Posts

Showing posts from November, 2022

ಎನ್ ಆರ್,ಪುರ, ಭೀಕರ ರಸ್ತೆ ಅಪಘಾತ,ಒಂದು ಸಾವು,ಹತ್ತು ಮಂದಿ ಗಂಭೀರ,

Image
  ನರಸಿಂಹರಾಜಪುರ:- ತಾಲ್ಲೂಕಿನ ಮುತ್ತಿನಕೊಪ್ಪ ಬಳಿ ಟಿಪ್ಪರ್ ಹಾಗೂ ಕೆಕೆಬಿ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟು 15 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ, ಮುತ್ತಿನ ಕೊಪ್ಪ ಕಾಲೇಜು ಬಳಿ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ . ಎನ್.ಆರ್ ಪುರ ಕಡೆಯಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಕೆಕೆಬಿ ಬಸ್ ಹಾಗೂ ಶಿವಮೊಗ್ಗ ಕಡೆಯಿಂದ ಆಗಮಿಸುತ್ತಿದ್ದ ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ . ಮೃತರು ಲಕ್ಕವಳ್ಳಿ ಮೂಲದ ರತ್ನಮ್ಮ ( 56 ) ಎಂದು ಗುರುತಿಸಲಾಗಿದೆ . ಅಪಘಾತವಾದ ಕೂಡಲೇ ಶಿವಮೊಗ್ಗಕ್ಕೆ ಕೊಂಡೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಗಂಭೀರವಾಗಿ ಗಾಯಗೊಂಡ 10 ಪ್ರಯಾಣಿಕರನ್ನು ಶಿವಮೊಗ್ಗ ಮೆಗ್ಗಾನ್ ಅಸ್ಪತ್ರೆಗೆ ರವಾನಿಸಲಾಗುತ್ತಿದೆ,ಎನ್ ಆರ್ ಪುರ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. 🖊️ವೀರಮಣಿ ಬಾಳೆಹೊನ್ನುರು,

ಕೊಪ್ಪ,ಅರಳಿಕಟ್ಟೆ ಆಟೋ ನಿಲ್ದಾಣಕ್ಕೆ,ಡಾ,ಪುನೀತ್ ರಾಜಕುಮಾರ್,ಆಟೋ ನಿಲ್ದಾಣ ಎಂದು ನಾಮಕರಣ,

Image
  ಕೊಪ್ಪ,ಅರಳಿಕಟ್ಟೆ ಆಟೋ ನಿಲ್ದಾಣಕ್ಕೆ,ಡಾ,ಪುನೀತ್ ರಾಜಕುಮಾರ್,ಆಟೋ ನಿಲ್ದಾಣ ಎಂದು ನಾಮಕರಣ , ಕೊಪ್ಪ:-ಪಟ್ಟಣದ ಅರಳಿಕಟ್ಟೆ ಶಕ್ತಿಗಣಪತಿ ದೇವಸ್ಥಾನದ ಬಳಿ ಇರುವ ಆಟೋ ನಿಲ್ದಾಣಕ್ಕೆ 25/11/22 ರಂದು ಕರ್ನಾಟಕ ರತ್ನಾ ಡಾ!! ಪುನೀತ್ ರಾಜ್ ಕುಮಾರ್ ಆಟೋ ನಿಲ್ದಾಣ ಎಂದು ನಾಮಕರಣ ಮಾಡಲಾಯಿತು, ಕನ್ನಡ ಧ್ವಜಾರೋಹಣ ಮಾಡಿ ಸಾರ್ವಜನಿಕರಿಗೆ ಸಿಹಿವಿತರಿಸಿ ಸಂಭ್ರಮಿಸಿದರು, ಈ ಕಾರ್ಯಕ್ರಮದಲ್ಲಿ ಅರಳಿಕಟ್ಟೆಯ ಆಟೋ ಚಾಲಕರಾದ ವರ್ಗೀಸ್,ಜಗದೀಶ್,ರವಿ,ಶರೀಷ್,ಸತೀಶ,ಹಾಗೂ ಎಲ್ಲಾ ಚಾಲಕರು ಪಾಲ್ಗೊಂಡು ಪುನೀತ್ ರಾಜಕುಮಾರ್ ರವರನ್ನು ಸ್ಮರಿಸಿ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿದರು. 🖊️ವೀರಮಣಿ ಬಾಳೆಹೊನ್ನುರು,

ಆನೆ ದಾಳಿಗೆ ಮಹಿಳೆ ಬಲಿ, ಶಾಸಕ ಎಂ ಪಿ ಕುಮಾರಸ್ವಾಮಿ ಮೇಲೆ ಹಲ್ಲೆ !?

