ಮಣಿಪಾಲ ಆರೋಗ್ಯ ಕಾರ್ಡ್–2026 ನೋಂದಣಿ ಆರಂಭ,ಆಗಸ್ಟ್ 31 ಕೊನೆಯ ದಿನ; ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗೆ ಸುವರ್ಣಾವಕಾಶ,
ಮಣಿಪಾಲ ಆರೋಗ್ಯ ಕಾರ್ಡ್–2026 ನೋಂದಣಿ ಆರಂಭ,ಆಗಸ್ಟ್ 31 ಕೊನೆಯ ದಿನ; ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗೆ ಸುವರ್ಣಾವಕಾಶ,
ಕೊಪ್ಪ, ಜುಲೈ 22:
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಪ್ರತಿಷ್ಠಿತ "ಮಣಿಪಾಲ ಆರೋಗ್ಯ ಕಾರ್ಡ್–2026" ಯೋಜನೆಯ ನೋಂದಣಿ ಆರಂಭಗೊಂಡಿದ್ದು, ಆಗಸ್ಟ್ 31, 2026 ನೋಂದಣಿಗೆ ಕೊನೆಯ ದಿನವಾಗಿದೆ. ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆಯುವಂತೆ ಆಸ್ಪತ್ರೆ ಮನವಿ ಮಾಡಿದೆ.
ಕಳೆದ 26 ವರ್ಷಗಳಿಂದ ಯಶಸ್ವಿಯಾಗಿ ಜಾರಿಯಲ್ಲಿರುವ ಈ ಯೋಜನೆ, ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದು, ರಾಜ್ಯದ ಅತ್ಯಂತ ವಿಶ್ವಾಸಾರ್ಹ ಆರೋಗ್ಯ ಯೋಜನೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಮಣಿಪಾಲದ ಸಂಸ್ಥಾಪಕ ಡಾ. ಟಿ.ಎಂ.ಎ. ಪೈ ಅವರ ಗ್ರಾಮೀಣ ಜನರಿಗೂ ಉತ್ತಮ ಆರೋಗ್ಯ ಸೇವೆ ತಲುಪಬೇಕು ಎಂಬ ದೂರದೃಷ್ಟಿಯ ಫಲವಾಗಿ ಯೋಜನೆ ಆರಂಭಗೊಂಡಿದೆ.
2000ರಲ್ಲಿ ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರ ಮಾರ್ಗದರ್ಶನದಲ್ಲಿ ಆರಂಭವಾದ ಈ ಯೋಜನೆ ಮೊದಲ ವರ್ಷದಲ್ಲಿ 3,200 ಕುಟುಂಬಗಳೊಂದಿಗೆ ಶುರುವಾಗಿತ್ತು. ಪ್ರಸ್ತುತ ಸುಮಾರು 2 ಲಕ್ಷ ಕುಟುಂಬಗಳು ಸದಸ್ಯತ್ವ ಹೊಂದಿದ್ದು, 6.5 ಲಕ್ಷಕ್ಕೂ ಅಧಿಕ ಸದಸ್ಯರು ಇದರ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.
ಯೋಜನೆಯಡಿ ವಾರ್ಷಿಕ ₹350ಕ್ಕೆ ವೈಯಕ್ತಿಕ, ₹700ಕ್ಕೆ ಕುಟುಂಬ, ಹಾಗೂ ₹900ಕ್ಕೆ ಕುಟುಂಬ ಪ್ಲಸ್ ಸದಸ್ಯತ್ವ ಲಭ್ಯವಿದೆ.
ಸದಸ್ಯರಿಗೆ ತಜ್ಞ ವೈದ್ಯರ ಸಮಾಲೋಚನಾ ಶುಲ್ಕದಲ್ಲಿ 50%, ಪ್ರಯೋಗಾಲಯ ಪರೀಕ್ಷೆಗಳಲ್ಲಿ 25%, ರೇಡಿಯಾಲಜಿ ಹಾಗೂ ಓಪಿಡಿ ಸೇವೆಗಳಲ್ಲಿ 20%, ಡಯಾಲಿಸಿಸ್ ಚಿಕಿತ್ಸೆಗೆ ₹100, ಹಾಗೂ ಜನರಲ್ ವಾರ್ಡ್ ಒಳರೋಗಿ ಸೇವೆಗಳಲ್ಲಿ 25% ವರೆಗೆ ರಿಯಾಯಿತಿ ದೊರೆಯಲಿದೆ.
ಈ ಸೌಲಭ್ಯಗಳು ಮಣಿಪಾಲ, ಉಡುಪಿ, ಕಾರ್ಕಳ, ಮಂಗಳೂರು, ಅತ್ತಾವರ, ಕಟೀಲು ಹಾಗೂ ಗೋವಾದ ಮಣಿಪಾಲ ಸಮೂಹದ ವಿವಿಧ ಆಸ್ಪತ್ರೆಗಳಲ್ಲಿ ಲಭ್ಯವಿವೆ.
ಸದಸ್ಯತ್ವದ ಮಾಹಿತಿಗಾಗಿ 88675 79797 ಸಂಖ್ಯೆಗೆ ಮಿಸ್ ಕಾಲ್ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ 99808 54700 ಅಥವಾ 0820-2923748 ಸಂಖ್ಯೆಗೆ ಸಂಪರ್ಕಿಸಬಹುದು. ಅಧಿಕೃತ ಪ್ರತಿನಿಧಿಗಳು ಹಾಗೂ ಕಸ್ತೂರ್ಬಾ ಆಸ್ಪತ್ರೆಯ ಮಾಹಿತಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ.
ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಕಸ್ತೂರ್ಬಾ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಸಚಿನ್ ಕಾರಂತ್, ವ್ಯವಸ್ಥಾಪಕ ಮೋಹನ್ ಶೆಟ್ಟಿ, ಕೊಪ್ಪ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹರ್ಷ, ಪತ್ರಕರ್ತರ ಸಂಘದ ಅಧ್ಯಕ್ಷ ಜಿನೇಶ್ ಇರ್ವತ್ತೂರು ಹಾಗೂ ಪ್ರತಿನಿಧಿ ಅನಿಲ್ ಉಪಸ್ಥಿತರಿದ್ದರು.
🖋️ ರೆಹಮಾನ್ ಸಣ್ಣಕೇರೆ
ವಾರ್ತಾ ಸಾರಥಿ ಡಿಜಿಟಲ್ ನ್ಯೂಸ್


Comments
Post a Comment