Posts

Showing posts from March, 2024

ರಿಯಾದ್,ಕೆಸಿಎಫ್ ಬದಿಯ ಸೆಕ್ಟರ್; ಗ್ರಾಂಡ್ ಇಫ್ತಾರ್ ಮೀಟ್,

Image
  ಕೆಸಿಎಫ್ ಬದಿಯ ಸೆಕ್ಟರ್; ಗ್ರಾಂಡ್ ಇಫ್ತಾರ್ ಮೀಟ್, ರಿಯಾದ್(ಮಾ,29); ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಬದಿಯ ಸೆಕ್ಟರ್ ವತಿಯಿಂದ ಮಾರ್ಚ್ 29 ಶುಕ್ರವಾರ ದಂದು ಗ್ರಾಂಡ್ ಇಫ್ತಾರ್ ಮೀಟ್ ಕಾರ್ಯಕ್ರಮ ರಿಯಾದಿನ ಶಾರ ಮದೀನಾ ದಿಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಸಿಎಫ್ ಬದಿಯ ಸೆಕ್ಟರ್ ಅಧ್ಯಕ್ಷರಾದ ಹಮೀದ್ ಮಠ ವಹಿಸಿದ್ದರು. ಸೆಕ್ಟರ್ ವ್ಯಾಪ್ತಿಯ ನಾಲ್ಕು ಯೂನಿಟ್ ಗಳು ಜಂಟಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆಸಿಎಫ್ ರಿಯಾದ್ ಝೋನ್ ಪ್ರ, ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಬದಿಯ ಸೆಕ್ಟರ್ ಉಸ್ತುವಾರಿ ಫಾರೂಕ್ ಪಾಣೆಮಂಗಳೂರು, ಸೆಕ್ಟರ್ ಶಿಕ್ಷಣ ಇಲಾಖೆ & ವಾದಿ ಲಬನ್ ಅಧ್ಯಕ್ಷರಾದ ಶಫೀಕ್ ಅಹ್ಸನಿ, ಶಾರ ಅಬ್ರಾಜ್ ಯುನಿಟ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಅಲೆಕ್ಕಾಡಿ, ಶಾರ ಮದೀನ ಯೂನಿಟ್ ಅಧ್ಯಕ್ಷರಾದ ಉಮ್ಮರ್ ಖಾಸಿಂ, ಶಿಫಾ ಯುನಿಟ್ ಅಧ್ಯಕ್ಷರಾದ ರಝ್ಝಾಕ್ ಪಾಲ್ಯ, ಅಬ್ದುಲ್‌ ರಝ್ಝಾಕ್ ಹಮ್ದಾನಿ ಮಾಚಾರ್, ರಿಯಾಝ್ ನೆಲ್ಯಾಡಿ, ರಶೀದ್ ಕಕ್ಕಿಂಜೆ, ರಝ್ಝಾಕ್ ಕಟ್ಟಾ, ಹಾರಿಸ್ ಕನ್ಯಾನ, ಹುಝೈಫಾ ಪೆರಾಜೆ, ಸತ್ತಾರ್ ಮಿತ್ತೂರು, ಮೊದಲಾದ ಯೂನಿಟ್, ಸೆಕ್ಟರ್, ಝೋನ್ ನಾಯಕರು ಉಪಸ್ಥಿತರಿದ್ದರು.  

