ಉಚಿತ ನೇತ್ರ ತಪಾಸಣಾ ಶಿಬಿರ: 68ನೇ ಹುಟ್ಟುಹಬ್ಬದ ಅಂಗವಾಗಿ 35ನೇ ಉಚಿತ ಆರೋಗ್ಯ ಸೇವೆ






 ಉಚಿತ ನೇತ್ರ ತಪಾಸಣಾ ಶಿಬಿರ: 68ನೇ ಹುಟ್ಟುಹಬ್ಬದ ಅಂಗವಾಗಿ 35ನೇ ಉಚಿತ ಆರೋಗ್ಯ ಸೇವೆ

ಕೊಪ್ಪ, ಜುಲೈ 1: ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಅಮ್ಮ ಫೌಂಡೇಶನ್ ವತಿಯಿಂದ ಸಂಸ್ಥಾಪಕ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಅವರ 68ನೇ ಹುಟ್ಟುಹಬ್ಬದ ಪ್ರಯುಕ್ತ 35ನೇ ಉಚಿತ ಆರೋಗ್ಯ ಸೇವೆಯಾಗಿ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.

ಈ ಶಿಬಿರವು ಜುಲೈ 6, 2026 (ಸೋಮವಾರ) ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 2.30ರವರೆಗೆ ನಡೆಯಲಿದ್ದು, ನೋಂದಣಿ ಪ್ರಕ್ರಿಯೆ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.00ರವರೆಗೆ ಇರಲಿದೆ.



ಶಿಬಿರದಲ್ಲಿ ಪ್ರಸಾದ್ ನೇತ್ರಾಲಯ, ಸುಬ್ರಹ್ಮಣ್ಯ ಹಾಗೂ ಸ್ನೇಹಾಲಯ ಕಣ್ಣಿನ ಆಸ್ಪತ್ರೆ, ಉಡುಪಿಯ ತಜ್ಞ ವೈದ್ಯರು ಭಾಗವಹಿಸಿ ಕಣ್ಣಿನ ತಪಾಸಣೆ ನಡೆಸಲಿದ್ದಾರೆ. ಅಗತ್ಯವಿರುವ ಫಲಾನುಭವಿಗಳಿಗೆ ಉಚಿತ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗುವುದು. ಅಲ್ಲದೆ ವೈದ್ಯರ ಸಲಹೆಯಂತೆ ಕನ್ನಡಕಗಳನ್ನೂ ವಿತರಿಸಲಾಗುವುದು.

ಈ ಆರೋಗ್ಯ ಶಿಬಿರವು ಕೊಪ್ಪ ತಾಲೂಕಿನ ಹರಂದೂರ ಗ್ರಾಮದ ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಚಿತ ಆರೋಗ್ಯ ಸೇವೆಯ ಪ್ರಯೋಜನ ಪಡೆದುಕೊಳ್ಳುವಂತೆ ಅಮ್ಮ ಫೌಂಡೇಶನ್ ಮನವಿ ಮಾಡಿದೆ.

🖋️ ರೆಹಮಾನ್ ಸಣ್ಣಕೇರೆ 
ವಾರ್ತಾ ಸಾರಥಿ ಡಿಜಿಟಲ್ ನ್ಯೂಸ್

Comments

Popular posts from this blog

ಕೊಪ್ಪ ಬಸ್ ನಿಲ್ದಾಣದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ – ಕೆಡಿಪಿ ಸದಸ್ಯ ಮಹಮ್ಮದ್ ಸಾದಿಕ್ ಅವರ ಸಮಯೋಚಿತ ಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ,

ಆಪತ್ತಿನ ಕ್ಷಣದಲ್ಲಿ ಜೀವ ಉಳಿಸಿದ ಕೊಪ್ಪ ಅಗ್ನಿಶಾಮಕ ದಳ – ಸಮಯಪ್ರಜ್ಞೆಯ ಕಾರ್ಯಾಚರಣೆಗೆ ಸಾರ್ವಜನಿಕರ ಮೆಚ್ಚು

ಕೊಪ್ಪ,ಅಕ್ರಮವಾಗಿ ಜಾನುವಾರು ಸಾಗಾಟ ಆರೋಪ: ಇಬ್ಬರ ವಶ, ವಾಹನ ಜಪ್ತಿ,