Image
  ಆನೆ ದಾಳಿಗೆ ಮಹಿಳೆ ಬಲಿ, ಶಾಸಕ ಎಂ ಪಿ ಕುಮಾರಸ್ವಾಮಿ ಮೇಲೆ ಹಲ್ಲೆ !? ಚಿಕ್ಕಮಗಳೂರು:- ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಕಾಡಾನೆ ತುಳಿದು ಮಹಿಳೆ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮಹಿಳೆಯ ಶವ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿರುವ ಆರೋಪ ಕೇಳಿ ಬಂದಿದೆ. ಭಾನುವಾರ ಬೆಳಗ್ಗೆ 7.30ಕ್ಕೆ ಕಾಡಾನೆ ತುಳಿದು ಮಹಿಳೆ ಸಾವನ್ನಪ್ಪಿದ್ದು, ಸಂಜೆ 6 ಗಂಟೆಗೆ ಗ್ರಾಮಕ್ಕೆ ಶಾಸಕ ಎಂ.ಪಿ.ಕುಮಾರಸ್ವಾಮಿ ತೆರಳಿದ್ದಾರೆ. ಈ ವೇಳೆ ಗ್ರಾಮಸ್ಥರು ಹಾಗೂ ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ. ಶಾಸಕ ಕುಮಾರಸ್ವಾಮಿ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡಿದ್ದು, ಪ್ರಶ್ನೆ ಮಾಡಿದ ಜನರ ಮೇಲೆ ಪೊಲೀಸರು ಲಾಠಿ ಬೀಸಿರುವ ಆರೋಪ ಕೇಳಿ ಬಂದಿದೆ. ಅಲ್ಲದೇ ಗ್ರಾಮದಿಂದ ಜೀಪ್ ನಲ್ಲಿ ಕೂರಿಸಿಕೊಂಡು ಶಾಸಕರನ್ನು ಪೊಲೀಸರು ಗ್ರಾಮದಿಂದ ಹೊರ ತಂದಿದ್ದಾರೆ. ಈ ವೇಳೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಪ್ರತಿಭಟನೆಯ ವೇಳೆಯಲ್ಲಿ ಬೇಕು ಅಂತ ಕೆಲವರು ಗುಂಪು ಮಾಡಿಕೊಂಡು ಹಲ್ಲೆ ಮಾಡಿದ್ದಾರೆ. ಶಾಸಕರು ಆನೆ ಸಾಕಿದ್ದಾರೆ ಎಂದು ಜನ ಹೊಡೆದು ಕಳುಹಿಸಿದ್ದಾರೆ. ಸಂಚು ಮಾಡಿ ಹಲ್ಲೆ ಮಾಡಿದ್ದಾರೆ. ನನ್ನನ್ನು ರಕ್ಷಿಸುವಲ್ಲಿ ಪೊಲೀಸರು ವಿಫಲರಾಗಿದ್ದಾ...

