Posts

Showing posts from June, 2024

ಗ್ರಾಮ ಪಂಚಾಯತ್ ಗಳಲ್ಲಿ ಜನನ ಮತ್ತು ಮರಣ ನೋಂದಣಿ,

Image
  ಇನ್ನು ಮುಂದೆ ಗ್ರಾಮ ಪಂಚಾಯತ್ ಗಳಲ್ಲಿ ಜನನ ಮತ್ತು ಮರಣ ನೋಂದಣಿ, ಗ್ರಾಮೀಣ ಪ್ರದೇಶದ ಜನರಿಗೆ  ಗ್ರಾಮೀಣಾಭಿವೃದ್ಧಿಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಶುಭ ಸುದ್ದಿ ನೀಡಿದ್ದಾರೆ,  ಇದೀಗ ಜನನ -ಮರಣ ದ ಪ್ರಕ್ರಿಯೆ ಗಳನ್ನು ಗ್ರಾಮಪಂಚಾಯತ್ ಗಳಲ್ಲಿ ಕಲ್ಪಿಸಿದ್ದು ಇದಕ್ಕಾಗಿ ಗ್ರಾಮಪಂಚಾಯಿತಿ ಕಾರ್ಯದರ್ಶಿ ಗಳನ್ನು ಜನನ ಮರಣ ನೊಂದನಾಣಾಧಿಕಾರಿಗಳನ್ನಾಗಿ ನೇಮಕ ಮಾಡ ಲಾಗಿದೆ. ಈ ಪ್ರಕ್ರಿಯೆ ಜುಲೈ 1ರಿಂದ ಜಾರಿಗೆ ಬರುವಂತೆ ಗ್ರಾಮ ಪಂಚಾಯತಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ವರದಿ:- ಶಬ್ಬೀರ್ ಅಹ್ಮದ್ hhಪುರ
Image
 ತೀರ್ಥಹಳ್ಳಿ:-ಕೋಣಂದೂರು ಪಟ್ಟಣದ ಸಂತೆ ಮಾರ್ಕೇಟ್ ಮುಂಭಾಗದಲ್ಲಿರುವ ಟ್ರಾನ್ಸಾಫಾರ್ಮ್ ಆಗಾಗ ಶಾರ್ಟ್ ಸರ್ಕ್ಯೂಟ್ ಆಗುತ್ತಿದ್ದೂ 24ನೇ ತಾರೀಖು ಸೋಮವಾರ ಮಧ್ಯಾಹ್ನ 2ರಿಂದ 3ಘಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಸುತ್ತ ಮುತ್ತಲಿನ ಅಂಗಡಿ, ಕಚೇರಿಯ ಲ್ಯಾಪ್ ಟಾಪ್, ಹೊಲಿಗೆ ಯಂತ್ರದ ಮಿಷನ್, ಫ್ಯಾನ್ ಗಳು, ಚಾರ್ಜರ್ ಇತ್ಯಾದಿಗಳು ಸುಟ್ಟು ಹೋಗಿ ನಮಗೆಲ್ಲ ನಷ್ಟ ಉಂಟಾಗಿದೆ ಎಂದು ತಮ್ಮ ಸಂಕಟವನ್ನು ಹೇಳಿ ಕೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಇದೇ ರೀತಿಯಾದರೆ ನಮ್ಮ ನಷ್ಟಕ್ಕೆ ಸಂಭಂದ ಪಟ್ಟ ಅಧಿಕಾರಿಗಳೇ ಹೊಣೆಗಾರರು ಎಂದು ಸಾರ್ವಜನಿಕರು ಹೇಳಿದ್ದಾರೆ, ವರದಿ:- ಶಬ್ಬೀರ್ ಅಹ್ಮದ್,hh ಪುರ

