Posts

AIFWA2025-2028 ರ ಸಾಲಿಗೆ ನೂತನ ಸಾರಥಿಗಳು,

Image
  AIFWA2025-2028 ರ ಸಾಲಿಗೆ ನೂತನ ಸಾರಥಿಗಳು, ಅಬೂಬಕ್ಕರ್ ಐಸಮ್ಮ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಸನ್) ಇದರ ಮಹಾಸಭೆಯು ದಿ:-13/07/2025 ರವಿವಾರ ಸಮಯ ಬೆಳಿಗ್ಗೆ 11:30ಕ್ಕೆ ಪೆರಿಂಜೆ ಗಾಣದಕೊಟ್ಟಿಗೆ ತರವಾಡ್ ಮನೆಯಲ್ಲಿ ಸಭೆಯ ಅದ್ಯಕ್ಷರಾದ ಕೆ ಮಹಮ್ಮದ್ ಕುಪ್ಪೆಟ್ಟಿ ಇವರ ಅದ್ಯಕ್ಷತೆಯಲ್ಲಿ ನಡೆಯಿತು ಮೊದಲಿಗೆ ಮೌಲೂದ್ ಪಾರಾಯಣ ಮಾಡಿ ನಂತರ ಬಹು! ಶರಫುದ್ದೀನ್ ತಂಘಳ್ ರವರ ದುಆ ದೊಂದಿಗೆ ಸಭೆಯನ್ನು ಉದ್ಘಾಟನೆ ಮಾಡಿದರು ಜ! ಖಾಲಿದ್ ಕಾಶಿಪಟ್ಣ ಎಲ್ಲರನ್ನು ಸ್ವಾಗತಿಸಿದರು ನಮ್ಮ ಫ್ಯಾಮಿಲಿಯ ಪರಿಚಯವನ್ನು ಅಬೂಬಕ್ಕರ್ ಸಿದ್ದೀಕ್(ಅಬ್ಬಾಸ್ ಅಂಬಿಯಾ ಆಲ್ದೂರು)ಇವರು ನೆರವೇರಿಸಿದರು ಹಾಗೂ ಮುಂದಿನ ನಮ್ಮ ಫ್ಯಾಮಿಲಿ ಭವಿಷ್ಯಕ್ಕಾಗಿ ಬೈಲಾವನ್ನು ಬಹಳ ಅಚ್ಚುಕಟ್ಟಾಗಿ ರಚಿಸಿ ಸಭೆಯಲ್ಲಿ ಮಂಡಿಸಿದರು ಬಹಳ ಚರ್ಚೆಯ ನಂತರ ಅದಕ್ಕೆ ಅನುಮೋದನೆಯನ್ನು ಪಡೆಯಲಾಯಿತು ಹಾಗೂ ಸೇರಿರುವ ಎಲ್ಲಾ ಸದಸ್ಯರ ಒಪ್ಪಿಗೆಯೊಂದಿಗೆ ಫ್ಯಾಮಿಲಿ ಗೆ AIFWA ಎಂಬ ಒಂದು ಒಳ್ಳೆಯ ಹೆಸರನ್ನು ನಾಮಕರಣ ಮಾಡಲಾಯಿತು ನಂತರ ಸಭಾಧ್ಯಕ್ಷರ ಸೂಚನೆಯ ಮೇರೆಗೆ ನಮ್ಮ ಫ್ಯಾಮಿಲಿಗೆ 9 ಕ್ಯಾಬಿನೆಟ್ ಹಾಗೂ 23ಕಾರ್ಯಕಾರಿ ಸಮಿತಿ ಸದಸ್ಯರ ಹೊಸ ಸಮಿತಿಯೊಂದನ್ನು ರಚಿಸಲಾಯಿತು ಹಾಗೂ ಸಂಘದ ಕಾರ್ಯಕ್ರಮಗಳು ಉತ್ತಮವಾಗಿ ನಡೆಯಲು ಕೆಲವು ಉಪ ಸಮಿತಿಗಳನ್ನು ರಚನೆ ಮಾಡುವುದೆಂದು ತೀರ್ಮಾನಿಸಲಾಯಿತು ಇನ್ನು ಮುಂದೆ ಸಂಘದ ಎಲ್ಲಾ ಕಾರ್ಯಕ್ರಮಗಳು ಮಹಾಸಭೆಯ ದಿನ ಅಂಗೀಕರಿಸಿದ ಬೈಲಾ(BY L...

