ಕೊಪ್ಪ,ಅಕ್ರಮವಾಗಿ ಜಾನುವಾರು ಸಾಗಾಟ ಆರೋಪ: ಇಬ್ಬರ ವಶ, ವಾಹನ ಜಪ್ತಿ,
ಅಕ್ರಮವಾಗಿ ಜಾನುವಾರು ಸಾಗಾಟ ಆರೋಪ: ಇಬ್ಬರ ವಶ, ವಾಹನ ಜಪ್ತಿ,
ಕೊಪ್ಪ, ಆ.10: ಯಾವುದೇ ಪರವಾನಗಿ ಹಾಗೂ ಅಗತ್ಯ ದಾಖಲೆಗಳಿಲ್ಲದೆ ನಾಲ್ಕು ದನಗಳನ್ನು ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರನ್ನು ಕೊಪ್ಪ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಶೃಂಗೇರಿಯ ಉಮೇಶ್ ಎಂಬುವರಿಂದ ನಾಲ್ಕು ದನಗಳನ್ನು ವ್ಯಾಪಾರ ಮಾಡಿಕೊಂಡು, ಯಾವುದೇ ಪರವಾನಗಿ ಅಥವಾ ಸೂಕ್ತ ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಎನ್.ಆರ್.ಪುರ ತಾಲ್ಲೂಕಿನ ಶೆಟ್ಟಿಕೊಪ್ಪ ನಿವಾಸಿಗಳಾದ ಬದ್ರುದ್ದೀನ್ ಹಾಗೂ ಹನೀಪ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ದನಗಳನ್ನು ಸಾಗಾಟಕ್ಕೆ ಬಳಸಲಾಗುತ್ತಿದ್ದ ಸುಜುಕಿ ಸೂಪರ್ ಕ್ಯಾರಿ ವಾಹನ (KA-36 C-0100) ಅನ್ನು ಸಹ ಕೊಪ್ಪ ಪೊಲೀಸರು ವಶಕ್ಕೆ ಪಡೆದು ಜಪ್ತಿ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
🖋️ ರೆಹಮಾನ್ ಸಣ್ಣಕೇರೆ
ವಾರ್ತಾ ಸಾರಥಿ ಡಿಜಿಟಲ್ ನ್ಯೂಸ್


Comments
Post a Comment