Posts

Showing posts from September, 2022

ಶೃಂಗೇರಿ:- ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಗನ್ನಾಥ್ ಅವರು ಅನಾರೋಗ್ಯದಿಂದಾಗಿ ಇಂದು ಕೊನೆಯುಸಿರೆಳೆದಿದ್ದಾರೆ

Image
  ಶೃಂಗೇರಿ:- ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಗನ್ನಾಥ್ ಅವರು ಅನಾರೋಗ್ಯದಿಂದಾಗಿ ಇಂದು ಕೊನೆಯುಸಿರೆಳೆದಿದ್ದಾರೆ . ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಕಳೆದ ಒಂದು ವರ್ಷದಿಂದ ಕಾನ್ಸ್ಟೇ ಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಜಗನ್ನಾಥ್ ಪೂಜಾರಿ ( 29 ) ಅವರು ಅನಾರೋಗ್ಯದಿಂದಾಗಿ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದರು, ಅವರು ಇಂದು ಮುಂಜಾನೆ 3 : 45 ರ ಸುಮಾರಿಗೆ ವಿಧಿವಶರಾಗಿದ್ದಾರೆ . ಮೃತರ ಸಾವಿನ ಕುರಿತು ಸಹೋದ್ಯೋಗಿಗಳು ಹಾಗೂ ಶೃಂಗೇರಿ ಠಾಣೆಯ ಅಧಿಕಾರಿಗಳು ಬೇಸರವನ್ನು ವ್ಯಕ್ತಪಡಿಸಿದ್ದು , ಸಂತಾಪ ಸೂಚಿಸಿದ್ದಾರೆ . ಮೃತ ಜಗನ್ನಾಥ್ ಪೂಜಾರಿ ಅವರು ಮೂಲತಃ ಬಿಜಾಪುರದವರಾಗಿದ್ದರು. 🖋 ವೀರಮಣಿ ಬಾಳೆಹೊನ್ನುರು

ಕೊಪ್ಪ,ನಾಳೆ ಆಟೋ ಓಡಾಟ ಇಲ್ಲ,

Image
  ಕೊಪ್ಪ ಆಟೋ ಚಾಲಕ ದೀಪುರವರ, ಅನುಮಾನಸ್ಪದ ಸಾವು ಖಂಡಿಸಿ ಆಟೋ ಚಾಲಕರು ಹಾಗೂ ಮಾಲೀಕರು ನಾಳೆ(27/09/2022)ರಂದು, ಒಂದು ದಿನ ಅಂದರೆ ಮಂಗಳವಾರ ಯಾವುದೇ ಆಟೋಗಳು ರಸ್ತೆಗೆ ಇಳಿಯದೆ ಪ್ರತಿಭಟನೆ ಕೈಗೊಳ್ಳಲಾಗುವುದು. ಎಂದು ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷರು ತಿಳಿಸಿರುತ್ತಾರೆ. ಆಗಸ್ಟ್‌ 19 ರಂದು ಕೊಪ್ಪ ನಗರದಲ್ಲಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಪ್ರದೀಪ್ ಮಾರ್ಗಮಧ್ಯದಲ್ಲಿ ಆಟೋ ನಿಲ್ಲಿಸಿ ನಾಪತ್ತೆಯಾಗಿದ್ದರು. ಅವರ ಪತ್ತೆಗಾಗಿ ಕುಟುಂಬಸ್ಥರು, ಸ್ಥಳೀಯರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಎರಡು ದಿನಗಳ ಬಳಿಕ ಚೌಕಿ ಸ್ಮಶಾನ ಸಮೀಪದ ಮುಸುರೇಹಳ್ಳದಲ್ಲಿ ಪ್ರದೀಪ್ ಆವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. 🖋 ಮಜೀದ್ ಕೊಪ್ಪ 