ಕೊಪ್ಪ:- ನ್ಯಾಯಕ್ಕಾಗಿ ಕೊಪ್ಪ ದಲ್ಲಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ,

Image
 ಶಮಿತಾ ಸಾವಿನ ನ್ಯಾಯಕ್ಕಾಗಿ ಹೋರಾಟ,  ಕೊಪ್ಪ:- ನ್ಯಾಯಕ್ಕಾಗಿ ಕೊಪ್ಪ ದಲ್ಲಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ,  ರಾಜ್ಯದ ಗಮನ ಸೆಳೆದಿರುವ ಕೊಪ್ಪ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿ ಶಮಿತಾ ಸಾವು ಪ್ರಕರಣ ಇದೀಗ ಹೋರಾಟದ ಹಾದಿ ಹಿಡಿದಿದೆ. ಸೋಮವಾರ ಕೊಪ್ಪದಲ್ಲಿ ಭಾರೀ ಹೋರಾಟ ನಡೆಯಲಿದೆ. ಜೂ.28ರಂದು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅನುಮಾನಸ್ಪದವಾಗಿ ಸಾವಿಗೀಡಾಗಿರುತ್ತಾಳೆ, ಈ ಬಗ್ಗೆ ಸೂಕ್ತ ತನಿಖೆಯನ್ನು ಕೈಗೊಳ್ಳಬೇಕು ಹಾಗೂ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರನ್ನು ತನಿಖೆಗೆ ಒಳಪಡಿಸಲು ಅಗ್ರಹಿಸಿ ಪ್ರಗತಿಪರ ಸಂಘಟನೆಗಳೊಂದಿಗೆ ದಿನಾಂಕ:07:07:2025ರಂದು ಬೆಳ್ಳಿಗೆ 10 ಗಂಟೆಯಿಂದ ಎರಡು ಗಂಟೆವರೆಗೆ ಟೌನ್ ಹಾಲಿನಿಂದ ಬಸ್ ನಿಲ್ದಾಣ ಹೊರಗೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.  ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಕೊಪ್ಪ ಪೊಲೀಸರು, ಶಮಿತಾ ಸಾವಿಗೆ ನ್ಯಾಯ ಬೇಕು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಳಲ್ಲ. ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ವರದಿ:- ಮಜೀದ್ ಸಣ್ಣಕೆರೆ

ಕೊಪ್ಪಳ, ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ವಿರೋಧಿಸಿ ಮಸೀದಿಗಳ ಮುಂದೆ ಮೌನ ಪ್ರತಿಭಟನೆ.