ನರಸಿಂಹರಾಜಪುರ:-ಕಾಫಿಮಂಡಳಿ ಅಧ್ಯಕ್ಷರಿಗೆ ಸನ್ಮಾನ,

Image
ನರಸಿಂಹರಾಜಪುರ:- ತಾಲ್ಲೂಕಿನ ಕರ್ಕೇಶ್ವರ ಕೈಮರದ ಬಿಜೆಪಿ ಯುವ ಘಟಕ ಇವರ ಸಹಯೋಗದಲ್ಲಿ ಕಾಫಿ ಮಂಡಳಿಯ ಅಧ್ಯಕ್ಷರಾದ ವೇನಿಲ್ಲ ಭಾಸ್ಕರ್ ರವರಿಗೆ ಕರ್ಕೇಶ್ವರ ಕೈಮರದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಯುವ ಘಟಕ ವತಿಯಿಂದ ಸನ್ಮಾನಿಸಲಾಯಿತು, ಈ ಕಾರ್ಯಕ್ರಮದಲ್ಲಿ ಪ್ರಭಾಕರ್ ಪ್ರಾಣಸ್ವಿ, ರಾಮಚಂದ್ರಭಟ್, ದಿನಕರ್ ಭಟ್,ರತ್ನಾಕರ್ ಭಟ್ ಸತೀಶ್ ಕೇಶವತಿ, ಪ್ರಕಾಶ್ ಸದಸ್ಯರು , ನಾರಾಯಣ ಒಬಿಸಿ ಅಧ್ಯಕ್ಷರು , ಕರ್ಕೇಶ್ವರ ಕೈಮರ ದೇವಸ್ಥಾನದ ಅಧ್ಯಕ್ಷರಾದ ಶೇಖರ್ ಹಾಗೂ ಸುದರ್ಶನ್ ಇದ್ದರು ಹಾಗೂ ಕರ್ಕೇಶ್ವರ ಕೈಮರದ ಬಿಜೆಪಿ ಯುವ ಘಟಕದವರು ಹಾಗೂ ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು, 🖊️ವೀರಮಣಿ ಬಾಳೆಹೊನ್ನುರು  

ಕೊಪ್ಪ,ಅಲಗೇಶ್ವರ,ಸಮಸ್ಯೆಗೆ ಸ್ಪಂದಿಸದ ಗ್ರಾಮ ಪಂಚಾಯಿತಿಯ ಸದಸ್ಯರು,ಸಭೆಗೆ ಗೈರು,!

Image
  ಕೊಪ್ಪ, ಅಲಗೇಶ್ವರ,ಸಮಸ್ಯೆಗೆ ಸ್ಪಂದಿಸದ ಗ್ರಾಮ ಪಂಚಾಯಿತಿಯ ಸದಸ್ಯರು,ಸಭೆಗೆ ಗೈರು,! ಕೊಪ್ಪ:- ತಾಲ್ಲೂಕಿನ ಅಲಗೇಶ್ವರ ರಸ್ತೆ ದುರಸ್ತಿಯ ಬಗ್ಗೆ ಚರ್ಚಿಸಲು ಚೌಡಿ ಕಟ್ಟೆ ಅಲಗೇಶ್ವರ ರಸ್ತೆ ಹೋರಾಟ ಸಮಿತಿ ಸಭೆಯನ್ನು ಕರೆಯಲಾಗಿತ್ತು,  ವಿಶೇಷವಾಗಿ ಚೌಡಿ ಕಟ್ಟೆ ಅಲಗೇಶ್ವರ ಗ್ರಾಮ ಪಂಚಾಯತಿ ಸದಸ್ಯರನ್ನು ಕರೆಯಲಾಗಿತ್ತು ಸದಸ್ಯರು ಸಭೆಗೆ ಗೈರು ಆಗಿದ್ದರು, ಚರ್ಚೆಯನ್ನು ಮುಂದುವರಿಸುತ್ತಾ ಚೌಡಿ ಕಟ್ಟೆಯಿಂದ ಗಾಳಿ ಗಂಡಿಯ ವರೆಗೆ ಉತ್ತಮ ಗುಣಮಟ್ಟದ ರಸ್ತೆ ಮತ್ತು ಉತ್ತಮ ಗುಣಮಟ್ಟದ ಚರಂಡಿ ವ್ಯವಸ್ಥೆ ಕೂಡಲೇ ಮಂಜೂರು ಮಾಡಬೇಕೆಂದು ಎರಡು ದಿನದ ಗಡುವನ್ನು ನೀಡಿ ಬುಧವಾರದಂದು ಉಗ್ರ ಹೋರಾಟ ನಡೆಸಲು ಚೌಡಿ ಕಟ್ಟೆ ಅಲಗೇಶ್ವರ ಗ್ರಾಮಸ್ಥರು ತೀರ್ಮಾನಿಸಿದ್ದಾರೆ,  ಇದಕ್ಕೆ ಆದಷ್ಟು ಬೇಗ ಉತ್ತರವನ್ನು ಕ್ಷೇತ್ರದ ಶಾಸಕರಾದ ರಾಜೇಗೌಡರು ಮತ್ತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾದ ಜೀವರಾಜ್ ಅವರು ಮತ್ತು ಇದೇ ಕ್ಷೇತ್ರದಿಂದ ಗೆದ್ದು ಕೇಂದ್ರ ಸಚಿವರಾದಂತಹ ಶೋಭಾ ಕರಂದ್ಲಾಜೆ ಅವರು ಕೂಡ ಇದಕ್ಕೆ ಪ್ರತಿಕ್ರಿಯಿಸಬೇಕು ಇದ್ಯಾವುದು ಆಗದೇ ಇರುವ ಪಕ್ಷದಲ್ಲಿ ಬುಧವಾರ ಉಗ್ರ ಹೋರಾಟ ನಡೆಯುವುದು ಮಾತ್ರ ಖಚಿತ ಎಂದು ಚೌಡಿಕಟ್ಟೆ ಅಲಗೇಶ್ವರ ರಸ್ತೆ ಹೋರಾಟ ಸಮಿತಿ ಮತ್ತು ಗ್ರಾಮಸ್ಥರು ತೀರ್ಮಾನಿಸಿದ್ದಾರೆ, 🖋ವೀರಮಣಿ,ಬಾಳೆಹೊನ್ನುರು,