ಬೆಂಗಳೂರಲ್ಲಿ ಅರಳಿದ ಮಲೆನಾಡು ಪ್ರತಿಭೆ,ಪಾಝಿಲ್ ರೆಹಮಾನ್,ಸಣ್ಣಕೇರೆ

Image
  ಬೆಂಗಳೂರಲ್ಲಿ ಅರಳಿದ ಮಲೆನಾಡು ಪ್ರತಿಭೆ: ಕ್ರೀಡೆ ವ್ಯಕ್ತಿಯನ್ನು ದೈಹಿಕವಾಗಿ ಹಾಗು ಅಷ್ಟೇ ಮಾನಸಿಕವಾಗಿ ಸದೃಢಗೊಳಿಸುವ ಕಲೆ, ಕ್ರೀಡೆ ಸಾಮಾನ್ಯವಾಗಿ ಎಲ್ಲರಿಗೂ ಒಲಿಯುವುದಿಲ್ಲ ಅದಕ್ಕೆ ನಿರಂತರ ಶ್ರಮ ಹಾಗು ಏಕಾಗ್ರತೆ ಹಾಗು ಗುರಿ ತಲುಪುವ ಸಾಮರ್ಥ್ಯ ಅಗತ್ಯ. ಅದರಲ್ಲೂ Weight Lifting 'ಭಾರ ಎತ್ತುವ ಕ್ರೀಡೆ' ಗಂತೂ ಗಟ್ಟಿ ಪೈಲ್ವಾನರೇ ಬೇಕು, ಏಕೆಂದರೆ ಅತಿಯಾದ ಭಾರ ಎತ್ತುವ ಸಾಮರ್ಥ್ಯ ಎಲ್ಲರಿಗೂ ದಕ್ಕುವಂತದ್ದಲ್ಲ ಆದರೆ ಈ ಅಸಾಮಾನ್ಯ ಕ್ರೀಡೆಯನ್ನು ಸಾಧಿಸಿ ಮಲೆನಾಡಿನ ಕೀರ್ತಿಯನ್ನು ದೂರದ ಬೆಂಗಳೂರಲ್ಲಿ ಎತ್ತಿಹಿಡಿದಿದ್ದಾರೆ ಕೊಪ್ಪ ತಾಲ್ಲೂಕಿನ ಸಣ್ಣಕೆರೆಯ ಫಾಝಿಲ್ ರೆಹಮಾನ್ ಎಂಬ ಯುವಕ. ಇತ್ತೀಚಿಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಡಳಿತ ಹಾಗು ಜಿಲ್ಲಾ ಪಂಚಾಯತ್ 'ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ನಗರ ಜಿಲ್ಲೆ ಹಾಗು ಕರ್ನಾಟಕ ಕ್ರೀಡಾ ಪ್ರಾಧಿಕಾರ ಬೆಂಗಳೂರು ಇದರ ಸಹಯೋಗದಲ್ಲಿ ನಡೆದ 2022-23 ನೇ ಸಾಲಿನ ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟದ Weight Lifting ನಲ್ಲಿ ಭಾಗವಹಿಸಿ ಪ್ರಥಮ ಪ್ರಶಸ್ತಿ ತಮ್ಮದಾಗಿಸಿ ಜಿಲ್ಲೆಗೆ ಹಾಗು ಕೊಪ್ಪ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. ಮುಂದಿನ ರಾಜ್ಯ ಮಟ್ಟದ ವಿಭಾಗವಾಗಿ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದು ಕೊಂಡಿದ್ದಾರೆ. ಅಪಾರವಾದ ಶ್ರದ್ಧೆ ಹಾಗು ಕಠಿಣ ಪರಿಶ್ರಮದ ಮೂಲಕ ಈ ಸಾಧನೆಯನ್ನು ಮಾಡಿದ...

ಬೆಳೆಹಾನಿ ಹಾಗೂ ಮನೆ ಹಾನಿ ಪರಿಹಾರಕ್ಕೆ 3600ಕೋಟಿ ರೂ ಅನುದಾನ ಬಿಡುಗಡೆಗೆ.

