ಕುವೈಟ್,ಫಾಹೀಲ್‌ನಲ್ಲಿ ಕೆಸಿಎಫ್ ಸೌತ್ ಝೋನ್ ಹಿಜರಿ ಸಂದೇಶ ಕಾರ್ಯಕ್ರಮ ಯಶಸ್ವಿ,
ಫಾಹೀಲ್‌ನಲ್ಲಿ ಕೆಸಿಎಫ್ ಸೌತ್ ಝೋನ್ ಹಿಜರಿ ಸಂದೇಶ ಕಾರ್ಯಕ್ರಮ ಯಶಸ್ವಿ,
ಕುವೈತ್, ಜೂನ್ 19: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌತ್ ಝೋನ್ ವತಿಯಿಂದ ಫಾಹೀಲ್ ಕಚೇರಿಯಲ್ಲಿ ಆಯೋಜಿಸಲಾದ "ಹಿಜರಿ ಸಂದೇಶ – 2026" ಕಾರ್ಯಕ್ರಮವು ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೌತ್ ಝೋನ್ ಅಧ್ಯಕ್ಷ ಹಸೈನಾರ್ ಮೊಂಟುಗೊಳಿ ವಹಿಸಿದ್ದರು. ಝೋನ್ ಕಾರ್ಯದರ್ಶಿ ಮುನೀರ್ ಕಾರ್ಕಳ ಅವರು ಆಗಮಿಸಿದ ಅತಿಥಿಗಳು, ನಾಯಕರು ಹಾಗೂ ಕಾರ್ಯಕರ್ತರನ್ನು ಸ್ವಾಗತಿಸಿದರು.
ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಉಳ್ಳಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮುಖ್ಯ ಭಾಷಣ ಮಾಡಿದ ಫಾರೂಕ್ ಸಖಾಫಿ ಅವರು ಹಿಜ್ರಿಯ ಐತಿಹಾಸಿಕ ಹಿನ್ನೆಲೆ, ಅದರ ಮಹತ್ವ ಹಾಗೂ ಇಂದಿನ ಸಮಾಜಕ್ಕೆ ನೀಡುವ ಸಂದೇಶಗಳ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡಿ ಸಭಿಕರ ಗಮನ ಸೆಳೆದರು.
ಈದ್ ಮೀಲಾದ್ ಕಾರ್ಯಕ್ರಮದ ಕನ್ವೀನರ್ ಯಾಕೂಬ್ ಕಾರ್ಕಳ ಆಶಯ ಭಾಷಣ ಮಾಡಿ, ಹಿಜ್ರಿಯ ಸಂದೇಶವನ್ನು ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯತೆಯನ್ನು ಒತ್ತಿಹೇಳಿದರು.
ವೇದಿಕೆಯಲ್ಲಿ ಐಸಿ ನಾಯಕ ಝಕರಿಯಾ ಆನೆಕಲ್, ನ್ಯಾಷನಲ್ ನಾಯಕರು ಮೂಸ ಇಬ್ರಾಹಿಂ, ಇಬ್ರಾಹಿಂ ವೇಣೂರು, ಮಲಿಕ್ ಸೂರಿಂಜೆ, ತೌಫೀಕ್ ಕಾರ್ಕಳ, ಇಕ್ಬಾಲ್ ಕಂದಾವರ, ಮಹಬೂಲ್ ಹಾಗೂ ಫಾಹೀಲ್ ಸೆಕ್ಟರ್‌ನ ವಿವಿಧ ನಾಯಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ಸೌತ್ ಝೋನ್ ಸಾಂತ್ವನ ವಿಭಾಗದ ನಾಯಕ ಹಸನಬ್ಬ ಅವರು ಅತಿಥಿಗಳು, ನಾಯಕರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.
ಧಾರ್ಮಿಕ ಜಾಗೃತಿ, ಸೌಹಾರ್ದತೆ ಮತ್ತು ಸಂಘಟನಾ ಬದ್ಧತೆಯ ಸಂದೇಶವನ್ನು ಸಾರಿದ ಈ ಕಾರ್ಯಕ್ರಮವು ಭಾಗವಹಿಸಿದ ಎಲ್ಲರಲ್ಲೂ ಉತ್ತಮ ಸ್ಪಂದನೆ ಮೂಡಿಸಿತು ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.
ವರದಿ: ಪ್ರಕಾಶನ ಮತ್ತು ಪ್ರಚಾರ ವಿಭಾಗ, ಕೆಸಿಎಫ್ ಕುವೈತ್.




Comments
Post a Comment