Image
ಕೊಪ್ಪಳ,  ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ವಿರೋಧಿಸಿ ಮಸೀದಿಗಳ ಮುಂದೆ ಮೌನ ಪ್ರತಿಭಟನೆ. ಕೊಪ್ಪಳ : ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಕರೆ ಹಿನ್ನೆಲೆ ನಗರದಲ್ಲಿ ಶುಕ್ರವಾರದ ವಿಶೇಷ ಪ್ರಾರ್ಥನೆ ಬಳಿಕ ಮಸೀದಿಗಳ ಮುಂದೆ ಮಾನವ ಸರಪಳಿ ಮಾಡಿ ಮೌನ ಪ್ರತಿಭಟನೆ ವ್ಯಕ್ತಪಡಿಸಿದರು.     ಕುಷ್ಟಗಿ ರಸ್ತೆಯಲ್ಲಿರುವ ಖೂಬಾ ಮಸೀದಿಯ ಮುಂದೆ ಮಾನವ ಸರಪಳಿ ಮಾಡಿ ಮೌನ ಪ್ರತಿಭಟನೆ ಮಾಡಿದ ಬಳಿಕ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್ ಮಾತನಾಡಿ ಯಾರೂ ಬೇಡಿಕೆ ಇಡದೆ ಇದ್ದಂತಹ ವಕ್ಫ್ ಮಂಡಳಿಯ ನಿಯಮಗಳನ್ನು ಬದಲಾಯಿಸಲಾಗಿದೆ. ಸರ್ಕಾರ ಯಾರ ಪಿತೂರಿಗೆ ಈ ನಿಯಮಗಳು ಬದಲಾಯಿಸಿ ಇಸ್ಲಾಂ ಧರ್ಮಕ್ಕೆ ತದ್ವಿರುದ್ಧವಾಗಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದಲ್ಲದೆ. ಧರ್ಮ ನಿರಪೇಕ್ಷ.ಸಮಾಜವಾದಿ. ಜಾತ್ಯತೀತ ಎಂಬ ಪದವನ್ನು ಸಂವಿಧಾನದ ಪೀಠಿಕೆಯಿಂದ ತೆಗೆಯುವ ಹೇಳಿಕೆಗಳನ್ನು ನೋಡಿದರೆ ಸಂವಿಧಾನವನ್ನು ವಿರೋಪ ಗೊಳಿಸುವ ಪಿತೂರಿ ನಡೆಸಲಾಗುತ್ತಿದೆ. ಸವಿಧಾನವನ್ನು ನಿಷ್ಪ್ರಯೋಜಕ ಗೊಳಿಸುವ ಎಲ್ಲಾ ಕುತಂತ್ರಗಳು ನಡೆಯುತ್ತಿದೆ. ಸಂವಿಧಾನ ಉಳಿಸಿಕೊಳ್ಳುವ ಮತ್ತು ಹಳೆಯ ವಕ್ಫ್ ಮಂಡಳಿಯ ಕಾಯ್ದೆಗಳನ್ನು ಯಥಾ ಸ್ಥಿತಿಯಲ್ಲಿ ಮುಂದುವರಿಸಲು ಒತ್ತಾಯಸಿದರು.       ಖೂಬಾ ಮಸೀದಿಯ ಪೇಶ್ ಇಮಾಮ್ ಹಾಫಿಝ್ ಮೊಹಮ್ಮದ್ ಮುಜಾಹಿದ್ ಖಾಝಿ ರಝಾ. ಖೂಬಾ ಮಸೀದಿ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಬ್. ಉಪಾ...
Image
 ಕೊಪ್ಪ:-  ತಾಲೂಕಿನ ಹರಂದೂರು ಗ್ರಾಮದ ಸಣ್ಣಕೆರೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಗೆ ಹೊಸದಾಗಿ ದಾಖಲಾತಿಯಾದ ಮಕ್ಕಳಿಗೆ, ಬೆಂಗಳೂರಿನಲ್ಲಿ ವಾಸವಿರುವ ಗುರುರಾಜ್ ಎಂಬುವವರು  ತಲಾ ಮೂರು ಜೊತೆ ಸಮವಸ್ತ್ರ ಕೊಟ್ಟು ಮಾನವೀಯತೆ ಮೆರೆದಿದ್ದಾರೆ, ಫಾಝಿಲ್ ರಹ್ಮಮಾನ್,ಸಣ್ಣಕೆರೆ ಶಾಲೆಯ ವಿದ್ಯಾರ್ಥಿ,ವಿಡಿಯೋ ನೋಡಲು ಇಲ್ಲಿ ಒತ್ತಿ,  ಗುರುರಾಜ್ ರವರಿಗೆ ಸಣ್ಣಕೇರೆ ಶಾಲೆಯ   ಎಸ್ ಡಿ ಎಂ ಸಿ. ಅಧ್ಯಕ್ಷರು ಹಾಗು   ಸದ್ಯಸ್ಯರು ಶಾಲೆಯ ಶಿಕ್ಷಕರು ಗ್ರಾಮಸ್ಥರು. ಹಾಗೂ ಮಕ್ಕಳ ಪೋಷಕರು. ಅಭಿನಂದಿಸಿ ಧನ್ಯವಾದ ಸಲ್ಲಿಸಿದರು. ವರದಿ:- ಮಜೀದ್ ಸಣ್ಣಕೆರೆ