ಕುವೈತ್,K C F ವತಿಯಿಂದ ಇಫ್ತಾರ್ ಮೀಟ್ ಮತ್ತು ಮಹ್ಲರತುಲ್ ಬದ್ರಿಯಾ ಕಾರ್ಯಕ್ರಮ,

Image
 ಮಹ್ಲರತುಲ್ ಬದ್ರಿಯ ಸ್ವಲಾತ್ ಮಜ್ಲಿಸ್, ಬದರ್ ಮೌಲೂದ್ ಪಾರಾಯಣ, Enlight ಸೆಕ್ಟರ್ Conference ಹಾಗು ಬೃಹತ್ ಇಫ್ತಾರ್ ಸಂಗಮ - 2024 ಕಾರ್ಯಕ್ರಮ, ದಿನಾಂಕ 29/03/2024ರ ಶುಕ್ರವಾರ ಅಸರ್ ನಮಾಜಿನ ಬಳಿಕ ಮಹಬುಲ ಬ್ಲಾಕ್ 1ರ KPC SAND 6 ಬಿಲ್ಡಿಂಗ್ನಲ್ಲಿ ಜನಾಬ್ ಶಂಸುದ್ದಿನ್ ಕುಂದಾಪುರ ಅವರ ಅಧ್ಯಕ್ಷತೆಯಲ್ಲಿ KCF ಕುವೈಟ್ ರಾಷ್ಟೀಯ ಪ್ರಚಾರ ವಿಭಾಗದ ಅಧ್ಯಕ್ಷರಾದ ಬಹುಮಾನ್ಯ ಶಾಹುಲ್ ಹಮೀದ್ ಸಅದಿ ಝುಹುರಿ ರವರ ದುವಾ ದೊಂದಿಗೆ ಹಾಗು ಮಹಬೂಲ ಸೆಕ್ಟರಿನ ಉಪಾಧ್ಯಕ್ಷರಾದ ಬಹುಮಾನ್ಯ ಸತ್ತಾರ್ ಸಅದಿ ಉಸ್ತಾದರ ನೇತೃತ್ವದಲ್ಲಿ ಮಹಬುಲ ಸೆಕ್ಟರಿನ ತಿಂಗಳಲ್ಲಿ ನಡೆಯುವ ಬದರ್ ಮೌಲೂದ್ ಪಾರಾಯಣ, Enlight ಸೆಕ್ಟರ್ Conference ಹಾಗು ಬೃಹತ್ ಇಫ್ತಾರ್ ಸಂಗಮ - 2024 ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ KCF ಕುವೈಟ್ ರಾಷ್ಟೀಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದರು, KCF ಕುವೈತ್ ರಾಷ್ಟೀಯ ಪ್ರಧಾನ ಕಾರ್ಯದರ್ಶಿಯಾದ ಬಹು ಯಾಕೂಬ್ ಕಾರ್ಕಳರವರು ಹಾಗು ಬಹುಮಾನ್ಯ ಫಾರೂಕ್ ಸಖಾಫಿ,ಉಸ್ತಾದ್ ಸಾಲ್ಮಿಯ ಸೆಕ್ಟರ್ ಅಧ್ಯಕ್ಷ ಕಾಸಿಂ ಉಸ್ತಾದ್ ಬೆಲ್ಮ ಹಾಗೂ ಕುವೈಟ್ ರಾಷ್ಟ್ರೀಯ ಸಮಿತಿ ಇಹ್ಸಾನ್ ಅಧ್ಯಕ್ಷರು ಆದ ಸೌಕತ್ ಅಲಿ ಶಿರ್ವ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ KCF ಕುವೈತ್ ರಾಷ್ಟೀಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದರು ರಮದಾನಿನ ಮಹತ್ವ, ಈವರೆಗಿನ ನಮ್ಮ ಇಬಾದತ್ತಿನ ಅವ...