Image
  ಬೆಳೆಹಾನಿ ಹಾಗೂ ಮನೆ ಹಾನಿ ಪರಿಹಾರಕ್ಕೆ 3600ಕೋಟಿ ರೂ ಅನುದಾನ ಬಿಡುಗಡೆಗೆ ಸರ್ಕಾರ ಅಸ್ತು.  ಬೆಂಗಳೂರು:-ಕರ್ನಾಟಕದಲ್ಲಿ ಮಳೆಯಿಂದ ಉಂಟಾಗಿರುವ ಬೆಳೆ ಹಾನಿ, ಮನೆ ಹಾನಿ ಹಾಗೂ ಮೂಲ ಸೌಕರ್ಯಗಳ ಹಾನಿಯನ್ನು, ಹಾಗೂ ಕುಂದು ಕೊರೆತೆಗಳನ್ನು ಒಟ್ಟು 3600 ಕೋಟಿ ರು.ಗಳಿಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಸದನದಲ್ಲಿ ಸೋಮವಾರ ಮಳೆ ಹಾನಿ ವಿಷಯದ ಮೇಲಿನ ಸುದೀರ್ಘ ಚರ್ಚೆಯಲ್ಲಿ ಮಾತನಾಡಿದ ಸಿ ಎಂ, ಮಳೆಯಿಂದಾಗಿ ಉಂಟಾಗಿರುವ ಅಪಾರ ಹಾನಿ ಸರಿಪಡಿಸಲು ಈ ದೊಡ್ಡ ಮೊತ್ತದ ಅಗತ್ಯವಿದೆ , ಬಜೆಟ್‌ ಪೂರಕ ಅಂದಾಜಿನಲ್ಲಿ ಇದಕ್ಕೆ ಸದನದ ಒಪ್ಪಿಗೆ ಪಡೆದು ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದರು. ಈಗಿನ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಈ ಬಾರಿ ಮಳೆಯಿಂದಾಗಿ ಒಟ್ಟು 10.06 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಬೆಳೆ ಹಾನಿ ಸಂಬಂಧ ರೈತರಿಗೆ ಸೂಕ್ತ ಪರಿಹಾರ ಒದಗಿಸಲು 1550 ಕೋಟಿ ರು. ಅನುದಾನ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಅದೇ ರೀತಿ ಈ ವರ್ಷ 42,040ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಇವುಗಳಿಗೆ ಪರಿಹಾರ ಒದಗಿಸಲು ಅಂದಾಜು 850 ಕೋಟಿ ರು. ಅಗತ್ಯವಿದೆ ಎಂದರು. ಜೊತೆಗೆ ಹಾಳಾಗಿರುವ ರಸ್ತೆ, ಸೇತುವೆ ಸೇರಿದಂತೆ ಮೂಲ ಸೌಕರ್ಯ ದುರಸ್ತಿ ಕಾರ್ಯಕ್ಕೆ 1200 ಕೋಟಿ ರು. ಬೇಕೆಂದು ಅಂದಾಜು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದ...

ಶಾಲಾ ವಾಹನದಲ್ಲಿ ಮೃತಪಟ್ಟ ಬಾಲಕಿ, ಶಾಲೆ ಮುಚ್ಚುವಂತೆ ಕತಾರ್ ಶಿಕ್ಷಣ ಸಚಿವಾಲಯ ಆದೇಶ,!

Image
ಶಾಲಾ ವಾಹನದಲ್ಲಿ ಮೃತಪಟ್ಟ ಬಾಲಕಿ, ಶಾಲೆ ಮುಚ್ಚುವಂತೆ ಕತಾರ್ ಶಿಕ್ಷಣ ಸಚಿವಾಲಯ ಆದೇಶ,! ಕತಾರ್, ದೋಹಾ: ಚಾಲಕನ‌ ನಿರ್ಲಕ್ಷ್ಯದಿಂದ ಶಾಲಾ ವಾಹನದಲ್ಲೇ 4 ವರ್ಷದ ಬಾಲಕಿ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಶಾಲೆಯನ್ನು ಮುಚ್ಚುವಂತೆ ಕತಾರ್ ಶಿಕ್ಷಣ ಸಚಿವಾಲಯ ಆದೇಶಿಸಿದೆ. ಕೇರಳದ ಕೋಟ್ಟಯಂ ಮೂಲದ ಬಾಲಕಿ ಮಿನ್ಸಾ ಮರಿಯಂ ಜಾಕೋಬ್ ಕಲಿಯುತ್ತಿದ್ದ ದೋಹಾದ ಅಲ್ ವಕ್ರಾದ ಸ್ಪ್ರಿಂಗ್ ಫೀಲ್ಡ್ ಕಿಂಡರ್ ಗಾರ್ಡನ್ ಶಾಲೆಯನ್ನು ಮುಚ್ಚುವಂತೆ ಸಚಿವಾಲಯ ಆದೇಶಿಸಿದೆ. ಈ ಶಾಲೆಯ ಎಲ್‌ಕೆಜಿಯಲ್ಲಿ ಕಲಿಯುತ್ತಿದ್ದ ಬಾಲಕಿಯ ಸಾವಿನಲ್ಲಿ ಶಾಲೆಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಈ ಕ್ರಮ‌ ಕೈಗೊಳ್ಳಲಾಗಿದೆ. ದೋಹಾದಲ್ಲಿ ನೆಲೆಸಿರುವ ಕೋಟ್ಟಯಂನ ಚಿಙವನಂ ನಿವಾಸಿ ಅಭಿಲಾಷ್ ಚಾಕೋ, ಸೌಮ್ಯ ದಂಪತಿಯ ಪುತ್ರಿ ಕಳೆದ ಆದಿತ್ಯವಾರ ಶಾಲಾ ವಾಹನದಲ್ಲೇ ಮೃತಪಟ್ಟಿದ್ದಳು. ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ವೇಳೆ ಮಗು ಬಸ್ಸಿನಲ್ಲೇ ನಿದ್ರೆಗೆ ಜಾರಿತ್ತು. ಆದರೆ ಇದು ಗಮನಕ್ಕೆ ಬಾರದೇ ವಾಹನದ ಸಿಬ್ಬಂದಿ ಲಾಕ್ ಮಾಡಿದ್ದ. 11.30ರ ಸುಮಾರಿಗೆ ಮತ್ತೆ ಕರ್ತವ್ಯಕ್ಕೆ ಬಂದಾಗ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಬಾಲಕಿ ಬದುಕುಳಿಯಲಿಲ್ಲ. ಘಟನೆ ಸಂಬಂಧ ಖೇದ ವ್ಯಕ್ತಪಡಿಸಿದ್ದ ಶಿಕ್ಷಣ ಸಚಿವೆ ಬುತೈನಾ ಬಿಂತ್ ಅಲಿ ಅಲ್ ನುಐಮಿ ಬಾಲಕಿಯ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಲ್ಲದೇ, ಘಟನೆಗೆ ಕಾರಣ...