ಕೊಪ್ಪಳದ ಅಶೋಕ ವೃತ್ತದಲ್ಲಿ ದೇವನಹಳ್ಳಿ ಚಳುವಳಿನಿರತ ರೈತರ ಬಂಧನ ಖಂಡಿಸಿ ಪ್ರತಿಭಟನೆ.

Image
 ಕೊಪ್ಪಳದ ಅಶೋಕ ವೃತ್ತದಲ್ಲಿ ದೇವನಹಳ್ಳಿ ಚಳುವಳಿನಿರತ ರೈತರ ಬಂಧನ ಖಂಡಿಸಿ ಪ್ರತಿಭಟನೆ. ಕೊಪ್ಪಳ : ದೇವನಹಳ್ಳಿ ಚಳುವಳಿ ನಿರತ ರೈತರ ಬಂಧನ ಖಂಡಿಸಿ ಸಂಯುಕ್ತ ಹೋರಾಟ - ಕರ್ನಾಟಕ ಜಿಲ್ಲಾ ಮಂಡಳಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ  ಎಚ್ಚರಿಕೆ ನೀಡಿ ಬಂಧಿತ ರೈತರನ್ನು ಬಿಡುಗಡೆಗೆ ಆಗ್ರಹಿಸಿದರು.       ಕೊಪ್ಪಳ ಜಿಲ್ಲೆಯ ರೈತ ಪರ ಚಳವಳಿಗಾರರು ಮಾತನಾಡಿ ದೇವನಹಳ್ಳಿ ಸೇರಿದಂತೆ 13 ಗ್ರಾಮಗಳಲ್ಲಿನ ರೈತರು ಸರ್ಕಾರದ ಬಲವಂತದ ಭೂ ಸ್ವಾಧೀನ ರೈತ ವಿರೋಧಿ ನೀತಿಗಳನ್ನು ಪ್ರತಿಭಟಿಸಿ, ಸುಮಾರು 1180 ದಿನಗಳಿಂದ, ದೇವನಹಳ್ಳಿಯ ಸಂತೆ ಮೈದಾನದಲ್ಲಿ ಶಾಂತಿಯುತ ಚಳುವಳಿಯನ್ನು ನಡೆಸುತ್ತಿದ್ದರು. ಇಂಥದೊಂದು ದೀರ್ಘಾವಧಿಯ ರೈತ ಚಳುವಳಿ ನಡೆಯುತ್ತಿದ್ದರೂ, ಸರ್ಕಾರ ಮಾತ್ರ ಎನೂ ನಡೆಯುತ್ತಿಲ್ಲವೆಂಬಂತೆ ಜಾಣ ಕುರುಡುತನ ಪ್ರದರ್ಶಿಸಿತು. ಇದು ರೈತರ ತಾಳ್ಮೆಗೆಡಲು ಕಾರಣವಾಯಿತು. ಇದರಿಂದಾಗಿ ರೈತರ ಚಳುವಳಿಯು ತೀವ್ರತೆ ಪಡೆಯಿತು.          ಕೊಪ್ಪಳ ನಗರದಲ್ಲಿ 25. 06. 2025ರಂದು ದೇವನಹಳ್ಳಿಯ ರೈತ ಚಳುವಳಿಗೆ ಬೆಂಬಲಿಸಿದ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ ರಾಜ್ಯದ ವಿವಿಧ ಜಿಲ್ಲೆಗಳ ರೈತರು, ಕಾರ್ಮಿಕರು, ಜನಪರ ಸಂಘಟನೆಗಳ ಕಾರ್ಯಕರ್ತರು ದೇವನಹಳ್ಳಿ ಚಲೋ ಚಳುವಳಿಯ ಭಾಗವಾಗಿ ಅಲ್ಲಿ ಸಾವಿರ ಸಾವಿರ ಸಂಖ...