MGT ರಿಯಾದ್ ವಲಯದ ಗ್ರ್ಯಾಂಡ್ ಇಫ್ತಾರ್ ಕೂಟ,

Image
  MGT ರಿಯಾದ್ ವಲಯದ ಗ್ರ್ಯಾಂಡ್ ಇಫ್ತಾರ್ ಕೂಟ , ಮಲೆನಾಡು ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆ (MGT) ರಿಯಾದ್ ವಲಯದ ವತಿಯಿಂದ ದಿನಾಂಕ 29-03-2024 ರಂದು ಶುಕ್ರವಾರ ಘಸ್ಸನ್ ಅಲ್ ರಬೀಹ್ ಇಸ್ತಿರಾಹ್ ರಿಯಾದ್ ನಲ್ಲಿ ಗ್ರ್ಯಾಂಡ್ ಇಫ್ತಾರ್ ಕೂಟವನ್ನು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು MGT ರಿಯಾದ್ ವಲಯದ ಅಧ್ಯಕ್ಷರಾದ ಇರ್ಷಾದ್ ಚಕ್ಮಕ್ಕಿ ಯವರು ವಹಿಸಿದ್ದರು. ಉಪವಾಸದ ಪವಿತ್ರ ತಿಂಗಳಲ್ಲಿ ಅನಿವಾಸಿ ಭಾರತೀಯ ಬಂಧು ಮಿತ್ರರು ಒಂದಾಗಲು ಮತ್ತು ಸಂಬಂಧವನ್ನು ಬೆಸೆಯಲು MGT ಯ ಇಫ್ತಾರ್ ಕೂಟವು ಒಂದು ಅದ್ಭುತ ಅವಕಾಶವನ್ನು ಒದಗಿಸಿತು. ಕಾರ್ಯಕ್ರಮದಲ್ಲಿ MGT ಕೇಂದ್ರ ಸಮಿತಿಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ಸತ್ತಾರ್ ಜಯಪುರ, MGT ದಮ್ಮಾಮ್/ಖೋಬರ್ ವಲಯದ ಅಧ್ಯಕ್ಷರಾದ ಜನಾಬ್ ಅಫ್ಝಲ್ ಸಮದ್ ಕೊಪ್ಪ ಮತ್ತು ಹಲವಾರು ಗಣ್ಯ ಸದಸ್ಯರು ಭಾಗವಹಿಸಿದ್ದರು. ಇಫ್ತಾರ್ ಕೂಟದಲ್ಲಿ ರುಚಿಕರವಾದ ಖಾದ್ಯಗಳ ಭೋಜನ ವ್ಯವಸ್ಥೆ ಮಾಡಲಾಗಿತ್ತು.  MGT ರಿಯಾದ್ ವಲಯದ ಗ್ರಾಂಡ್ ಇಫ್ತಾರ್ ಕೂಟ ಒಂದು ಅದ್ಭುತ ಯಶಸ್ಸು ಕಂಡಿತು.  MGT ರಿಯಾದ್ ವಲಯದ ಕಾರ್ಯದರ್ಶಿ ಅನ್ಸಾರ್ ಚಕ್ಮಕ್ಕಿ. ಉಪಾಧ್ಯಕ್ಷರಾದ ಝಬೀರ್ ಬಾಳೆಹೊನ್ನೂರು & ಆಫ್ರೋಝ್ಹಾಸನ  ಕೋಶಾಧಿಕಾರಿ ಅಬೂಬಕರ್ ಸಿದ್ದೀಖ್ ಬೇಲೂರು, ಸಲಹೆಗಾರ ಜುನೈದ್ ಇಸ್ಮಾಯಿಲ್ ಚಕ್ಮಕ್ಕಿ  ಕೇಂದ್ರ ಸಮಿತಿಯ ಕಾರ್ಯದರ್ಶಿ ನಝೀರ್ ಜಯಪು...