ಶೃಂಗೇರಿ :‐ ಮಹಿಳೆ ಆತ್ಮಹತ್ಯೆ,

Image
  ಶೃಂಗೇರಿ :‐ ಮಹಿಳೆ ಆತ್ಮಹತ್ಯೆ, ತಾಲ್ಲೂಕಿನ ನೆಮ್ಮಾರ್ ಸಮೀಪ ಯಾದಾಳು ಗ್ರಾಮದ ದಿಲೀಪ ಅವರ ಪತ್ನಿ ಶಾಲಿನಿ(39)  ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.   ಕೊಪ್ಪ ತಾಲ್ಲೂಕಿನ ಮೇಲ್ಪಾಲ್ ಗ್ರಾಮ ಇವರ ತವರುಮನೆ ಯಾಗಿದ್ದು ಮದುವೆ ಯಾಗಿ ಒಂದು ವರ್ಷ ಮಾತ್ರ ಕಳೆದಿದ್ದು, ಇವರಿಗೆ ಮಕ್ಕಳು ಇರಲಿಲ್ಲ ಇವರು ಹತ್ತು ವರ್ಷಗಳಿಂದ ಮಾನಸಿಕ ಅಸ್ವಸ್ತೇ ಯಿಂದ ಬಳಲುತ್ತಿದ್ದೂ ತೀರ್ಥಹಳ್ಳಿ ಮಾನಸ ಆಸ್ಪತ್ರೆ ಯಲ್ಲಿ ಔಷದಿ ಮಾಡುತ್ತಿದ್ದರು ಇದರಿಂದ ನೊಂದು ಬೇಸರ ಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದಿದೆ... ಶೃಂಗೇರಿ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿದೆ. ವರದಿ:- ಶಬ್ಬೀರ್ ಅಹ್ಮದ್ hh ಪುರ

ಕೊಪ್ಪ:-ಬೆಚ್ಚಿ ಬೀಳಿಸುವ ಕಳ್ಳರ ಕಾಟ,

Image
  ಕೊಪ್ಪ:-ಬೆಚ್ಚಿ ಬೀಳಿಸುವ ಕಳ್ಳರ ಕಾಟ,  ಕೊಪ್ಪ:- ಹರಿಹರಪುರ ಠಾಣಾ ವ್ಯಾಪ್ತಿಯ ನಿಲುವಾಗಿಲು ಗ್ರಾಮಪಂಚಾಯಿತಿಗೆ ಒಳಪಟ್ಟ ಕಾಳನಾಯಕನಕಟ್ಟೆ ಎಂಬಲ್ಲಿ ಒಂದೇ ವಾರದಲ್ಲಿ ಎರಡು ಬಾರಿ ಕಳ್ಳತನ ನಡೆದಿದ್ದು, ಒಂದು ವಾರದ ಹಿಂದೆಯೇ ನಾಲಕ್ಕು ಮನೆಗಳಿಗೆ ನುಗ್ಗಿ ಸರಣಿ ಕಳ್ಳತನ ನಡೆಸಿ , ಓಮಿನಿ ಕಾರು, ಸೈಕಲ್, ರಿಕ್ಷಾ ಬ್ಯಾಟರಿ ಗಳನ್ನು ಕದ್ದಿದ್ದು, ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ,ಆರು ದಿನ ಕಳೆಯುವಷ್ಟರಲ್ಲಿ ಮತ್ತೊಮ್ಮೆ ಕಳ್ಳತನ, ತೀರಾ ಬಡತನ ಹಾಗೂ ಸಾಲದ ಸಂಕಷ್ಟ ದಲ್ಲಿದ್ದ ಗುಲಾಮಹುಸೇನ್ w/o ನಸೀಮಬಾನು ಇವರ ಮನೆಗೆ ಎರಡನೇ ಬಾರಿ ನುಗ್ಗಿದ ಕಳ್ಳರು ಅವರ ಮನೆಯಲ್ಲಿದ್ದ ದಿನನಿತ್ಯ ಉಪಯೋಗಿಸುವ ಬಟ್ಟೆ, ಪಾತ್ರೆ, ಫ್ಯಾನ್, ಮಂಚ ಇತ್ಯಾದಿ ಗಳನ್ನು ಸಂಪೂರ್ಣ ವಾಗಿ ದೋಚಿಪರಾರಿ ಯಾಗಿದ್ದಾರೆ, ಹರಿಹರಪುರ ಠಾಣಾ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದೆ, ಎರಡನೇ ಬಾರಿ ಕಳ್ಳತನ ಕ್ಕೆ ಪೋಲೀಸರ ನಿರ್ಲಕ್ಷವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ, ಈ ಪ್ರಕರಣವನ್ನು ಹರಿಹರಪುರ ಪೊಲೀಸ್ ಅಧಿಕಾರಿಗಳು ಎಷ್ಟರ ಮಟ್ಟಿಗೆ ಭೇದಿಸುತ್ತಾರೆಂದು ಕಾದು ನೋಡಬೇಕಾಗಿದೆ, ವರದಿ:- ಶಬ್ಬೀರ್ ಅಹ್ಮದ್ hh ಪುರ

