ಮತ್ತೂಮ್ಮೆ ಡ್ರೋನ್ ಪ್ರತಾಪ್ ಕಥೆಯನ್ನು ನೆನಪಿಸುತ್ತಿರುವ ನೊಂದ ವಿದ್ಯಾರ್ಥಿ ಡಾ. ಗಗನ್ ಕುಬೇರ್..
ಮತ್ತೂಮ್ಮೆ ಡ್ರೋನ್ ಪ್ರತಾಪ್ ಕಥೆಯನ್ನು ನೆನಪಿಸುತ್ತಿರುವ ನೊಂದ ವಿದ್ಯಾರ್ಥಿ ಡಾ. ಗಗನ್ ಕುಬೇರ್...... 2021 ರ ಆಲ್ ಇಂಡಿಯಾ ನೀಟ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದೂ... ಬ್ರಾಹ್ಮಣರಾಗಿರುವುದರಿಂದ ವೈದ್ಯಕೀಯ ಕಾಲೇಜೊಂದರಲ್ಲಿ ಸೀಟು ಸಿಗದೆ ಅನ್ಯಾಯಕ್ಕೆ ಒಳಗಾದ ನೊಂದ ವಿದ್ಯಾರ್ಥಿ..... ಡಾ. ಗಗನ್ ಕುಬೇರ್...... ಇದಕ್ಕೆ ಕಾರಣ ಮೀಸಲಾತಿ... ಎನ್ನುವ ಅವಸರದ ಸುದ್ದಿಯೊಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗುತ್ತದೆ..... ಕೂಡಲೆ ಸಾಮಾಜಿಕ ಜಾಲತಾಣ ಹಾಗೂ ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಅವಸರವಾಗಿ ಈ ಸುದ್ದಿ ಹರಿದಾಡಲಾರಂಬಿಸುತ್ತದೆ.... ಆದರೆ, ಇದು ಸತ್ಯ ಸಂಗತಿಯೇ... ಎಂದು ಹುಡುಕಿ ನೋಡಿದರೆ ಇಲ್ಲಿ ನೆನಪಾಗುವುದು ಡ್ರೋನ್ ಪ್ರತಾಪ್.... ಆ ಮನುಷ್ಯನ ಸುದ್ದಿ ಕೂಡ ಇದೇ ರೀತಿ ಹರಿದಾಡಿ ಒಬ್ಬ ಅರ್ಹನಲ್ಲದವನನ್ನು ಉಪ್ಪರಿಗೆ ಮೇಲೆ ಕೂರಿಸಿ ಬೆಪ್ಪರಾದವರು ನಾವುಗಳು.... ಈಗ ಅದೇ ತಪ್ಪು ಮತ್ತೆ ಮಾಡಲು ಹೊರಟಿರುವ ಕೆಲವರಿಗೆ ಒಂದು ಕಿವಿಮಾತು.... ಅವಸರವೇ ಅಪಘಾತಕ್ಕೆ ಕಾರಣವಲ್ಲವೇ... ? ಹಾಗಾಗಿ ತಾಳ್ಮೆಯಿಂದ 2021 ರ ನೀಟ್ ಪರೀಕ್ಷೆಯ ಸ್ಥಾನ(RANK) ಪಟ್ಟಿಯನ್ನು ಪರಿಶೀಲಿಸಿ ನೋಡಿ.... ಅಲ್ಲಿ ಡಾ. ಗಗನ್ ಕುಬೇರ್ ಹೆಸರು ಇದ್ದ ಹಾಗೆ ಇಲ್ಲ..... ಆದರೂ ಒಂದು ವಿನಂತಿ ನನ್ನಿಂದ ಹುಡುಕುವ ವಿಚಾರವಾಗಿ ತಪ್ಪಾಗಿದ್ದು ಡಾ. ಗಗನ್ ಕುಬೇರ್ ರವರು ಪ್ರಥಮ ಸ್ಥಾನ ಪಡೆದಿರುವುದು ನಿಜವಾಗಿದ್ದರೆ ದಯವಿಟ್ಟು ಅದರ ವಿವರವನ್ನು ...