ ಝುಹ್ರಿ ಹಾಗೂ ಅಹ್ಸನಿ ಉಸ್ತಾದ್ ಅವರನ್ನು ನೇಮಕ ಮಾಡಲಾಗಿದೆ. ಮಾರ್ಕೆಟಿಂಗ್ ಮತ್ತು ಜಾಹೀರಾತು ವಿಭಾಗದಲ್ಲಿ ಕಲಂದರ್ ಶಾಫಿ ಕೃಷ್ಣಾಪುರ, ಸಿರಾಜ್ ಸುಂಟಿಗೊಪ್ಪ ಹಾಗೂ ಮೂಸ ಇಬ್ರಾಹಿಂ ಕಾರ್ಯನಿರ್ವಹಿಸಲಿದ್ದಾರೆ.
ಸಭೆಯಲ್ಲಿ ಮಾತನಾಡಿದ ಪದಾಧಿಕಾರಿಗಳು, ಈದ್ ಮೀಲಾದುನ್ನಬಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲು ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕುವೈಟ್‌ನ ವಿವಿಧ ಭಾಗಗಳ ಕೆಸಿಎಫ್ ಕಾರ್ಯಕರ್ತರು ಹಾಗೂ ಸಮುದಾಯದ ಮುಖಂಡರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.






Comments
Post a Comment