ಮೇಲ್ಪಾಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಸಾರಥಿಯಾಗಿ ಕೇಶವತ್ತಿ ಕೆ.ಆರ್.ಪ್ರಕಾಶ್ ಆಯ್ಕೆ,

Image
  ಮೇಲ್ಪಾಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಸಾರಥಿಯಾಗಿ ಕೇಶವತ್ತಿ ಕೆ.ಆರ್.ಪ್ರಕಾಶ್ ಅವಿರೋಧ ಆಯ್ಕೆ, ಬಾಳೆಹೊನ್ನೂರು:- ಮೇಲ್ಪಾಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಚುನಾವಣೆಯು ಸಂಘದ ಆವರಣದಲ್ಲಿ ಸೆ .8 ರಂದು ನಡೆಯಿತು . ಸಂಘದ ನೂತನ ಅಧ್ಯಕ್ಷರಾಗಿ ಕೇಶವತ್ತಿ ಕೆ.ಆರ್‌.ಪ್ರಕಾಶ್‌ರವರು ಅವಿರೋಧವಾಗಿ ಆಯ್ಕೆ ಗೊಂಡರು . ಜಿಲ್ಲಾ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ರವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು . ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎ.ಸಿ.ಕೃಷ್ಣಮೂರ್ತಿ ಕರ್ಕೇಶ್ವರಗ್ರಾಮಪಂಚಾಯಿತಿ ಅಧ್ಯಕ್ಷ ಕೇಶವತ್ತಿ ಕೆ.ಎಸ್.ರಾಜೇಶ್ , ಸಂಘದ ನಿರ್ದೇಶಕರುಗಳಾದ ಕೆ.ಸಿ.ಜಯಪಾಲ , ಹೆಚ್ . ಚಂದ್ರಶೇಖರ್‌ , ಏ.ಜಿ.ರಾಜೇಂದ್ರ ಜೋಯಿಸ್ , ಎಂ.ನಾರಾಯಣ , ಹೆಚ್.ಟಿ.ಮಂಜಪ್ಪಗೌಡ , ಜೀರುಳ್ಳಿ ಮಂಜುನಾಥ್ , ರೇವತಿ ಕೃಷ್ಣಮೂರ್ತಿ , ಹೊನ್ನಮ್ಮ , ಸಣ್ಣಯ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು . 🖊️ವೀರಮಣಿ ಬಾಳೆಹೊನ್ನುರು