ಮಂಗಳೂರು:-ಗೋಡೆ ಕುಸಿದು ಮಕ್ಕಳು ಸಹಿತ ನಾಲ್ವರು ಮೃತ್ಯು,

Image
  ಮಂಗಳೂರು: ಗೋಡೆ ಕುಸಿದು ಮಕ್ಕಳು ಸಹಿತ ನಾಲ್ವರು ಮೃತ್ಯು ಮಂಗಳೂರು:- ಮನೆ ಮೇಲೆ ಸಮೀಪದ ಮನೆಯ ಗೋಡೆ ಕುಸಿದ ಪರಿಣಾಮ ನಾಲ್ವರು ಮೃತಪಟ್ಟ  ಘಟನೆ ಮುನ್ನೂರು ಗ್ರಾಮದ ಕುತ್ತಾರಿನ ಮದನಿ ನಗರ ಎಂಬಲ್ಲಿ  ಸಂಭವಿಸಿದೆ. ಮೃತರನ್ನು ಮದನಿ ನಗರದ ನಿವಾಸಿಗಳಾದ ಯಾಸೀರ್(45) ಮತ್ತವರ ಪತ್ನಿ ಮರಿಯಮ್ಮ(40) ಹಾಗೂ ಇಬ್ಬರು ಮಕ್ಕಳಾದ ರಿಯಾನಾ ಮತ್ತು ರಿಫಾನ ಸಾವನ್ನಪ್ಪಿದ್ದಾರೆ. ವರದಿ:-ಶಬ್ಬೀರ್ ಅಹ್ಮದ್

ತೀರ್ಥಹಳ್ಳಿ:- ನೆರಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೂರು ಸೋಲಾರ್ ಲೈಟ್ ಗಳ ಕಳ್ಳತನ,

Image
  ತೀರ್ಥಹಳ್ಳಿ:- ನೆರಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೂರು ಸೋಲಾರ್ ಲೈಟ್ ಗಳ ಕಳ್ಳತನ,      ತೀರ್ಥಹಳ್ಳಿ : ನೆರಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉರುಡುಗ ರಸ್ತೆ. ಸರಳ ರಸ್ತೆ,ಹಾಗೂ ಶಿರುಪತಿ ಹೋಗುವ ರಸ್ತೆ ಸಮೀಪ ಸಾರ್ವಜನಿಕರ ಅನುಕೂಲಕ್ಕಾಗಿ ಅಳವಡಿಸಿರುವ ಮೂರು ಸೋಲಾರ್ ಲೈಟ್ ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಳೆದ ಎರಡು ತಿಂಗಳಿಂದ ಸತತ ಲೈಟ್ಸ್ ಗಳ ಕಳ್ಳತನವಾಗುತ್ತಿದ್ದು ಒಂದೊಂದು ಸೋಲಾರ್ ಲೈಟಿನ ಬೆಲೆ ತಲಾ 9 ಸಾವಿರದಂತೆ ಮೂರು ಲೈಟ್ಸ್ ಗಳ ಬೆಲೆ 27 ಸಾವಿರ ರೂಗಳ ಮೌಲ್ಯದ್ದಾಗಿರುತ್ತದೆ. ಈ ಸಂಬಂಧ ನೆರಟೂರು ಪಂಚಾಯ್ತಿಯವರು ತೀರ್ಥಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ. ವರದಿ:-ಶಬ್ಬೀರ್ ಅಹ್ಮದ್,hh ಪುರ