ಕೆಸಿಎಫ್ ಸೌತ್ ಝೋನ್ ಕುವೈಟ್ ವತಿಯಿಂದ ಮುಹಿಯದ್ದೀನ್ ರಾತೀಬ್ ಆಲಪಾನೆ

Image
  ಕೆಸಿಎಫ್ ಸೌತ್ ಝೋನ್  ಕುವೈಟ್ ವತಿಯಿಂದ  ಮುಹಿಯದ್ದೀನ್ ರಾತೀಬ್ ಆಲಪಾನೆ ಶೈಖ್ ಜೀಲಾನಿ (ಖ. ಸಿ )ತಾಜುಲ್ ಉಲಮಾ, ನೂರುಲ್ ಉಲಮಾ  ಶೈಖುಲ್ ಹದೀಸ್ ನೆಲ್ಲಿಕುತ್ತು ಇಸ್ಮಾಯಿಲ್ ಮುಸ್ಲಿಯಾರ್ ಅನುಸ್ಮರಣೆ ಕಾರ್ಯಕ್ರಮ ದಿನಾಂಕ 11/11/2022  ಫಹಾಹೀಲ್ ಕೆಸಿಎಫ್ ಕಛೇರಿಯಲ್ಲಿ   ಸೌತ್ ಝೋನ್  ಅಧ್ಯಕ್ಷ ಜನಾಬ್ ಎಸ್ ಎಂ ಉಮರಬ್ಬ ಕೊಳಕೆ ರವರ ಅಧ್ಯಕ್ಷತೆ ಯಲ್ಲಿ ಬಹುಮಾನ್ಯ ಸಾಹುಲ್ ಹಮೀದ್ ಸಅದಿ ಝುಹುರಿ ಉಸ್ತಾದ್ ರವರ  ದುವಾ ದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿದ್ದು ಸೌತ್ ಝೋನ್ ಕಾರ್ಯದರ್ಶಿ ಜನಾಬ್ ಮುನೀರ್ ಕಾರ್ಕಳ ಸ್ವಾಗತ ಮಾಡಿ ಮುಹಿಯದ್ದೀನ್ ರಾತೀಬ್ ಆಲಪಾನೆ ಯನ್ನು ಬಹುಮಾನ್ಯ ಸಾಹುಲ್ ಹಮೀದ್ ಸಅದಿ ಝುಹುರಿ ಉಸ್ತಾದರ ಸಮ್ಮುಖದಲ್ಲಿ ನೆರವೇರಿತು ಅದರಂತೆ ಕೆಸಿಎಫ್  ಕುವೈಟ್ ರಾಷ್ಟ್ರೀಯ ಸಮಿತಿಯ ಶಿಕ್ಷಣ ಅಧ್ಯಕ್ಷ ಬಹುಮಾನ್ಯ ಬಾದುಷಾ ಸಖಾಫಿ ಉದ್ಘಾಟನ ಭಾಷಣ ಗೈದು, ಆಶಂಸ ಭಾಷಣ ವನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಯಾಕೂಬ್ ಕಾರ್ಕಳ, ಕೆಸಿಎಫ್ ನೋರ್ತ್ ಝೋನ್ ಅಧ್ಯಕ್ಷ ಜನಾಬ್ ಖಲಂದರ್ ಶಾಫಿಗೈದರು ಅದೇ ರೀತಿ ರಾಷ್ಟ್ರೀಯ ಸಮಿತಿ ಪಬ್ಲಿಕೇಶನ್ ವಿಭಾಗದ  ಅಧ್ಯಕ್ಷ ಬಹುಮಾನ್ಯ ಸಾಹುಲ್ ಹಮೀದ್ ಸಅದಿ ಝುಹುರಿರವರು ಮುಹಿ ಯದ್ದಿನ್ ಶೈಖ್ ರವರ ಚರಿತ್ರೆ ಬಗ್ಗೆ  ಸವಿವಿವರ ವಾಗಿ  ತಿಳಿಸಿದರು ಅದೇ ರೀತಿ  ಕಾರ್ಯಕ್ರಮದಲ್ಲಿ ಕೆಸ...