ಕೊಪ್ಪಳ: ಸರ್ವ ಧರ್ಮಗಳ ಸಾರ ಸೌಹಾರ್ದತೆ ಮತ್ತು ಮಾನವೀಯತೆಯಾಗಿದೆ ಎಂದು ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ರಾಜ್ಯಾಧ್ಯಕ್ಷ ಹಾಫಿಝ್ ಮೊಹಮ್ಮದ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಹೇಳಿದರು.

Image
  ಸರ್ವ ಧರ್ಮಗಳ ಸಾರ ಸೌಹಾರ್ದತೆ. ಮಾನವೀಯತೆಯಾಗಿದೆ - ಸುಫ್ಯಾನ್ ಸಖಾಫಿ ಅಲ್ ಹಿಕಮಿ.   ಕೊಪ್ಪಳ: ಸರ್ವ ಧರ್ಮಗಳ ಸಾರ ಸೌಹಾರ್ದತೆ ಮತ್ತು ಮಾನವೀಯತೆಯಾಗಿದೆ ಎಂದು ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ರಾಜ್ಯಾಧ್ಯಕ್ಷ ಹಾಫಿಝ್ ಮೊಹಮ್ಮದ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಹೇಳಿದರು.     ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ವತಿಯಿಂದ ರಾಜ್ಯಾದ್ಯಂತ ನಡೆಸುತ್ತಿರುವ 'ಸೌಹಾರ್ದ ನಡಿಗೆ' ಜಾಥಾ ಶುಕ್ರವಾರ ಕೊಪ್ಪಳ ನಗರಕ್ಕೆ ತಲುಪಿದ್ದು. ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿಯ ಕನಕ ದಾಸ ವೃತ್ತದಲ್ಲಿ ಸೌಹಾರ್ದ ನಡಿಗೆ ಕಾರ್ಯಕ್ರಮಕ್ಕೆ ಕೊಪ್ಪಳ ತಾಲೂಕಿನ ಬಿಸರಹಳ್ಳಿಯ  ಶ್ರೀ ಮರುಳಸಿದ್ದೇಶ್ವರ ಮಠ ಸುಕ್ಷೇತ್ರದ ಪರಪೂಜ್ಯ ಶ್ರೀ  ಮಳಿಯಯ್ಯ ಸ್ವಾಮಿಗಳು ಚಾಲನೆ ನೀಡಿದರು. ಅಶೋಕ ವೃತ್ತ ತಲುಪಿದ ಬಳಿಕ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ರಾಜ್ಯಾಧ್ಯಕ್ಷ ಹಾಫಿಝ್ ಮೊಹಮ್ಮದ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಮುಂದುವರೆದು ಮಾತನಾಡಿ ರಾಜ್ಯದ 20ಜಿಲ್ಲೆಗಳಲ್ಲಿ ನಡೆಯುತ್ತಿರುವ ಸೌಹಾರ್ದ ನಡಿಗೆ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖ ಸ್ವಾಮೀಜಿಗಳು.ಕ್ರೈಸ್ತ ಫಾದರ್‌ಗಳು.ಮುಸ್ಲಿಮ್ ಧರ್ಮ ಗುರುಗಳು ಹಾಗೂ ಇನ್ನಿತರ ಪ್ರಮುಖ ಜನಪರ ಸಂಘಟನೆಗಳ ಮುಖಂಡರು ಭಾಗವಹಿಸಿ ಬೆಂಬಲಿಸುತ್ತಿದ್ದಾರೆ.ಈ ಕರುನಾಡು ಭಾವೈಕ್ಯತೆಯ ಪರಂಪರೆಯುಳ್ಳ ನಾಡು. ಆದರೆ ಸ್ವಾರ್ಥ ರಾಜಕೀಯ...

