ಶಿವಮೊಗ್ಗ–ಶೃಂಗೇರಿ ರೈಲು ಮಾರ್ಗದ FLSನಲ್ಲಿ ಕೊಪ್ಪ ಮಾರ್ಗ ಪರಿಗಣನೆಗೆ ಡಿಆರ್‌ಎಂಗೆ ಮನವಿ

ಸುಧಾಕರ ಎಸ್ ಶೆಟ್ಟಿ ರಾಷ್ಟ್ರೀಯ ವಕ್ತಾರರು ಜೆಡಿಎಸ್, ಅಧ್ಯಕ್ಷರು ಅಮ್ಮ ಫೌಂಡೇಶನ್ 

ಬಿ ಲಿಂಗರಾಜ್, ಅಧ್ಯಕ್ಷರು ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ,

ಮಹಾವೀರ್ ಬನ್ಸಾಲಿ, ಸದಸ್ಯರು
DRUCC
ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ"

    



 

ಶಿವಮೊಗ್ಗ–ಶೃಂಗೇರಿ ರೈಲು ಮಾರ್ಗದ FLSನಲ್ಲಿ ಕೊಪ್ಪ ಮಾರ್ಗ ಪರಿಗಣನೆಗೆ ಡಿಆರ್‌ಎಂಗೆ ಮನವಿ,


ಕೊಪ್ಪ, ಜುಲೈ 10: ಶಿವಮೊಗ್ಗ–ಶೃಂಗೇರಿ ಹೊಸ ರೈಲ್ವೆ ಯೋಜನೆಯ ಅಂತಿಮ ಸ್ಥಳ ನಿರ್ಧಾರ ಸಮೀಕ್ಷೆ (Final Location Survey - FLS) ವೇಳೆ ಶಿವಮೊಗ್ಗ–ಭದ್ರಾವತಿ–ಮುತ್ತಿನಕೊಪ್ಪ–ನರಸಿಂಹರಾಜಪುರ–ಬಾಳೆಹೊನ್ನೂರು–ಜೈಪುರ–ಕೊಪ್ಪ–ಹರಿಹರಪುರ–ಶೃಂಗೇರಿ ಮಾರ್ಗವನ್ನು ಸಮಗ್ರವಾಗಿ ಪರಿಗಣಿಸುವಂತೆ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ (DRM) ಮನವಿ ಸಲ್ಲಿಸಲಾಗಿದೆ.

ಇತ್ತೀಚೆಗೆ ಡಿಆರ್‌ಎಂ ಅವರೊಂದಿಗೆ ನಡೆದ ಸಭೆಯಲ್ಲಿ, FLS ಹಂತದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಮಲೆನಾಡಿನ ಜನರ ಪರವಾಗಿ ರಾಷ್ಟ್ರೀಯ ವಕ್ತಾರರು ಜೆಡಿಎಸ್ ಹಾಗೂ ಅಮ್ಮ ಫೌಂಡೇಶನ್ ಅಧ್ಯಕ್ಷರಾದ ಸುಧಾಕರ ಎಸ್. ಶೆಟ್ಟಿ ಅವರು ಮನವಿ ಪತ್ರ ಸಲ್ಲಿಸಿದ್ದಾರೆ.



ಮನವಿ ಪತ್ರದಲ್ಲಿ ಪ್ರಸ್ತಾವಿತ ಮಾರ್ಗದ ತಾಂತ್ರಿಕ, ಆರ್ಥಿಕ, ಸಾಮಾಜಿಕ ಹಾಗೂ ಪರಿಸರದ ಸಾಧ್ಯತೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಪರಿಗಣನೆ ನೀಡುವಂತೆ ಕೋರಲಾಗಿದೆ.

ಪ್ರಸ್ತಾವಿತ ಮಾರ್ಗವು ಶಿವಮೊಗ್ಗ, ಭದ್ರಾವತಿ, ಮುತ್ತಿನಕೊಪ್ಪ, ನರಸಿಂಹರಾಜಪುರ, ಬಾಳೆಹೊನ್ನೂರು, ಜೈಪುರ, ಕೊಪ್ಪ, ಹರಿಹರಪುರ ಹಾಗೂ ಶೃಂಗೇರಿ ಸೇರಿದಂತೆ ಮಲೆನಾಡಿನ ಪ್ರಮುಖ ವ್ಯಾಪಾರ, ಶಿಕ್ಷಣ, ಧಾರ್ಮಿಕ ಹಾಗೂ ಆಡಳಿತ ಕೇಂದ್ರಗಳನ್ನು ಸಂಪರ್ಕಿಸುವುದರಿಂದ ಈ ಭಾಗದ ಅಭಿವೃದ್ಧಿಗೆ ಹೊಸ ದಿಕ್ಕು ದೊರೆಯಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೆ ರೈಲ್ವೆ ಹಾಗೂ ವಿಮಾನ ಸಂಪರ್ಕದ ಕೊರತೆ, ಕೈಗಾರಿಕೆಗಳ ಅಭಾವ ಮತ್ತು ಉದ್ಯೋಗಾವಕಾಶಗಳ ಕೊರತೆಯಿಂದ ಸಾವಿರಾರು ಯುವಕರು ಪ್ರತಿವರ್ಷ ನಗರಗಳಿಗೆ ವಲಸೆ ಹೋಗುತ್ತಿರುವುದನ್ನು ಗಮನಕ್ಕೆ ತರಲಾಗಿದೆ.