ಕೊಪ್ಪ,ಚುನಾವಣೆ ಬಹಿಸ್ಕಾರ ಮೂವತ್ತು ವರ್ಷಗಳಿಂದ ಡಾಂಬರು ಕಾಣದ ರಸ್ತೆ,,

Image
  ಮೂವತ್ತು ವರ್ಷಗಳಿಂದ ಡಾಂಬರು ಕಾಣದ ರಸ್ತೆ,, ಕೊಪ್ಪ:- ತಾಲ್ಲೂಕಿನ ಅಳಗೇಶ್ವರಎಸ್ಟೇಟಿನ ಗಾಳಿಗಂಡಿ ಗ್ರಾಮಸ್ಥರು ಸೇರಿ ರಸ್ತೆ ಹೋರಾಟದ ಬಗ್ಗೆ ಮುಂದಿನ ದಿನಗಳ ನಡೆಯನ್ನು ತೀರ್ಮಾನಿಸಲಾಯಿತು, ಅಂದರೆ ಸತತ 30 ವರ್ಷ ಗಳಿಂದ ರಸ್ತೆ ಡಾಂಬರೀಕರಣ ಕಂಡೆ ಇಲ್ಲದ ರಸ್ತೆ,ಇದು ನಮ್ಮ ಗ್ರಾಮಸ್ಥರ ದುರಾದೃಷ್ಟವೋ ಅಥವಾ ನಾವು ಗೆಲ್ಲಿಸಿದಂತ,ಶಾಸಕರ, ತಾಲ್ಲೂಕ್ ಪಂಚಾಯಿತಿಯ ಸದಸ್ಯರ,ಜಿಲ್ಲಾ ಪಂಚಾಯಿತಿಯ ಸದಸ್ಯರಗಳ ಅಥವಾ ಗ್ರಾಮ ಪಂಚಾಯ್ತಿ ಯವರ ದುರದೃಷ್ಟವೋ ಗೊತ್ತಿಲ್ಲ ನಾವು ಯಾರ ಹತ್ರ ಕೇಳಿದ್ರು ಅವರು ಇವರ ಬಗ್ಗೆ ಹೇಳೋದು ಇವರು ಅವರ ಬಗ್ಗೆ ಹೇಳೋದು ಇದೆ ಆಗಿದೆ ಮಧ್ಯದಲ್ಲಿ ಇರುವಂತಹ ನಾವು ಗ್ರಾಮಸ್ಥರು ಈ ರಸ್ತೆಯಿಂದ ಆಗುವ ತೊಂದರೆಗಳನ್ನು ಎದುರಿಸುವ ಪರಿಸ್ಥಿತಿ ಆಗಿದೆ, ದಿನಾ ಬೆಳಿಗ್ಗೆ ಆದ್ರೆ ಈ ರಸ್ತೆ ಹೇಗೆ ದಾಟೋದು ಅನ್ನೋ ಚಿಂತೆ, ಸಂಜೆ ಬರುವಾಗ ಹೇಗಪ್ಪಾ ಮನೆಗೆ ಹೋಗೋದ್ ಅನ್ನೋ ಈ ಹೆದರಿಕೆಯ ಪರಿಸ್ಥಿತಿ ನಮ್ಮದಾಗಿದೆ, ಆದ್ದರಿಂದ ನಾವು ಈ ಬಾರಿ ಯಾವುದೇ ಕಾರಣಕ್ಕೂ ಯಾವುದೇ ಪಕ್ಷ ಪಾತ ವಿಲ್ಲದೇ ಎಲ್ಲಾ ಒಟ್ಟಾಗಿ ಒಂದೇ ಮನೋಭಾವ ಇಟ್ಟುಕೊಂಡು ರಸ್ತೆಯ ಅಭಿವೃದ್ಧಿಯ ಬಗ್ಗೆ ತೀವ್ರವಾದ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ,ನಮಗೆ ಸೂಕ್ತ ಉತ್ತರ ಸಿಗದಿದ್ದರೆ ಮುಂದಿನ ಚುನಾವಣೆ ಬಹಿಸ್ಕಾರಮಾಡುವುದಾಗಿ ತಿಳಿಸಿದ್ದಾರೆ, 🖊️ವೀರಮಣಿ ಬಾಳೆಹೊನ್ನುರು,