ಕೊಪ್ಪಳದಲ್ಲಿ ಜೂನ್ 27 ಕ್ಕೆ ಮನುಷ್ಯ ಮನಸ್ಸುಗಳನ್ನು ಪೋಣಿಸುವ ಸೌಹಾರ್ದ ನಡಿಗೆ,

Image
  ಕೊಪ್ಪಳದಲ್ಲಿ ಜೂನ್ 27 ಕ್ಕೆ ಮನುಷ್ಯ ಮನಸ್ಸುಗಳನ್ನು ಪೋಣಿಸುವ ಸೌಹಾರ್ದ ನಡಿಗೆ,    ಕೊಪ್ಪಳ : ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ರಾಜ್ಯ ಸಮಿತಿ ಕರೆಯ ಮೇರೆಗೆ ಜೂನ್ 27 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಗರದ ಕೇಂದ್ರೀಯ ಬಸ್ ನಿಲ್ದಾಣ ಬಳಿಯ ಕನಕ ದಾಸ ವೃತ್ತ ದಿಂದ ಅಶೋಕ ವೃತ್ತದ ವರೆಗೆ ಸೌಹಾರ್ದ ನಡಿಗೆ ಕಾರ್ಯಕ್ರಮ ನಡೆಸಲು ವಿವಿಧ ಸಂಘಟನೆಗಳ ಮುಖಂಡರು ಪೂರ್ವ ಭಾವಿ ಸಭೆಯಲ್ಲಿ ತೀರ್ಮಾನಿಸಿದರು.       ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಎಸ್.ಎಸ್.ಎಫ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಸಿರ್ ಸಖಾಫಿ ಪ್ರಸ್ತಾವಿಕವಾಗಿ ಮಾತನಾಡಿ ದೇಶದೆಲ್ಲೆಡೆ ಕೋಮುದ್ವೇಷ ಹರಡುವ ಕೆಲಸ ನಿರಂತರವಾಗಿ ಎಗ್ಗಿಲ್ಲದೆ ನಡೆಯುತ್ತಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಇದು ಮಿತಿಮೀರಿ ಹೋಗಿರುವುದು ನಾವು ಕಾಣುತ್ತಿದ್ದೇವೆ. ಈ ಸಂದರ್ಭದಲ್ಲಿ ನಾಡಿನ ಭಾವೈಕ್ಯತೆಯ ಪರಂಪರೆಯನ್ನು ಎತ್ತಿ ಹಿಡಿದು ಸೌಹಾರ್ದತೆಯ ಸಂದೇಶವನ್ನು ಸಾರುವ ಕಾರ್ಯಕ್ರಮಗಳು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸುನ್ನೀ ಸ್ಪೂಡೆಂಟ್ಸ್ ಫೆಡರೇಷನ್ ರಾಜ್ಯದ ಇಪ್ಪತ್ತು ಪ್ರಮುಖ ಪಟ್ಟಣಗಳಲ್ಲಿ 'ಮನುಷ್ಯ ಮನಸ್ಸುಗಳನ್ನು ಪೋಣಿಸುವ' ಎಂಬ ಘೋಷ ವಾಕ್ಯದೊಂದಿಗೆ ಹಿಂದೂ.ಮುಸ್ಲಿಮ್.ಕ್ರೈಸ್ತ ಹಾಗೂ ಇನ್ನಿತರ ಜಾತಿ ಧರ್ಮಗಳ ನಾಯಕರನ್ನು ಸೇರಿಸಿ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ 'ಸೌಹಾರ್ದ ನಡಿ...