ರಿಯಾದ್:- ಕೆ.ಸಿ.ಎಫ್ ರಬುವ ಸೆಕ್ಟರ್ ಗ್ರಾಂಡ್ ಇಫ್ತಾರ್ ,

Image
ರಿಯಾದ್:- ಕೆ.ಸಿ.ಎಫ್ ರಬುವ ಸೆಕ್ಟರ್ ಗ್ರಾಂಡ್ ಇಫ್ತಾರ್ ,,  ರಿಯಾದ್ ಝೋನ್ ಅಧೀನದಲ್ಲಿರುವ ಕೆಸಿಎಫ್ ರಬುವ ಸೆಕ್ಟರ್ ಸದಾ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಸುದ್ದಿ ಮಾಡುತ್ತಲಿರುತ್ತದೆ.ಇತ್ತೀಚೆಗೆ ನಡೆದ ಗ್ರಾಂಡ್ ಇಫ್ತಾರ್ ಕಾರ್ಯಕ್ರಮ ಯಶಸ್ವಿ ಕಂಡಿದೆ. 22/03/2024, ಶುಕ್ರವಾರ ಸಂಜೆ 5ಕ್ಕೆ KCF ರಬುವ ಸೆಕ್ಟರ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿ ಅವರ ಅಧ್ಯಕ್ಷತೆಯಲ್ಲಿ .ಸಯ್ಯಿದ್ ಜಲಾಲುದ್ದೀನ್ ಅಲ್ -ಹಾದಿ ತಂಙಳ್ ಉಜಿರೆ,ಅವರ ನೇತೃತ್ವದಲ್ಲಿ ಆತ್ಮೀಯ ಮಜ್ಲಿಸ್ ನಡೆಯಿತು. ಬಳಿಕ ನಡೆದ ಬ್ರಹತ್ ಇಫ್ತಾರ್ ಕೂಟಕ್ಕೆ ನೂರಾರು ಜನರು ಭಾಗವಹಿಸಿದ್ದರು.ಮಗ್ರಿಬ್ ನಮಾಝ್ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ KCF ಕುರಿತ ತನ್ನ ಮನದಾಳದ ಮಾತುಗಳನ್ನು ಸಯ್ಯದ್ ಉಜಿರೆ ತಂಙಳ್ ಮಾತನಾಡುತ್ತಾ ಹಂಚಿಕೊಂಡರು. ಇದೇ ವೇದಿಕೆಯಲ್ಲಿ ಸಯ್ಯದ್ ಜಲಾಲುದ್ದೀನ್ ಅಲ್ ಹಾದಿ ತಂಙಲ್ ರವರಿಗೆ ಹಾಗೂ ಇರ್ಫಾನ್ ಕನ್ಯಾರಕೋಡಿ ಮುಖ್ತಾರ್ ಹಳೆಯಂಗಡಿ ಅವರಿಗೆ K C F ರಬ್ವ್ ಸೆಕ್ಟರ್ ವತಿಯಿಂದ ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಹಲವು ಉಲಮಾ ಉಮರಾ ನಾಯಕರು ಉಪಸ್ಥಿತರಿದ್ದರು. ಇಫ್ತಾರ್ ಕೂಟ ಸ್ವಾಗತ ಸಮಿತಿ ಚೆಯರ್ಮ್ಯಾನ್ ಅಬ್ದುಲ್ ಅಝೀಝ್ ಮೂಡಿಗೆರೆ,ವೈಸ್ ಚೆಯರ್ಮ್ಯಾನ್ ಅಬ್ದುಲ್ ಸಮದ್ ಗಂಡಿಬಾಗಿಲು, ಕನ್ವೀನರ್ PKM ಆಸಿಫ್ ಉರುವಾಲು ಪದವು,ವೈಸ್ ಕನ್ವೀನರ್ ಅಶ್ರಫ್ ತೌಡುಗೋಳಿ ಕೋಶಾಧಿಕಾರಿ ಅಬ್ದುಲ್ ಮಜೀದ್ ಹಳೆಯಂಗಡಿ ಸಲಹೆ ಗಾರರಾಗಿ ಇಸ್ಮಾಯಿಲ್ ಮದನಿ ಹಾಗ...