ಕಾರ್ ಶೆಡ್ಡಿನಲ್ಲಿ ನವ ವಿವಾಹಿತೆ ಆತ್ಮಹತ್ಯೆ,?ಗಂಡನ ಕುಡಿತಕ್ಕೆ ಪತ್ನಿ ಬಲಿ ನವ್ಯಶ್ರೀ ಪೋಷಕರ ದೂರು,

Image
  ಕಾರ್ ಶೆಡ್ಡಿನಲ್ಲಿ ನವ ವಿವಾಹಿತೆ ಆತ್ಮಹತ್ಯೆ,?ಗಂಡನ ಕುಡಿತಕ್ಕೆ ಪತ್ನಿ ಬಲಿ ನವ್ಯಶ್ರೀ ಪೋಷಕರ ದೂರು ಚಿಕ್ಕಮಗಳೂರು:- ಐದು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆಯೊಬ್ಬರು ಕಾರ್‌ ಶೆಡ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಶಿವಮೊಗ್ಗದ ಹೊಮ್ಮರಡಿ ನರ್ಸಿಂಗ್‌ ಹೋಂ ಸಂಸ್ಥಾಪಕರಾದ ಡಾ.ಜಯಶ್ರೀ ಮಗನ ಹೆಂಡತಿ ನವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ.ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಬಳೊಯ ದೇವರಹಳ್ಳಿ ಗ್ರಾಮದವರಾದ ನವ್ಯಶ್ರೀ, ಆಕಾಶ್‌ ಜೊತೆ ಐದು ತಿಂಗಳ ಹಿಂದೆ ಮದುವೆಯಾಗಿದ್ದಳು. ಆದ್ರೆ ಆಕಾಶ್‌ ತಡ ರಾತ್ರಿ ಮನೆಗೆ ಬರೋದು. ಮದ್ಯ ಸೇವಿಸಿ ಬರೋದು ಮಾಡುತ್ತಿದ್ದರಂತೆ. ಇದರಿಂದ ಬೇಸತ್ತು ನವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ಆರೋಪ ಮಾಡಿದ್ದಾರೆ. ಈ ಬಗ್ಗೆ ವಿನೋಬ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 🖋ವೀರಮಣಿ ಬಾಳೆಹೊನ್ನುರು,