ಜಯಪುರ : ಅಕ್ರಮ ಗೋಮಾಂಸ ಶೇಖರಣೆ, ಗೋಮಾಂಸ ವಶಕ್ಕೆ ಪಡೆದ ಪೊಲೀಸರು

Image
  ಕೊಪ್ಪ:- ತಾಲೂಕಿನ ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿಪುರ ಷರೀಫ್ ಮನೆಗೆ ದಾಳಿ ನಡೆಸಿದ ಪೊಲೀಸರು , ಮನೆಯಲ್ಲಿ ಅಕ್ರಮವಾಗಿ ಶೇಖರಣೆ ಮಾಡಲಾಗಿದ್ದ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ . ಈ ಕಾರ್ಯಾಚರಣೆಯು ಜಯಪುರ ಪೊಲೀಸ್ ಠಾಣೆಯ ಪಿಎಸೈ ಜ್ಯೋತಿ ಹಾಗೂ ಎಎಸೈ ನಿಂಗೇಗೌಡ ಅವರ ತಂಡ ನಡೆಸಿದ್ದು ಪೊಲೀಸರು ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ . ಆರೋಪಿಯನ್ನು ಬಂಧಿಸಿದ್ದಾರೆ, ಗೋಮಾಂಸವನ್ನು ಶೇಖರಣೆ ಮಾಡಲಾಗಿದ್ದ ಮನೆಗೆ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ . 🖋 ವೀರಮಣಿ ಬಾಳೆಹೊನ್ನುರು

ಕಿಚ್ಚ ಸುದೀಪ್ ರವರ ಜನುಮದಿನದ ಪ್ರಯುಕ್ತ ಸಾಗರದ ಗಣಪತಿ ಹಾಗೂ ಮಾರಿಕಾಂಬಾ ದೇವಿಯ ದೇವಸ್ಥಾನದಲ್ಲಿ ಸುದೀಪ್ ರವರ ಹೆಸರಿನಲ್ಲಿ ಪೂಜೆ ಮಾಡಿಸಲಾಯಿತು,

Image
  ಕನ್ನಡದ ಖ್ಯಾತ ಚಿತ್ರ ನಟ ಕಿಚ್ಚ ಸುದೀಪ್ ರವರ ಜನುಮದಿನದ ಪ್ರಯುಕ್ತ ಸಾಗರದ ಗಣಪತಿ ಹಾಗೂ ಮಾರಿಕಾಂಬಾ ದೇವಿಯ ದೇವಸ್ಥಾನದಲ್ಲಿ ಸುದೀಪ್ ರವರ ಹೆಸರಿನಲ್ಲಿಪೂಜೆಮಾಡಿಸಲಾಯಿತು  ಸಾಗರ:- ರೆಡ್ ಕ್ರಾಸ್ ರಕ್ತ ಕೇಂದ್ರ ಉಪವಿಭಾಗೀಯ ಆಸ್ಪತ್ರೆ ಸಾಗರ ದಲ್ಲಿ ಸಾಗರ ತಾಲ್ಲೂಕು ಕಿಚ್ಚ ಸುದೀಪ್ ಸೇನಾ ಸಮಿತಿ (ರಿ) ಸಾಗರ ವತಿಯಿಂದ ಬೃಹತ್ ರಕ್ತದಾನ ಶಿಬಿರವನ್ನು ನಡೆಸಲಾಯಿತು, ಈ ಸಂದರ್ಭದಲ್ಲಿ 50 ಕ್ಕೂ ಅಧಿಕ unit ಗಳನ್ನು ಸಂಗ್ರಹಿಸಲಾಯಿತು.ಇನ್ನೂ ಒಂದು ತಿಂಗಳ ಕಾಲ ಈ ಕಾರ್ಯಕ್ರಮವೂ ನೆಡೆಯುತ್ತದೆ.  . ಈ ಕಾರ್ಯಕ್ರಮದಲ್ಲಿ ಸಾಗರ ತಾಲ್ಲೂಕು ಕಿಚ್ಚ ಸುದೀಪ್ ಸೇನಾ ಸಮಿತಿ ಯ ಅಧ್ಯಕ್ಷರು ಮುತ್ತು ಸುನಿಲ್,  ಉಪಾಧ್ಯಕ್ಷರು ಸುದೀಪ್ ಕಿಚ್ಚ , ಕಾರ್ಯದರ್ಶಿ ಶಶಾಂಕ್. ಹಾಗೂ ರೋಟರಿ ರೆಡ್ ಕ್ರಾಸ್ ರಕ್ತ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ ಬಿ ಜಿ ಸಂಗಮ್, ಮುಖ್ಯ ತಾಂತ್ರಿಕ ಸಿಬ್ಬಂದಿ ಹರೀಶ್ ಕೆ ಬಿ, ಸಾರ್ವಜನಿಕ ಸಂಪರ್ಕ ಅಧಿಕಾರಿ  ಸುನೀಲ್ ಕುಮಾರ್ ಎಸ್ , ಆರ್ . ಅರುಣ್ ಸಾಗರ್. ಸಂತೋಷ್ ಕೆಜಿ. ಇತರ ಸದಸ್ಯರು  ಉಪಸ್ಥಿತರಿದ್ದರು .