ಸೌದಿಅರೇಬಿಯದಲ್ಲಿ ಅಪಘಾತ ಮಗು ಸೇರಿ ನಾಲ್ವರು ಮೃತಪಟ್ಟಿದ್ದರೆ,

Image
 ತಾಯಿಫ್: ಕತಾರ್ ನಿಂದ ಸೌದಿ ಅರೇಬಿಯಾಕ್ಕೆ ಉಮ್ರಾ ನಿರ್ವಹಿಸಲು ಕಾರಿನಲ್ಲಿ ತೆರಳುತ್ತಿದ್ದ ಹಳೆಯಂಗಡಿ ಮೂಲದ ದಂಪತಿ,ಒಂದೂವರೆ ತಿಂಗಳಿನ ಮಗು ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಸೌದಿ ಅರೇಬಿಯಾದ ತಾಯಿಫ್ ನಲ್ಲಿ ನಡೆದಿದೆ. ವಾರ್ತಾ ಸಾರಥಿ,,21/03/2024 ಕತಾರ್ ನಲ್ಲಿ ವಾಸವಾಗಿದ್ದು, ತಮ್ಮ ಕನಸಾದ ಉಮ್ರಾ ನಿರ್ವಹಣೆಗಾಗಿ ಕತಾರ್ ನಿಂದ ರಸ್ತೆ ಮಾರ್ಗವಾಗಿ ಹೊರಟು ಸೌದಿಗೆ ಸಾಗುತ್ತಿದ್ದರು, ಬೊಳ್ಳೂರು ಜಮಾತ್ ಗೊಳಪಟ್ಟ, ಹಳೆಯಂಗಡಿ ಲೈಟ್ ಹೌಸ್ ಹೈದ್ರೋಸ್ ಕುಟುಂಬದ ಹಿರಿಯರಾದ ಶಮೀಮ್ ರವರ ಕಿರಿಯ ಮಗಳು, ಅವರ ಗಂಡ ಸಂಚರಿಸುತ್ತಿದ್ದ ಕಾರು ಸೌದಿ. ಹಾಗೂ ಕಾರಿನಲ್ಲಿದ್ದ ಅವರ ಮತ್ತೊಂದು ಮಗು ಅಲ್ಲದೆ ಅದೇ ಕುಟುಂಬದ ಲತೀಫ್ ರವರ ಮಗಳು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ನಿಘಾ ಘಟಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ, ಹಳೆಯಂಗಡಿ ಪಕ್ಷಿಕೆರೆಯ ಮುಹಮ್ಮದ್ ರಮೀಝ್ ಹಾಗೂ ಹಿಬಾ ಮತ್ತು ಅವರ ಇಬ್ಬರು ಮಕ್ಕಳು ನಿಧನರಾಗಿದ್ದಾರೆ. ಕತಾರ್‌ ನಿಂದ ಸೌದಿ ಅರೇಬಿಯಕ್ಕೆ ಉಮ್ರಾ ನಿರ್ವಹಿಸಲು ಕಾರಿನಲ್ಲಿ ಮಗುವಿನೊಂದಿಗೆ ದಂಪತಿ ತೆರಳುತ್ತಿದ್ದಾಗ ಗುರುವಾರ ಮುಂಜಾನೆ ಸುಮಾರು ನಾಲ್ಕು ಗಂಟೆ ಹೊತ್ತಿಗೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಫಘಾತ ತಾಯಿಫ್ ನಿಂದ ಸುಮಾರು 160 ಕಿಲೋ ಮೀಟರ್ ದೂರಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಯಿ ಯಿಂದ ಮಗಳನ್ನು ಹತ್ಯೆ ಮಾಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

Image
  ಹೈದರಾಬಾದ್:- ಮಗಳು ಮನೆಯಲ್ಲಿ ತನ್ನ ಬಾಯ್‌ಫ್ರೆಂಡ್‌ ಜೊತೆ ಇರುವುದನ್ನು ಕಂಡು ಕೋಪಗೊಂಡ ತಾಯಿ, ಮಗಳನ್ನು ಹತ್ಯೆ ಮಾಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ತಾಯಿಯಿಂದ ಹತ್ಯೆಯಾದ ಮಗಳನ್ನು 19 ವರ್ಷದ ಭಾರ್ಗವಿ ಎಂದು ಹೇಳಲಾಗುತ್ತಿದೆ. ಇಬ್ರಾಹಿಂಪಟ್ಟಣದ ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಗಳು ಭಾರ್ಗವಿ ತನ್ನ ಪ್ರಿಯಕರನೊಂದಿಗೆ ಇರುವುದನ್ನು ಜಂಗಮ್ಮ ನೋಡಿದ್ದಾರೆ. ಇದರಿಂದ ಕೋಪಗೊಂಡು ತಾಯಿ ಕತ್ತು ಹಿಸುಕಿ ಮಗಳ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಜಂಗಮ್ಮ ಕೆಲಸ ಮುಗಿಸಿ ಮನೆಗೆ ಊಟಕ್ಕೆ ಬಂದಿದ್ದರು. ಈ ವೇಳೆ ಅವರ ಪುತ್ರಿ ಭಾರ್ಗವಿ ತನ್ನ ಪ್ರಿಯಕರನ ಜೊತೆಯಲ್ಲಿದ್ದಳು. ಮಗಳ ಪ್ರಿಯಕರ ನನ್ನು ಬೈದು ಮನೆಯಿಂದ ಹೊರಗೆ ಕಳುಹಿಸಿದ್ದಾಳೆ. ನಂತರ ಮಗಳ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಕೊಲೆಯಾದ ಯುವತಿಯ ಅಪ್ರಾಪ್ತ ಸಹೋದರ, ತಾನು ಕೊಲೆಯನ್ನು ನೋಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ತನ್ನ ತಾಯಿಯ ವಿರುದ್ಧ ದೂರು ದಾಖಲಿಸಿದ್ದಾನೆ. ತಾಯಿ ತನ್ನ ಸಹೋದರಿಯ ಮೇಲೆ ಹಲ್ಲೆ ಮಾಡುವುದನ್ನು ಕಿಟಕಿಯಿಂದ ನೋಡಿದ್ದಾನೆ ಎಂದು ಇಬ್ರಾಹಿಂಪಟ್ಟಣಂ ಪೊಲೀಸ್ ಅಧಿಕಾರಿ ಸತ್ಯನಾರಾಯಣ ತಿಳಿಸಿದ್ದಾರೆ.