ಈ ರೈಲು ಮಾರ್ಗ ನಿರ್ಮಾಣಗೊಂಡರೆ ವಿದ್ಯಾರ್ಥಿಗಳಿಗೆ ಸುಲಭ ಸಂಚಾರ, ರೋಗಿಗಳಿಗೆ ಕಡಿಮೆ ವೆಚ್ಚದ ಪ್ರಯಾಣ, ರೈತರಿಗೆ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಅನುಕೂಲ, ಸಾರ್ವಜನಿಕರಿಗೆ ಸುರಕ್ಷಿತ ಸಾರಿಗೆ, ಧಾರ್ಮಿಕ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ಮತ್ತು ಮಲೆನಾಡಿನ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಭದ್ರ ಬುನಾದಿ ಸಿಗಲಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಇದಲ್ಲದೆ ಉತ್ತಮ ರೈಲ್ವೆ ಸಂಪರ್ಕದಿಂದ ಕೃಷಿ ಆಧಾರಿತ ಕೈಗಾರಿಕೆಗಳು, ಆಹಾರ ಸಂಸ್ಕರಣಾ ಘಟಕಗಳು, ಲಾಜಿಸ್ಟಿಕ್ಸ್ ಪಾರ್ಕ್‌ಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮಾಹಿತಿ ತಂತ್ರಜ್ಞಾನ (IT) ವಲಯದಲ್ಲಿ ಹೂಡಿಕೆ ಹೆಚ್ಚಾಗಿ, ಸಾವಿರಾರು ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಶಿವಮೊಗ್ಗ–ಭದ್ರಾವತಿ–ಮುತ್ತಿನಕೊಪ್ಪ–ನರಸಿಂಹರಾಜಪುರ–ಬಾಳೆಹೊನ್ನೂರು–ಜೈಪುರ–ಕೊಪ್ಪ–ಹರಿಹರಪುರ–ಶೃಂಗೇರಿ ಮಾರ್ಗವನ್ನು ಅಂತಿಮ ಸ್ಥಳ ನಿರ್ಧಾರ ಸಮೀಕ್ಷೆಯಲ್ಲಿ (FLS) ಸಮಗ್ರವಾಗಿ ಪರಿಗಣಿಸಿ ಅನುಷ್ಠಾನಗೊಳಿಸುವಂತೆ ಮನವಿ ಮಾಡಲಾಗಿದೆ.

ಈ ಮನವಿ ಪತ್ರದ ಪ್ರತಿಯನ್ನು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಹಾಗೂ ಉಡುಪಿ–ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಹ ಸಲ್ಲಿಸಲಾಗಿದೆ.


🖋️ ರೆಹಮಾನ್ ಸಣ್ಣಕೇರೆ 

ವಾರ್ತಾ ಸಾರಥಿ ಡಿಜಿಟಲ್ ನ್ಯೂಸ್ 

Comments

Popular posts from this blog

ಕೊಪ್ಪ ಬಸ್ ನಿಲ್ದಾಣದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ – ಕೆಡಿಪಿ ಸದಸ್ಯ ಮಹಮ್ಮದ್ ಸಾದಿಕ್ ಅವರ ಸಮಯೋಚಿತ ಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ,

ಆಪತ್ತಿನ ಕ್ಷಣದಲ್ಲಿ ಜೀವ ಉಳಿಸಿದ ಕೊಪ್ಪ ಅಗ್ನಿಶಾಮಕ ದಳ – ಸಮಯಪ್ರಜ್ಞೆಯ ಕಾರ್ಯಾಚರಣೆಗೆ ಸಾರ್ವಜನಿಕರ ಮೆಚ್ಚು

ಕೊಪ್ಪ,ಅಕ್ರಮವಾಗಿ ಜಾನುವಾರು ಸಾಗಾಟ ಆರೋಪ: ಇಬ್ಬರ ವಶ, ವಾಹನ ಜಪ್ತಿ,