ಕಡಬ, ಪಿಲ್ಯ ಪ್ಯಾಶನ್ ನಲ್ಲಿ ಬಕ್ರಿದ್ ಮೆಗಾ ಆಫರ್

Image
  ಇಂದಿನಿಂದ ಕಡಬ ಪಿಲ್ಯ ಪ್ಯಾಶನ್ ನಲ್ಲಿ  ಬಕ್ರಿದ್ ಮೆಗಾ ಆಫರ್ ◼️ಹೊಸ  ಸಂಗ್ರಹಗಳೊಂದಿಗೆ ◼️ಮಹಿಳೆಯರ ಪುರುಷರ ಮತ್ತು ಮಕ್ಕಳ ವಸ್ತ್ರಗಳು ಒಂದೇ ಸೂರಿನಲ್ಲಿ ◼️ಜೂನ್ 9 ರಿಂದ 20ರ ತನಕ ವಿಶೇಷ ರಿಯಾಯಿತಿ ◼️ಬೇಟಿ ನೀಡಿ ಬಹುಮಾನ ಗೆಲ್ಲಿ!! ಕಡಬ: ಉತ್ತಮ ಗುಣಮಟ್ಟದ ಮಹಿಳೆಯರ ಪುರುಷರ ಮತ್ತು ಮಕ್ಕಳ ವಸ್ತ್ರಗಳಿಗೆ ಹೆಸರಾಂತ ಕಡಬದ ಪಿಲ್ಯ ಪ್ಯಾಶನ್ ನಲ್ಲಿ ಇಂದಿನಿಂದ ಜೂನ್ 20ರ ಬಕ್ರೀದ್ ಹಬ್ಬದ ಪ್ರಯುಕ್ತ ಹೊಸ ಸಂಗ್ರಹ ಗಳೊಂದಿಗೆ ವಿಶೇಷ ಆಫರ್ ನಡೆಯಲಿದೆ. ವಿಶೇಷವಾಗಿ ಮೊಡಲ್ ಡ್ರೆಸ್ ಗಳು ಎಲ್ಲರನ್ನು ಆಕರ್ಷಿಸುವಂತಿದೆ, ಮಹಿಳೆಯರ ಮಕ್ಕಳ ಕೋಡ್ ಡ್ರೆಸ್, ನೈರಾ ಕಟ್, ಪ್ರೇಮಾಲು, ಶರಾರ, ಸಿಂಗಾರ್, ಬ್ಯಾಗಿ ಪ್ಯಾಂಟ್, ಸಹಿತ ಮೊದಲಾದ ಮಕ್ಕಳ ಮಹಿಳೆಯರ ವಿನೂತ ವಸ್ತ್ರಗಳ ಮೇಲೆ ವಿಶೇಷ ರಿಯಾಯಿತಿ ನಡೆಯಲಿದೆ. ಪುರುಷರ 3 ಜೊತೆ ಬ್ರಾಂಡ್ ಶರ್ಟ್ 999/- ಆಫರ್ ನಡೆಯಲಿದೆ. ಡ್ರೆಸ್ ಮೆಟೀಯಲ್ ಗಳ ಮೇಲೆ 30% ತನಕ ವಿಶೇಷ ರಿಯಾಯಿತಿ ದೊರೆಯಲಿದೆ. ಬಕ್ರಿದ್ ಪ್ರಯುಕ್ತ ವಿಶೇಷವಾಗಿ ಮಳಿಗೆಯ ಗೆ ಬೇಟಿ ನೀಡಿದ ಗ್ರಾಹಕರಿಗೆ ಬಹುಮಾನ ಗೆಲ್ಲುವ ವಿಶೇಷ ಅವಕಾಶ ನೀಡಿದೆ. ಈ ಆಫರ್ ಜೂನ್ 30ರ ತನಕ ನಡೆಯಲಿದೆ.