ರಿಯಾದ್:- ಅಕ್ರಮ ಟ್ಯಾಕ್ಸಿ ಸೇವೆ, ಐದು ಸಾವಿರ ರಿಯಾಲ್ ದಂಡ ಅಥವಾ ಗಡಿಪಾರು ಚುರುಕಾದತಪಾಸಣೆ,,,

Image
  ರಿಯಾದ್:- ಅಕ್ರಮ ಟ್ಯಾಕ್ಸಿ ಸೇವೆ, ಐದು ಸಾವಿರ ರಿಯಾಲ್   ದಂಡ ಅಥವಾ ಗಡಿಪಾರು,,,,ಚುರುಕಾದ ತಪಾಸಣೆ, ರಿಯಾದ್: ಸ್ವಂತ ಟ್ಯಾಕ್ಸಿ ಸೇವೆಗಳನ್ನು ನಿರ್ವಹಿಸುವ ವಿದೇಶಿಯರಿಗೆ ಸೌದಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅಕ್ರಮ ಟ್ಯಾಕ್ಸಿಗಳು ವಿಮಾನ ನಿಲ್ದಾಣಗಳಿಂದ ಪ್ರಯಾಣಿಕರನ್ನು ಕರೆದುಕೊಂಡು ಹೋಗಬಾರದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ ಅಕ್ರಮವಾಗಿ ಪ್ರಯಾಣಿಕರನ್ನು ಸಾಗಿಸುವ ವಾಹನಗಳಿಗೆ 5,000 ರಿಯಾಲ್ ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕ ಸಾರಿಗೆ ಪ್ರಾಧಿಕಾರ ಪ್ರಕಟಿಸಿದೆ. ಟ್ಯಾಕ್ಸಿ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುವ ಎಲ್ಲಾ ವಾಹನಗಳಿಗೆ ಇದು ಅನ್ವಯಿಸುತ್ತದೆ. ಈ ಕ್ರಮವು ಪ್ರಯಾಣಿಕರ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಾತ್ರಿಪಡಿಸುವ ಭಾಗವಾಗಿದೆ. ಸ್ವಂತ ಆನ್‌ಲೈನ್ ಟ್ಯಾಕ್ಸಿ ಸೇವೆಗಳನ್ನು ನಡೆಸುತ್ತಿರುವ ವಿದೇಶಿಯರ ವಿರುದ್ಧ ಶಿಕ್ಷಾರ್ಹ ಕ್ರಮ ಕೈಗೊಳ್ಳುವುದಾಗಿ ಸಾರ್ವಜನಿಕ ಸಾರಿಗೆ ಇಲಾಖೆ ತಿಳಿಸಿದೆ.  ಅಕ್ರಮ ಟ್ಯಾಕ್ಸಿ ಕಾರ್ಯನಿರ್ವಹಿಸುವ ವಾಹನಗಳು ಅನುಮೋದಿತ ಟ್ಯಾಕ್ಸಿ ಕಂಪನಿಗಳಿಗೆ ಸೇರಬೇಕು ಮತ್ತು ಅನೇಕ ಸವಲತ್ತುಗಳು ಲಭ್ಯವಿದೆ ಎಂದು ಪ್ರಾಧಿಕಾರವು ಮಾಹಿತಿ ನೀಡಿದೆ. ವಿಮಾನ ನಿಲ್ದಾಣದ ಹಿಡುವಳಿ ಕಂಪನಿಯು "ಅನಧಿಕೃತ ವ್ಯಕ್ತಿಯೊಂದಿಗೆ ಪ್ರಯಾಣಿಸಬೇಡಿ" ಎಂಬ ಶೀರ್ಷಿಕೆಯ ಜಂಟಿ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನವು ಗೃಹ ಸಚಿವಾಲಯ, ಯಾ...

ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್ ಮುಜಾಲಸ ಕಾರ್ಯಕ್ರಮ 2024,

Image
  ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್ ಮುಜಾಲಸ ಕಾರ್ಯಕ್ರಮ 2024 , ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಕುವೈಟ್ ರಾಷ್ಟ್ರೀಯ ಸಂಘಟನಾ ವಿಭಾಗದ ವತಿಯಿಂದ ದಿನಾಂಕ 29 ರ ಫೆಬ್ರವರಿ 8 pm ಗಂಟೆಗೆ ಮುಜಾಲಸ ಕಾರ್ಯಕ್ರಮವು KCF ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ,ಕಾರ್ಯಕ್ರಮವನ್ನು ಸಂಘಟನಾ ಅಧ್ಯಕ್ಷ ಬಹು ಉಮಾರ್ ಝಹ್ರಿ ಉದ್ಘಾಟಿಸಿದರು,  KCF ಪ್ರಧಾನ ಕಾರ್ಯದರ್ಶಿ ಯಾಕೂಬ್ ಕಾರ್ಕಳ ಸ್ವಾಗತಿಸಿದರು, ಬಹುಮಾನ್ಯ ಪೆರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮಾತನಾಡಿ ಅನಿವಾಸಿಗರ ಕೊಡುಗೆ ಅಪಾರವಾದದು ಮತ್ತು KCF, ICF, RSC,ಸಂಘಟನೆಗಳು ಬೇರೆ ಬೇರೆ ಆದರೂ ಉದ್ದೇಶ, ಕಾರ್ಯವೈಕರಿ ಒಂದೇ ಎಂದರು,  ವೇದಿಕೆಯಲ್ಲಿ ಬಹು ಅಬ್ದುಲ್ ರಹ್ಮಾನ್ ಸಖಾಫಿ, ಸಯ್ಯದ್ ಸ್ವಾದಿಕ್ ತಂಗಳ್,ಅಬುಲ್ಲಾ ವಡಗರ, ಸಾಹುಲ್ ಹಮೀದ್ ಸಹದಿ, ಬಹು ಅಬೂಬಕ್ಕರ್ ಬಾಖಾವಿ, ಉಪಸ್ಥಿತರಿದ್ದರು, ಮಹಬುಲ ಸೆಕ್ಟರ್ ನ ಮಾಸಿಕ ಸ್ವಲಾತ್ಪ್ ಮಜ್ಲಿಸ್ ನಡೆಯಿತು,ಹಾಗೂ ಕುವೈಟ್ ನಲ್ಲಿ ಗಲ್ಫ್ ಇಶಾರವನ್ನು ಬಹುಮಾನ್ಯ ಪೆರೋಡ್ ಉಸ್ತಾದ್ ಅವರು ಬಿಡುಗಡೆ ಮಾಡುವ ಮೂಲಕ ಎಲ್ಲಾ ಸದಸ್ಯರು ಪಡೆದುಕೊಳ್ಳಬೇಕು ಎಂದು, ಮತ್ತು KCF IC ಡಿಸೇನಿಯಂ ಕಾರ್ಯಕ್ರಮ ಮಂಗಳೂರುನಲ್ಲಿದ್ದು ಎಲ್ಲರೂ ಕಾರ್ಯಕ್ರಮವನ್ನು ವಿಜಯ ಗೊಳಿಸಬೇಕೆಂದು ವಿನಂತಿಸಿದರು ಜನಾಬ್ ಸಮೀರ್ KC Road ಧನ್ಯವಾದಗೈದರು ವರದಿ :ಇಬ್ರಾಹಿಂ ವೇಣೂರ್ ಪಬ್ಲ...